
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಎಲ್ಲಿನೋಡಿದರು ರಾಮನಾಮ ಕೇಸರಿಮಯವಾಗಿದೆ.
ಪಟ್ಟಣದ ಮಂಜುನಾಥ ನಗರದಲ್ಲಿ ರಾಮಭಕ್ತ ಬಳಗದ ವತಿಯಿಂದ ಶ್ರೀರಾಮನ ವಿಶೇಷ ಪೂಜೆ ಆಯೋಜಿಸಲಾಗಿತ್ತು.

ಪೂರ್ಣ ಕುಂಭದೊಂದಿಗೆ ಗ್ರಾಮದೇವಿ ಮತ್ತು ಶ್ರೀರಾಮನ ಭಾವ ಚಿತ್ರವನ್ನು ಸ್ವಾಗತಿಸಿ ಪೂಜಾ ಕಾರ್ಯ ಪ್ರಾರಂಭಿಸಿದರು.

ಹಲಸ್ಕಂಡ ಮಾತೃ ಮಂಡಳಿ ವತಿಯಿಂದ ರಾಮ ಭಜನೆ ಏರ್ಪಡಿಸಲಾಗಿತ್ತು.

ಶ್ರೀರಾಮನ ಪ್ರಾಣಪ್ರತಿಷ್ಟೆ ಕಾರ್ಯಕ್ಕೆ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡಲಾಯಿತು.
ಸ್ಥಳಕ್ಕೆ ಶಾಸಕ ಹೆಬ್ಬಾರ್ ಭೇಟಿ ನೀಡಿ ರಾಮನ ದರ್ಶನ ಪಡೆದು ಕೃತಾರ್ಥರಾದರು.



ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ವಿಶೇಷ ಎಂದರೆ ಮುಸ್ಲಿಂ, ಕ್ರೈಸ್ತರು ಸಹ ಧರ್ಮಬೇದ ಮರೆತು ಅನ್ನ ಪ್ರಸಾದ ಬಡಿಸುವ ಕಾರ್ಯದಲ್ಲು ಕೈಜೋಡಿಸಿ ಸೌಹಾರ್ಧತೆ ತೋರಿದರು.


ಸಂಜೆ ವೇಳೆಗೆ ನಾಗರಕಟ್ಟೆ ವೃತ್ತದಲ್ಲಿ ದೀಪೋತ್ಸವ ಜರುಗಿತು ಸ್ಥಳೀಯ ಮಹಳೆಯರು ಭಾಗಿಯಾಗಿ ದೀಪ ಬೆಳಗಿ ರಾಮ ಭಜನೆ ಮಾಡಿದರು.
Prathidvani Yellapura