
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಗಾಂಧಿ ಜಯಂತಿ ಪ್ರಯುಕ್ತ ನ್ಯಾಯಾಧೀಶರ ಸ್ವಚ್ಛತಾ ಕಾರ್ಯ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಪೂರ್ವದಲ್ಲೇ ನ್ಯಾಯಾಧೀಶರುಗಳ ನೇತೃತ್ವದಲ್ಲಿ ವಿವಿಧ ಇಲಖೆಗಳು, ಸಂಘಟನೆಗಳ ಸಹಯೋಗದಲ್ಲಿ ಸ್ವಚ್ಛತಾಕಾರ್ಯ ಜರುಗಿತು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪಟ್ಟಣ ಪಂಚಾಯತಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾಕಾರ್ಯ ನಡೆಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಬಿ ಹಳ್ಳಕಾಯಿ, ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ ನೇತೃತ್ವದಲ್ಲಿ ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಇವರೊಂದಿಗೆ ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಜಿ ಭಟ್ಟ, ವಕೀಲರಾದ ಶಿವರಾಯ ದೇಸಾಯಿ, ಗಣೇಶ ಜಿ ಪಾಟಣಕರ ಹಾಗೂ ಇನ್ನಿತರ ವಕೀಲರು, ಶಿರಸ್ತೇದಾರರಾದ ರಾಮಚಂದ್ರ ಉಳ್ವೇಕರ, ಮಂಜುನಾಥ ಬೀರಾ ಚೆನ್ನಯ್ಯ, ದಿನಕರ ಎಂ ಚಂದಾವರ, ನ್ಯಾಯಾಲಯದ ಸಿಬ್ಬಂದಿ ವರ್ಗ, ಪ.ಪಂ ಸಿಬ್ಬಂದಿಗಳು ಸ್ವಚ್ಛತಾಕಾರ್ಯದಲ್ಲಿ ಪಾಲ್ಗೊಂಡಿದ್ದರು.



Prathidvani Yellapura