Breaking News

ಧರ್ಮದಾಚರಣೆಯಲ್ಲಿ ಉತ್ಸಾಹವಿರಲಿ. ಯುಗಾದಿ ಉತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿ ಸಮಸ್ತ ಹಿಂದು ಸಮಾಜ – ಕೇಬಲ್‌ ನಾಗೇಶ್.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಸಮಸ್ತರಿಗು ನೂತನ ಸಂವತ್ಸರ ಹೋಸ ವರ್ಷ ಯುಗಾದಿ ಶುಭಾಶಯಗಳು. ಇದು ಪ್ರತಿಧ್ವನಿ ಕಳಕಳಿ


ದಿನಾಂಕ 9 ರ ಮಂಗಳವಾರ ಯಲ್ಲಾಪುರದಲ್ಲಿ ಯುಗಾದಿ ಉತ್ಸವ ಸಮಿತಿ ಅಡಿಯಲ್ಲಿ ಭವ್ಯವಾದ ಶೋಭಾಯಾತ್ರೆ ಜರುಗಲಿದ್ದು ಸಮಸ್ತ ಹಿಂದುಗಳು ಮಹಿಳೆಯರಾದಿಯಾಗಿ ಪಾಲ್ಗೊಂಡು ಸಂಭ್ರಮಿಸಬೇಕಿದೆ.
ಇತ್ತೀಚಿನ ದಿನಗಳಲ್ಲಿ ಹಿಂದು ಧಾರ್ಮಿಕ ಉತ್ಸವಗಳು ಕಳೆಗುಂದುತ್ತಿದ್ದು ಇದಕ್ಕೆ ಹಲವು ಕಾರಣಗಳಿದ್ದರು ಪ್ರಮುಖ ಕಾರಣ ಹಿಂದು ಬಂಧುಗಳ ಭಾಗವಹಿಸುವಿಕೆ ಕೊರತೆಯಾಗಿರುವುದಾಗಿದೆ.
9 ನೆ ತಾರೀಖು ನಡೆಯಲಿರುವ ಯುಗಾದಿ ಶೋಭಾಯಾತ್ರೆಯಲ್ಲಿ ಹಿಂದು ಬಾಂಧವರು ಕಟಿಬದ್ದರಾಗಿ ಪಾಲ್ಗೊಂಡರೆ ಯಲ್ಲಾಪುರದ ರಸ್ತೆಯಲ್ಲಿ ನಿಲ್ಲಲು ಸ್ಥಳವಿಲ್ಲದಂತಾಗಲಿದೆ ಆದರೆ ಯಾರಲ್ಲು ಭಾಗವಹಿಸಲೇಬೇಕೆಂಬ ಬದ್ದತೆಯಾಗಲಿ ನಮ್ಮ ಧಾರ್ಮಿಕ ಉತ್ಸವ ಎಂಬ ಪ್ರೀತಿಯಾಗಲಿ ಇಲ್ಲದಂತಾಗಿರುವುದು ದುರಂತವಾಗಿದೆ.
ಉತ್ಸವ,ಮೆರವಣಿಗೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ ದೂರದಲ್ಲಿ ನಿಂತು ಜನರೇ ಇರಲಿಲ್ಲ, ಇನ್ನೂ ಹೆಚ್ಚಾಗಿ ಸೇರಬೇಕಿತ್ತು, ಇತ್ತೀಚೆಗೆ ಉತ್ಸಾಹ ಕಡಿಮೆಯಾಗುತ್ತಿದೆ, ಮಹಿಳೆಯರು ಧಾರವಾಹಿ ನೋಡುತ್ತ ಟಿವಿ ಮುಂದೆ ಕೂತಿರುತ್ತಾರೆ, ಮಕ್ಕಳು ಯುವಕರು ಮೊಬೈಲ್ ನಲ್ಲಿ ಬಿಝಿಯಾಗಿದ್ದಾರೆ ಎಂದು ಹದ ಹೇಳುತ್ತ ಕೊಂಕು ಮಾತನಾಡುತ್ತ ಕಷ್ಟಪಟ್ಟು ಸಂಘಟಿಸಿ ಧರ್ಮಸೇವೆಗೆ ಏನನ್ನು ಬಯಸದೆ ಶ್ರಮದ ಸೇವೆ ಸಲ್ಲಿಸುತ್ತಿರುವವರ ಪ್ರಯತ್ನಕ್ಕೆ ತಣ್ಣೀರೆರಚುವ ಬದಲು ಬನ್ನಿ ಮೈ ಚಳಿಬಿಟ್ಟು, ಆಲಸ್ಯ ಭಾವ ಬಿಟ್ಟು, ಕೊಂಕು ನುಡಿಗಳ ಬಿಟ್ಟು, ನನ್ನ ಕಾರ್ಯವಲ್ಲ ಮತ್ತಾರದ್ದೊ ಎಂಬ ನುಣುಚಿಕೊಳ್ಳುವ ಬುದ್ದಿ ಬಿಟ್ಟು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮೇಲೆ ಹೇಳಿದ ಎಲ್ಲಾ ವಿಚಾರಕ್ಕು ಉತ್ತರವಾಗಿ ಧರ್ಮ ಕಾರ್ಯಕ್ಕೆ ಹೆಗಲಾಗಿ ಭವಿಷ್ಯದ ಪೀಳಿಗೆಗೆ ಮಾದರಿಯಾಗಿ ಯಲ್ಲಾಪುರದ ಹಿಂದು ಸಮಾಜೋತ್ಸವ ಪರ ಊರುಗಳಿಗೆ ಪ್ರೇರಣೆಯಾಗುವಂತೆ ಸಂಭ್ರಮದಲ್ಲಿ ಪಾಲ್ಗೊಳ್ಳೋಣ ಏನಂತೀರ…..ಹಿಂದು ಬಂಧುಗಳೆ.
ನಾವೆಲ್ಲರೂ ಸಮುದಾಯಗಳಾಗಿ ಒಡೆದು ಕುಳಿತಿರುವುದು ಧರ್ಮವೆಂಬ ಗಟ್ಟಿತನಕ್ಕೆ ದಕ್ಕೆಯಾಗಿದೆ. ತಮ್ಮ ತಮ್ಮ ಸಮಾಜದ ಸಮುದಾಯದ ಕಾರ್ಯಕ್ರಮಗಳಲ್ಲಿರುವಂತಹ ಶ್ರದ್ದೆ,ಬದ್ದತೆ ,ಪಾಲ್ಗೊಳ್ಳುವಿಕೆ ಹಿಂದು ಸಮಾಜೋತ್ಸವಗಳಲ್ಲಿ ಕಾಣಿಸುವುದಿಲ್ಲ ಇದು ಅತ್ಯಂತ ಅಪಾಯಕಾರಿ ನಡೆಯಾಗಿದೆ. ಇದನ್ನು ಬದಲಿಸಲೇಬೇಕಿದೆ ನಮಗಲ್ಲದಿದ್ದರು ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಹಿಂದು ಸಮಾಜೋತ್ಸವಗಳಲ್ಲಿ ಕಟಿಬದ್ದರಾಗಿ ಪಾಲ್ಗೊಳ್ಳಲೇಬೇಕಿದೆ.

” ದೃಷ್ಟಿ ಬದಲಾದರೆ ದೃಶ್ಯ ಬದಲಾದೀತು “
ಯಾರು ಏನೆ ಅಂದುಕೊಂಡರು ನನಗೆ ಬೇಸರವಿಲ್ಲ ನನ್ನ ಧರ್ಮದ ಸಂಕಷ್ಟ ನಾ ಹೇಳಲೇಬೇಕಿದೆ ಹೇಳಿದ್ದೇನೆ..ಉತ್ತರ ನಮ್ಮಲ್ಲೆ ಇದೆ ಹುಡುಕುವ ಅವಶ್ಯಕತೆ ಇಲ್ಲ ತೊಡಗಿಕೊಳ್ಳುವ ಅನಿವಾರ್ಯತೆ ಇದೆ ಬನ್ನಿ ಯುಗಾದಿ ಶೋಭಾಯಾತ್ರೆಯಲ್ಲಿ ಯಲ್ಲಾಪುರ ತಾಲೂಕಿನ ಸಮಸ್ತ ಹಿಂದುಗಳು ಪಾಲ್ಗೊಳ್ಳೋಣ ಯಶಸ್ವಿಗೊಳಿಸೋಣ ಇದು ” ನಮ್ಮೆಲ್ಲರ ಕರ್ತವ್ಯ ” ಎಂದುಕೊಳ್ಳೋಣ
ಸಮಸ್ತರಿಗು ಮತ್ತೊಮ್ಮೆ ಯುಗಾದಿ ನೂತನ ಸಂವತ್ಸರದ ಶುಭಾಶಯಗಳು.
   
ಕೇಬಲ್ ನಾಗೇಶ್

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *