
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ- ಪಟ್ಟಣದ ಕಾಳಮ್ಮ ನಗರದಲ್ಲಿ ನೆಲೆ ನಿಂತ ” ಶ್ರೀ ಮಾರ್ಕೋಜಿ ದೇವಿ ” ಯ ವರ್ಧಂತಿ ಉತ್ಸವ ಶ್ರದ್ದಾ ಭಕ್ತಿಯಿಂದ ನಡೆಯುತ್ತಿದ್ದು. ಶುಕ್ರವಾರ ದೇವಾಲಯಕ್ಕೆ ಭೇಟಿ ನೀಡಿದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ದೇವಾಲಯದ ಆವಾರದಲ್ಲಿ ಉತ್ಸವ ನಿಮಿತ್ತ ಹಮ್ಮಿಕೊಂಡ ಹೋಮ ಹವನಾದಿಗಳಲ್ಲಿ ಪಾಲ್ಗೊಂಡ ಹೆಬ್ಬಾರ್ ಕ್ಷೆತ್ರದ ಜನತೆಯ ಸುಖಃ,ಶಾಂತಿ,ಆರೋಗ್ಯ ಮತ್ತು ಮಳೆ ಬೆಳೆ ಸುಭೀಕ್ಷತೆಗೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.



Prathidvani Yellapura