




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಕಾಂಗ್ರೆಸ್ ಪಕ್ಷದ ನೂತನ ರಾಜ್ಯ ಸಭಾ ಸದಸ್ಯ ನಾಸೀರ ಹುಸೇನ ಬೆಂಬಲಿಗರು ವಿಧಾನ ಸೌಧದ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ ಎಂದು ದೇಶದ್ರೋಹಿ ಘೋಷಣೆ ಕೂಗಿದ ಹಿನ್ನಲೆ ಯಲ್ಲಿ ಯಲ್ಲಾಪುರ ಮಂಡಳ ವತಿಯಿಂದ ತಹಶೀಲ್ದಾರರ ಕಾರ್ಯಲಯದ ಬಳಿ ಪ್ರತಿಭಟಿಸಿ ದೇಶದ್ರೋಹಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಲಾಯಿತು.

ಈ ಸಂಧರ್ಭದಲ್ಲಿ ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ಪ್ರಧಾನಕಾರ್ಯದರ್ಶಿಗಳಾದ ರವಿ ಕೈಟ್ಕರ ಮತ್ತು ನಟರಾಜ ಗೌಡ,ಜಿಲ್ಲಾ ರೈತಮೋರ್ಚಾ ಪ್ರಧಾನಕಾರ್ಯದರ್ಶಿ ಶಿವಲಿಂಗಯ್ಯ ಹಿರೇಮಠ, ನಿಕಟ ಪೂರ್ವ ಅಧ್ಯಕ್ಷರಾದ G.N.ಗಾಂವ್ಕರ, ರಾಮು ನಾಯ್ಕ,ಪ್ರಮೋದ ಹೆಗಡೆ, ರೇಖಾಹೆಗಡೆ,ಗಣಪತಿ ಮಾನಿಗದ್ದೆ,ಗಣಪತಿ ಮುದ್ದೇಪಾಲ ,ಸೋಮೇಶ್ವರ ನಾಯ್ಕ,ಕಾರ್ಯಕರ್ತರೂ ಉಪಸ್ಥಿತರಿದ್ದರು.


Prathidvani Yellapura