




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ 27 ಜನ ರಾಮ ಭಕ್ತರ ತಂಡ ಅಯೋಧ್ಯೆ ಶ್ರೀ ರಾಮಲಲ್ಲಾ ದರ್ಶನಕ್ಕೆ ಮಾ,6 ರಂದು ಕಾರವಾರದಿಂದ ಎರಡನೇ ತಂಡ ಹೊರಟಿದ್ದು ಭಾರತೀಯ ಜನತಾ ಪಕ್ಷದ ಅಡಿಯಲ್ಲಿ ಈ ಆಧ್ಯಾತ್ಮ ಯಾತ್ರೆ ಆಯೋಜಿಸಲಾಗಿದೆ.

ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ವಿಶ್ವಹಿಂದು ಪರಿಷತ್ ಅಡಿಯಲ್ಲಿ ಯಲ್ಲಾಪುರ ತಾಲೂಕಿನ14 ಜನರ ತಂಡ ಅಯೋಧ್ಯೆ ಶ್ರೀರಾಮ ದರ್ಶನಕ್ಕೆ ತೆರಳಿ ಯಶಸ್ವಿಯಾಗಿ ಹಿಂದಿರುಗಿತ್ತು.

ಸದ್ಯ ಇದೀಗ 24 ಜನರ ತಂಡ ಯಾತ್ರೆ ಹೊರಟಿದ್ದು ಬುಧವಾರ ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಬೀಳ್ಕೊಡಲಾಯಿತು.

ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆ ತೆರಳುವುದು ಪ್ರತಿ ಹಿಂದುಗಳ ಜೀವನೊದ್ದೇಶವಾಗಬೇಕಿದೆ ಸಮಾಜ ಸನಾತನ ಸಂಸ್ಕೃತಿ ಎಡೆಗೆ ಸಾಗುವಂತಾಗಲು ಇಂತಹ ಆಧ್ಯಾತ್ಮ ಯಾತ್ರೆಗಳು ಸಹಕಾರಿಯಾಗಲಿದೆ ನಿಮ್ಮ ಯಾತ್ರೆಗೆ ಶುಭವಾಗಲಿ ಎಂದು ಯಲ್ಲಾಪುರ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಯಾತ್ರಾರ್ಥಿಗಳಿಗೆ ಶುಭಕೋರಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಪುರಂದರ ತೆಕ್ಕಟೆ, ಹಿಂದುಳಿದ ಮೋರ್ಚಾದ ತಾಲೂಕು ಪ್ರಮುಖ ಬರವಿದೇಬಾಡಿಗ, ಪಕ್ಷದ ಮಹಿಳಾ ಮುಖಂಡರಾದ ನಮಿತಾ ಬಿಡೀಕರ್, ರಾಮ ದರ್ಶನ ಯಾತ್ರಾ ಸಮಿತಿ ಸಂಚಾಲಕ ಗಜಾನನ ನಾಯ್ಕ ತಳ್ಳಿಗೆರೆ, ಹನುಮಂತ ಸಿಂಗನಳ್ಳಿ, ಅಕ್ಷಯ್ ಕಿತ್ತೂರ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದು ಬೀಳ್ಕೊಟ್ಟರು.

ಯಾತ್ರೆ ಹೊರಟಿರುವ ತಂಡದಲ್ಲಿ ಪತ್ರಕರ್ತ ನಾಗರಾಜ್ ಮದ್ಗುಣಿ, ಡಾ,ಸುಚೇತಾ ಮದ್ಗುಣಿ ಕಮಲಾಕ್ಷಿ ರಾಮಚಂದ್ರ ಬಿಡೀಕರ್, ಸಾಕ್ಷಿ ಸುರೇಂದ್ರ ಮುರುಕುಂಬಿ ಇನ್ನಿತರ ಪ್ರಮುಖ ಯಾತ್ರಿಗಳು ಉಪಸ್ಥಿತರಿದ್ದರು.




Prathidvani Yellapura