


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಅವ್ಯವಸ್ಥೆಗಳು ತಾಂಡವವಾಡುತ್ತಿದ್ದು ಶೀಘ್ರ ಪರಿಹರಿಸುವಂತೆ ಮುಖ್ಯಾಧಿಕಾರಿ ಸುನಿಲ್ ಗಾವಡೆಯವರಿಗೆ ರವೀಂದ್ರನಗರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ 11 ಸಮಸ್ಯೆಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಿದರು.
ಮನವಿಯಲ್ಲಿ ಉಲ್ಲೇಖಿಸಿರುವ ಪಟ್ಟಣದ ಸಮಸ್ಯೆಗಳು :
• ಎಲ್ಲೆಂದರಲ್ಲಿ ಮೀನು ಮಾರುತ್ತಿರುವುದು
• ಜಾತ್ರೆಗೆ ಅಳವಡಿಸಿದ ಅಲಂಕಾರಿಕ ದೀಪಗಳು ಹಾಳಾಗಿರುವುದು
• ಜಾತ್ರೆ ನಿಮಿತ್ತ ಬೆಲ್ ರಸ್ತೆ ಮಾಡಿದ್ದು ಸಂಪೂರ್ಣ ಹದಗೆಟ್ಟಿದೆ
• ರವೀಂದ್ರನಗರ-ಮುAಡಗೋಡು ರಸ್ತೆಯಲ್ಲಿ ಆಲದ ಮರ ಬಿದ್ದು ೩ತಿಂಗಳುಗಳಾದರೂ ಮರದ ತುಂಡುಗಳನ್ನು ತೆರವುಗೊಳಿಸದಿರುವುದು
• ಫಾರಂ-೩ ಮಾಡಲು ಸಾರ್ವಜನಿಕರು ಪ.ಪಂ ತೆರಿಗೆ ವಿಭಾಗದಲ್ಲಿ ಅಧಿಕಾರಿಗಳಿಲ್ಲದಿರುವುದು
• ಪ.ಪಂ ಅಧಿಕಾರಿಗಳಿಗೆ ಸದಸ್ಯರು ಕರೆ ಮಾಡಿದರೂ ನಿರ್ಲಕ್ಷö್ಯ ತೋರುತ್ತಿರುವುದು
• ಬಸ್‌ಸ್ಟಾಂಡ್ ರಸ್ತೆ, ಚರ್ಚ್ ಕಾಂಪ್ಲೆಕ್ಸ್ ಮುಂಭಾಗ ಪಾದಚಾರಿಗಳಿಗೆ ಮಾರ್ಗವಿಲ್ಲದಂತೆ ತರಕಾರಿ, ಹೂ-ಹಣ್ಣುಗಳ ಮಾರಾಟ
• ರೋಜರಿ ಶಾಲೆಯಿಂದ ಮಕ್ಕಳು ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಮನೆಗೆ ಹೋಗುವ ಫುಟ್‌ಪಾತ್ ಮೇಲೆ ಗಿಡಗಂಟಿ ಬೆಳೆದು ಮಕ್ಕಳು ಹೆದ್ದಾರಿಯಲ್ಲೆ ನಡೆದು ಹೋಗುವುದು
• ರವಿವಾರ ಸಂತೆಯಲ್ಲಿ ಗ್ರಾಹರು ಓಡಾಡದಂತೆ ಅಂಗಡಿಕಾರರು ರಸ್ತೆಗಳಲ್ಲೇ ಅಂಗಡಿಗಳನ್ನು ತೆರೆಯುತ್ತಿರುವುದು
• ಕಾಳಮ್ಮನಗರದ ಅಂಗನವಾಡಿ ಮಂಜೂರಾಗಿ ೬ ತಿಂಗಳಾದರೂ ಸ್ಥಳ ನಿಗಧಿ ಪಡಿಸದಿರುವುದು
• ಜಿ+೨ ಮನೆ ಮಂಜೂರಾತಿಗಾಗಿ ಫಲಾನುಭವಿಗಳು ೫೦,೦೦೦ ಹಣ ಭರಿಸಿ ೧೮ ತಿಂಗಳು ಕಳೆದರೂ ಮನೆ ನೀಡದಿರುವುದು
ಈ ಮೇಲಿನ ಎಲ್ಲ ಸಮಸ್ಯೆಗಳು ಗಂಭೀರವಾಗಿದ್ದು ತಕ್ಷಣ ಪರಿಹರಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಮನವಿ ಸ್ವೀಕರಿಸಿದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಗಾವಡೆ ಸಮಸ್ಯೆಗಳತ್ತ ಗಮನ ಹರಿಸಿ ಶೀಘ್ರದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ ಅಭಿಯಂತರ ಹೇಮಚಂದ್ರ ನಾಯ್ಕ ಉಪಸ್ಥಿತರಿದ್ದರು.
Prathidvani Yellapura