
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಉದ್ಯಮನಗರದಲ್ಲಿರುವ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಶ್ರೀಗಂಧದ ಮರವೊಂದನ್ನು ಕಳ್ಳರು ರಾತ್ರೋರಾತ್ರಿ ಕಡಿದು ನೆಲಕ್ಕುರುಳಿಸಿ ಬೆಲೆ ಬಾಳುವ ಭಾಗವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.

ಉದ್ಯಮನಗರದ ಗೋಕುಲಂ ಇಂಡಸ್ಟ್ರೀಸ್ ಅವರಿಗೆ ಸೇರಿದ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಗಾತ್ರದಲ್ಲಿ ಶ್ರೀಗಂಧದ ಮರವೊಂದು ಬೆಳೆದು ನಿಂತಿತ್ತು. ಶುಕ್ರವಾರ ರಾತ್ರಿ ಕಳ್ಳರ ವಕ್ರ ದೃಷ್ಠಿ ಮರದ ಮೇಲೆ ಬಿದ್ದು ಕಡಿದು ನೆಲಕ್ಕುರುಳಿಸಿ ಅಲ್ಲೇ ಪಕ್ಕದಲ್ಲಿ ಮರದ ತುಂಡನ್ನು ಸಿದ್ಧಪಡಿಸಿಕೊಂಡು ಸಾಗಿಸಿದ್ದಾರೆ. ಈ ಕುರಿತು ಗೋಕುಲಂ ಇಂಡಸ್ಟ್ರೀಸ್ ಮಾಲೀಕ ಮುರಳೀ ನಾಯರ್ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದು ಕ್ರಮ ಜರುಗಿಸುವಂತೆ ಕೋರಿದ್ದಾರೆ.

ಸ್ಥಳಕ್ಕಾಗಮಿಸಿದ್ದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ ಕುಮಾರ ಬರಗೋಳಿ, ಪೊಲೀಸ್ ಇಲಾಖೆಯ ಬಸವರಾಜ ಹಗರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಯಲ್ಲಾಪುರದ ಸುತ್ತಮುತ್ತ ಬೆಲೆಬಾಳುವ ಶ್ರೀಗಂಧದ ಮರಗಳು ಸಾಕಷ್ಟಿದ್ದು ಬಹುತೇಕ ಮರಗಳು ಬೆಳೆದು ನಿಂತಿದ್ದು ಮರಗಳ್ಳರ ದಾಹಕ್ಕೆ ಬಲಿಯಾಗುವ ಸಾಧ್ಯತೆಗಳಿವೆ. ಈ ಸಂಬಂಧ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿ ಕಳ್ಳರ ಹೆಡೆಮುರಿ ಕಟ್ಟಬೇಕಿದೆ. ಇಲ್ಲವಾದಲ್ಲಿ ಕರ್ನಾಟಕದ ಸುಪ್ರಸಿದ್ಧ ಶ್ರೀಗಂಧದ ಮರಗಳ ಮಾರಣಹೋಮ ಯಲ್ಲಾಪುರ ತಾಲೂಕಿನಾದ್ಯಂತ ಕಂಡುಬರಲಿದೆ. ಮುರಳೀ ನಾಯರ್, ಮಾಲೀಕರು, ಗೋಕುಲಂ ಇಂಡಸ್ಟ್ರೀಸ್


Prathidvani Yellapura