
ಯಲ್ಲಾಪುರ : ಕರ್ನಾಟಕ ರಾಜ್ಯ ಧನಗರ ಗೌಳಿ ಪ್ರೊ-ಕಬ್ಬಡ್ಡಿ ಸೀಸನ್-2 ರಲ್ಲಿ ಪಾಂಡು ಭಾಗು ಸಿಂಧೆ ಇವರ ಮೊದಲ ವರ್ಷದ ಮಾಲೀಕತ್ವದಲ್ಲಿ ಹಾಗೂ ಧೂಳು ಸಿಂಧೆ (ಭಾರತೀಯ ಸೈನಿಕ ) ಇವರ ಅಧ್ಯಕ್ಷತೆಯಲ್ಲಿ ಮೂಡಿ ಬಂದಿರುವ ಸಿಂಧೆ ಸೋಲ್ಜರ್ಸ್ ಕರಡೊಳ್ಳಿ ತಂಡವು ದಿ 16,17 ಡಿಸೆಂಬರ್ 2024 ರಂದು ಕಿರವತ್ತಿ ಪ್ರೌಢ ಶಾಲೆ ಮೈದಾನದಲ್ಲಿ ನಡೆದ ರಾಜ್ಯ ಧನಗರ ಗೌಳಿ ಪ್ರೊಕಬ್ಬಡಿ ಸೀಸನ್-2 ರಲ್ಲಿ ತೃತೀಯ ಸ್ಥಾನ ಪಡೆದು ಜಯದ 3 ನೆ ಕಿರೀಟವನ್ನು ತನ್ನದಾಗಿಸಿಕೊಂಡಿದೆ.

ಈ ಮೂಲಕ ಯಲ್ಲಾಪುರ ತಾಲ್ಲೂಕಿಗೆ ಹಾಗೂ ಕರಡೊಳ್ಳಿ ಗ್ರಾಮಕ್ಕೆ ಗೌರವ ತಂದು ಕೊಟ್ಟಿರುತ್ತಾರೆ.ಈ ಸಂಬಂಧ ತಂಡದ ಸರ್ವ ಆಟಗಾರರಿಗೆ ಇನ್ನು ಮುಂದೆಯೂ ಸಹ ಹೆಚ್ಚಿನ ಯಶಸ್ಸು ಸಿಗಲಿ ತಾಲ್ಲೂಕಿನ ಹಾಗೂ ಗ್ರಾಮದ ಕೀರ್ತಿ ಪತಾಕೆಯನ್ನು ಇನ್ನು ಎತ್ತರಕ್ಕೆ ಹಾರಿಸುವಂತಾಗಲಿ ಎಂದು ಆಶಿಸುತ್ತಾ ಆಟಗಾರನ್ನು ಅಭಿನಂದಿಸಲಾಗಿದೆ. ಎಂದು ಕರಡೊಳ್ಳಿ ಯುವಕ ಹಾಗೂ ಕರ್ನಾಟಕ ರಾಜ್ಯ ಧನಗರ ಗೌಳಿ ಯುವಸೇನೆಯ ರಾಜ್ಯ ಖಜಾಂಚಿ ಲಕ್ಷ್ಮಣ ಕೊಕರೆ ತಿಳಿಸಿದ್ದಾರೆ.
Prathidvani Yellapura