
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ ; ಅಂತರಜಿಲ್ಲಾ ಕಳ್ಳರ ಬಂಧನ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಒಂದಾದ ಮಾಂಗಲ್ಯ ಸರ ಕಿತ್ತು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿ 4,7೦,೦೦೦ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಸೆ.25ರಂದು ತಾಲೂಕಿನ ಬಾಳೆಹದ್ದಾದಲ್ಲಿ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೋರ್ವಳ ಮಾಂಗಲ್ಯ ಸರ ಕಿತ್ತು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಬೆನ್ನತ್ತಿದ ಯಲ್ಲಾಪುರ ಪೊಲೀಸರು ಎರಡು ತಂಡಗಳನ್ನು ರಚಿಸಿ ಬಿಗುವಿನ ತನಿಖೆ ಪ್ರಾರಂಭಿಸಿದವರಿಗೆ ಪ್ರಕರಣದ ಜಾಡು ಬೇಧಿಸುತ್ತಾ ಹೋದಂತೆ ಆರೋಪಿತರು ಶಿವಮೊಗ್ಗ ಜಿಲ್ಲೆಯ ಸಾಗರ, ಆನಂದಪುರ, ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ ಮತ್ತು ಯಲ್ಲಾಪುರಗಳಲ್ಲಿ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಅವರ ಕುತ್ತಿಗೆಯಲ್ಲಿರುವ ಸರ ಹಾಗೂ ಮಂಗಳಸೂತ್ರವನ್ನು ಸುಲಿಗೆ ಮಾಡಿದ ಬಗ್ಗೆ ತಿಳಿದು ಬಂದಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಖಾಸಿಂಖಾನ ಮೊಹಲ್ಲಾದ ಲಿಂಬೂ ವ್ಯಾಪಾರಿ ಅಫಜಲ್ ಖಾದರ್ ಗೌಸ್ ಗವಾರಿ ಅಲಿಯಾಸ್ ಲಿಂಬೂ ಶಿರಸಿ ಮೂಲದ ರಾಮನ ಬೈಲು ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ಫೈಜಾನ್ ಅಬ್ದುಲ್ ಸಮದ್ ಮುಲ್ಲಾ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಅಂತರಜಿಲ್ಲಾ ಕಳ್ಳರಾಗಿದ್ದು ಶಿರಸಿ, ಮುಂಡಗೋಡು ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಆರೋಪಿತರಾಗಿರುತ್ತಾರೆ. ಆರೋಪಿತರಿಂದ ಸುಲಿಗೆ ಕೃತ್ಯಕ್ಕೆ ಬಳಸಿದ 1,2೦,೦೦೦ ಮೌಲ್ಯದ ಬಜಾಜ್ ಪಲ್ಸರ್ ಬೈಕ್, 4 ಮಂಗಳಸೂತ್ರ , 1 ಚೈನ್ ಸೇರಿದಂತೆ 3,5೦,೦೦೦ ಮೌಲ್ಯದ 55 ಗ್ರಾಂ ಬಂಗಾರದ ಆಭರಣ ಸೇರಿ ಒಟ್ಟು 4,7೦,೦೦೦ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ, ಪೊಲೀಸ್ ಉಪಾಧೀಕ್ಷಕ ಗಣೇಶ್ ಕೆ.ಎಲ್ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಐ ರಂಗನಾಥ ನೀಲಮ್ಮನವರ್ ನೇತೃತ್ವದಲ್ಲಿ ಪಿಎಸ್ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ, ಎಎಸ್ಐ ಗಣಪತಿ ಬೆನಕಟ್ಟಿ, ಸಿಬ್ಬಂದಿಗಳಾದ ಮಹ್ಮದ್ ಶಫಿ, ಬಸವರಾಜ ಹಗರಿ, ಗಿರೀಶ ಲಮಾಣಿ, ಶೋಭಾ ನಾಯ್ಕ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.



Prathidvani Yellapura