
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಗಾಂಧಿ ಕುಟಿರದ ಆವಾರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅತ್ಯಂತ ಶ್ರದ್ದೆ ಭಕ್ತಿಯಿಂದ ಜರುಗಿತು.

ವಾಲ್ಮೀಕಿ ಮಹರ್ಷಿಗಳ ಮಹತ್ವ ಹಾಗು ಶ್ರೇಷ್ಟತೆ ಸಾರುವ ಮೆರವಣಿಗೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದು ಸಹ ಜೊತೆಯಾದರು..

ಮಹಾನ್ ಪುರುಷರ ಜಯಂತಿ ಆಚರಣೆಗೆ ಸೀಮಿತವಾಗದೆ ಸತ್ಪುರುಷರ ತತ್ವ ಸಿದ್ದಾಂತಗಳ ಅನುಕರಣೆಯಾಗಬೇಕಿದೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಮೂಲಕ ಭವಿಷ್ಯದ ಪೀಳಿಗೆಗೆ ಉತ್ತಮಗಳನ್ನು ವರ್ಗಾಹಿಸಬೇಕಿದೆ. ಯಾವುದೆ ಮಹಾಪುರುಷರು ಒಂದು ಸಮುದಾಯಕ್ಕೆ ಸೀಮಿತರಲ್ಲ ಸರ್ವರಿಗು ಆದರ್ಶರು ಎಂದರು.

ನಂತರದಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ನಿವೃತ್ತ ದೈಹಿಕ ಶಿಕ್ಷಕ ಜಿ.ಎಂ.ತಾಂಡುರಾಯನ್ ಮಾರ್ಗದರ್ಶನದಲ್ಲಿ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ರೂಪಿಸಿದ ಮಹರ್ಷಿ ವಾಲ್ಮೀಕಿ, ಶ್ರೀ ರಾಮ,ಸೀತಾದೇವಿ, ಲಕ್ಷ್ಮಣ ವೇಷ ತೊಟ್ಟ ಮಕ್ಕಳು ಜನರನ್ನು ಆಕರ್ಷಿಸಿದರು.

ಕೊನೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು.

ನಾವು ಪ್ರಸ್ತುತ ನಡೆಯುತ್ತಿರುವ ಜೀವನದ ಸಾತ್ವಿಕತೆಯ ಹಾದಿಯಲ್ಲಿ ಮಹ ಪುರುಷ ವಾಲ್ಮೀಕಿ ಮಹರ್ಷಿಗಳ ರಚಿತ ರಾಮಾಯಣದ ಪ್ರತಿಯೊಂದು ಘಟನೆಗಳು ನಮಗರಿವಿಲ್ಲದೆ ಘಟಿಸುತ್ತಾ ಬರುತ್ತಿವೆ. ಸಮಾಜದಲ್ಲಿ ಸಾಮರಸ್ಯ ಮತ್ತು ಸಾಂಘಿಕ ಬದುಕಿನ ಶ್ರೇಷ್ಠ ಚಿತ್ರಣವನ್ನು ರಮಾಯಣ ತೆರೆದಿಟ್ಟಿದೆ ಹಾಗಾಗಿ ಮಹರ್ಷಿಗಳು ಸಂಘ ನೀತಿ ಅಳವಡಿಸಿಕೊಂಡಿರುವುದು ತಿಳಿಯುತ್ತದೆ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಅವರ ಜೀವನ ವೃತ್ತಾಂತವನ್ನು ಅತ್ಯಂತ ಅರ್ಥಗರ್ಭಿತವಾಗಿ ಕೇಳುಗರ ಮನಃ ಮುಟ್ಟುವಂತೆ ವೈಟಿಎಸ್ಎಸ್ ಶಿಕ್ಷಕ ವಿನೋದ್ ಭಟ್ ಉಪನ್ಯಾಸ ನೀಡಿ ಗೌರವ ಸ್ವೀಕರಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ದಂಢಾಧಿಕಾರಿ ಗುರುರಾಜ್ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಕಮ್ಮಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ್ ಸುಭಾಷ್ ಗಾವಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಲೋಕೋಪಯೋಗಿ ಸಹಾಯಕ ಕಾರ್ಯಪಲಕ ಅಭಿಯಂತರ ವಿ.ಎಂ ಭಟ್, ಸಮುದಾಯದ ಹಿರಿಯ ಬೀಮ್ಸಿ ವಾಲ್ಮೀಕಿ, ಪಿಎಸ್ಐ ಶ್ಯಾಮ್ ಪಾವಸ್ಕರ್, ಸಮಾಜ ಕಲ್ಯಾಣ. ಇಲಾಖೆ ಅಧಿಕಾರಿ ಸದಾಶಿವ ಮಾಂಗ್ ಉಪಸ್ಥಿತರಿದ್ದರು.

ಹೋಲಿರೋಜರಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೈಟಿಎಸ್ಎಸ್ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶಿಕ್ಷಕ ನೆಲ್ಸನ್ ಗೊನ್ಸಾಲ್ವೀಸ್ ನಿರೂಪಿಸಿದರು.

ವೈಟಿಎಸ್ಎಸ್ ಶಿಕ್ಷಕಿ ಮೌಲ್ಯಾ ನಾಯಕ ಸ್ವಾಗತಿಸಿ ವಂದಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಪ್ರಮುಖರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Prathidvani Yellapura