



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸೇವಾಭಾವದ ಪ್ರತಿಯೊಬ್ಬರೂ ಲಯನ್ಸ್ ಕ್ಲಬ್ ಆಯ್ಕೆ ಮಾಡಿಕೊಂಡರೆ ಉತ್ತಮ. ಜಗತ್ತಿನಾದ್ಯಂತ ಲಯನ್ಸ್ ಕ್ಲಬ್ ಸೆವೆ ಸಲ್ಲಿಸುತ್ತಾ ಮನುಕುಲದ ಸೇವಾ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಇದೇ ಮೊದಲಬಾರಿಗೆ ಯಲ್ಲಾಪುರ ಭೇಟಿ ನೀಡಿದ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಜೋಸ್ ಫ್ರಾನ್ಸಿಸ್ಕೋ ಬ್ರಿಟ್ಟೋ ಹೇಳಿದರು.

ಇಂತಹ ಸಂಸ್ಥೆ ಅಡಿಯಲ್ಲಿ ಯಲ್ಲಾಪುರ ಲಯನ್ಸ್ ಕ್ಲಬ್ ಉತ್ತಮ ಕಾರ್ಯ ನಿರ್ವಹಿಸುತ್ತಾ ಗಮನ ಸೆಳೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಂಪೂರ್ಣ ತಂಡಕ್ಕೆ ನನ್ನ ಅಭಿನಂದನೆಗಳು ಎಂದರು.

ಅವರು ಅಡಿಕೆ ಭವನದಲ್ಲಿ ಯಲ್ಲಾಪುರ ಲಯನ್ಸ್ ಕ್ಲಬ್ ಆಯೋಜನೆಯ ಸಭೆಯನುದ್ದೇಶಿಸಿ ಮತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವೈದ್ಯರಾದ ಡಾ,ಶ್ರೀಧರ ಪಂಡಿತ್, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ, ನಿವೃತ್ತ ಶಿಕ್ಷಕ ಗೋಕುಲ ಮಾಸ್ಟರ್, ಶ್ರೀಕಾಂತ್ ಗೇರುಕೊಂಬೆ, ಯಕ್ಷಗಾನ ಭಾಗ್ವತ ಕೃಷ್ಣ ಭಾಗ್ವತ್ ಅವರನ್ನು ಗೌರವಿಸಲಾಯಿತು.

ಲಯನ್ಸ್ ಕ್ಲಬ್ ಶ್ರೇಷ್ಟತೆ ಮತ್ತು ವಿಶೇಷತೆಗಳ ಕುರಿತು ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿ ಅಶ್ವಿನ್ ಕುಮಾರ್ ಕಾರ್ಪೆ, ರೀಜನಲ್ ಛೇರ್ ಪರ್ಸನ್ ಐಶ್ವರ್ಯ, ಝೋನ್ ಛೇರ್ ಪರ್ಸನ್ ರವಿ ನಾಯ್ಕ್ ಮಾತನಾಡಿದರು.

ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಇದೇ ಮೊದಲಬಾರಿಗೆ ಯಲ್ಲಾಪುರ ಭೇಟಿ ನೀಡಿದ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಜೋಸ್ ಫ್ರಾನ್ಸಿಸ್ಕೋ ಬ್ರಿಟ್ಟೋ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸುರೇಶ್ ಬೋರ್ಕರ್ ವಹಿಸಿದ್ದರು.
ಲಯನ್ಸ್ ಕ್ಲಬ್ ಪ್ರಮುಖರಾದ ಲ.ನಂದನ ಬಾಳಗಿ. ಲ.ಶಾಂತಾರಾಮ್ ಹೆಗಡೆ, ಲ. ಶ್ರೀಧರ್ ಶೆಟ್ಟಿ, ಲ.ಎಸ್.ಎಂ.ಪ್ರಭು, ಮಂಜುನಾಥ ನಾಯ್ಕ, ಲ.ಮಹೇಶ್ ಪೂಜಾರ್, ಲ.ಸುನಂದ ಪಾಟಣಕರ್ ಲ. ಕಿರಣ್ ಶೆಟ್ಟಿ, ಲ.ಎಂ.ಎಚ್ ನಾಯ್ಕ, ಲ.ರಮಾಕಾಂತ್ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.
ಯಲ್ಲಾಪುರ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಎನ್.ಎ ಭಟ್ ನಿರ್ವಹಿಸಿ ವಂದಿಸಿದರು.





Prathidvani Yellapura