Breaking News

90 ದಿನಗಳ ಅಧಿಕಾರ ; ಎಲ್ಲರಿಗೂ ಆಪ್ತರಾದ ತಹಸೀಲ್ದಾರ ಇಲಾಖೆಯಲ್ಲಿ ಹೊಸತನ ತಂದ ಅಶೋಕ ಭಟ್ಟ ವರ್ಗಾವಣೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಸರ್ಕಾರದ ವ್ಯವಸ್ಥೆಯಲ್ಲಿ ಅಧಿಕಾರಿಗಳ ಪದೋನ್ನತಿ, ವರ್ಗಾವಣೆ , ನಿವೃತ್ತಿ ಸಹಜ ಪ್ರಕಿಯೆ. ಆದರೆ ಕೆಲವೊಮ್ಮೆ ಇಂತಹ ಪ್ರಕ್ರಿಯೆಗಳಿಂದ ವ್ಯವಸ್ಥೆಯಲ್ಲಾಗುವ ಚುರುಕುತನಕ್ಕೆ ಅಡ್ಡಿಯಾಗುತ್ತದಲ್ಲದೇ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುವವರನ್ನು ಕಳೆದುಕೊಳ್ಳುವ ಪ್ರಕ್ರಿಯೆ ಸಾರ್ವಜನಿಕ ವಲಯಕ್ಕಾಗುತ್ತದೆ.

     ಕೇವಲ 9೦ ದಿನಗಳ ಕಾಲ ಯಲ್ಲಾಪುರ ಪ್ರಭಾರಿ ತಹಸೀಲ್ದಾರರಾಗಿ ಕಾರ್ಯನಿರ್ವಹಿಸಿದ ಅಶೋಕ ಭಟ್ಟ ವರ್ಗಾವಣೆ ವ್ಯವಸ್ಥೆಯಲ್ಲಿ ತರುತ್ತಿದ್ದ ಹೊಸತನಕ್ಕೆ ತಡೆಯೊಡ್ಡಿದಂತಾಗಿದೆ..


     ಅಶೋಕ ಭಟ್ಟ ಜನಸ್ನೇಹಿ ಅಧಿಕಾರಿಯಾಗಿದ್ದಲ್ಲದೇ ಜನಪ್ರತಿನಿಧಿಗಳ , ಇತರೆ ಇಲಾಖೆಗಳ ಅಧಿಕಾರಿಗಳ ವಿಶೇಷವಾಗಿ ಕಂದಾಯ ಇಲಾಖಾ ಅಧಿಕಾರಿಗಳ ಅತ್ಯಾಪ್ತ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಜಡ್ಡು ಹಿಡಿದ ವ್ಯವಸ್ಥೆಯಲ್ಲೇ ಹೊಸ ಚಿಗರು ಮೂಡಿಸಿ ನಾಮಕಾವಸ್ತೆ ಸರ್ಕಾರಿ ಕಾರ್ಯಕ್ರಮಗಳಾಗಿದ್ದ ರಾಷ್ಟ್ರೀಯ ಹಬ್ಬಗಳು, ಮಹನೀಯರ ಜಯಂತಿಗಳನ್ನು ವಿಶಿಷ್ಟ-ವಿಭಿನ್ನವಾಗಿ ಆಚರಿಸುವುದರ ಮೂಲಕ  ಸಾರ್ವಜನಿಕ ಕಾರ್ಯಕ್ರಮವಾಗಿಸಿದವರು. ನೂತನ ಆಡಳಿತ ಸೌಧದ ಚಿತ್ರಣವನ್ನೇ ಬದಲಿಸಿ ತನ್ನ ಇಲಾಖೆಯ ಎಲ್ಲ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಿರುವ ಹಾಗೂ ಗುರುತಿನ ಚೀಟಿ ಧರಿಸಲೇಬೇಕೆಂಬ ವ್ಯವಸ್ಥೆ ಜಾರಿಗೆ ತಂದವರು.

    


ಕರ್ತವ್ಯ ನಿರ್ವಹಿಸಿದ 9೦ ದಿನಗಳಲ್ಲಿ ಭಾರೀ ಮಳೆಗಾಲವನ್ನು ಎದುರಿಸಿದ್ದಲ್ಲೇ ಆ ಸಂದರ್ಭದಲ್ಲಾದ ಅವಘಡಗಳಿಗೆ ತಕ್ಷಣಕ್ಕೆ ಪರಿಹಾರ ಕೊಡಿಸುವ ಕಾಯಕದಲ್ಲಿ ಶಾಸಕರ ಅಣತಿಯಂತೆ ಕಾರ್ಯನಿರ್ವಹಿಸಿದ್ದಲ್ಲೇ ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ತಾಲೂಕನ್ನು ಸುತ್ತಿದ್ದಾರೆ. ಭೂಮಿ ತಂತ್ರಾಂಶ ಕಾರ್ಯದಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ಆಧಾರ ಸೀಡಿಂಗ್‌ನಲ್ಲಿ ಉತ್ತಮ ಸ್ಥಾನಗಳಿಸುವಂತೆ ಕಾರ್ಯ ನಿರ್ವಹಿಸಿ ಎಲ್ಲರಿಗೂ ಅತ್ಯಾಪ್ತರಾಗಿ ಸ್ವಸ್ಥಾನ ಕುಮಟಾಗೆ ಮರಳುತ್ತಿದ್ದಾರೆ.

ತೆರವಾದ ಸ್ಥಾನಕ್ಕೆ ಕಲಘಟಗಿ ತಹಶಿಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದ ಯಲ್ಲಪ್ಪ ಗೋಣೆಣ್ಣನವರ ನಿಯುಕ್ತಿಗೊಂಡಿದ್ದು ಸೆ.6ರಂದು ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *