Breaking News

ಗಣೇಶೋತ್ಸವ ಆಚರಣೆ ನಿಮಿತ್ತ ಯಲ್ಲಾಪುರ ಪೊಲೀಸ್ ಇಲಾಖೆ ಶಾಂತಿ ಸಭೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಆಚರಣೆಗಳು ಅಪರಾಧ ವಾಗಬಾರದು ಹಬ್ಬಗಳಿಗೆ ತಕ್ಕನಾದ ಪದ್ದತಿ ಪರಂಪರೆಗಳನುಸಾರ ನಡೆದು ಘನತೆ ಹೆಚ್ಚಿಸುವಂತ ಸಾರ್ಥಕ ಸಾತ್ವಿಕ ಉತ್ಸವಗಳನ್ನು ನಡೆಸುವಂತಾಗಬೇಕಿದೆ. ಡಿಜೆ ಎನ್ನುವುದು ನಮ್ಮ ಸಂಪ್ರದಾಯದ ಭಾಗವಲ್ಲ ಆದರೆ ಅದನ್ನು ಬೇಡ ಎನ್ನುವುದು ನನ್ನ ಉದ್ದೇಶವಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶವೆ ಡಿಜೆಗೆ ನಿಷೇದ ಹೇರಿದೆ ಅದರ ಹಣವನ್ನು ಇನ್ನಷ್ಟು ಉತ್ತಮ ಕಾರ್ಯಗಳಿಗೆ ತೊಡಗಿಸುವಂತಾಗಲಿ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ‌ ತಹಶೀಲ್ದಾರ ಗುರುರಾಜ್ ಹೇಳಿದರು.


ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಪ್ರಸಕ್ತ ವರ್ಷದ ಚೌತಿ ನಿಮಿತ್ತ ಆಯೋಜಿಸಲಾಗಿದ್ದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಶಾಂತಿ ಸುವ್ಯವಸ್ಥೆ ಕುರಿತು ಯಲ್ಲಾಪುರ ಪಿಐ ರಂಗನಾಥ ನೀಲಮ್ಮನವರ ಸರ್ಕಾರದ ನಿಯಮಾವಳಿಗಳನ್ನ. ಸಭೆಗೆ ವಿವರಿಸಿದರು. ಆಚರಣೆಗಳು ಆರೋಗ್ಯಕರವಾಗಿ ಸಂಸ್ಕಾರಯುತವಾಗಿರಬೇಕಿದೆ ಸಮಿತಿಗಳು ಆಚರಣೆಯ ವಿಚಾರದಲ್ಲಿ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲಿದ್ದು ಯಾವುದೆ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕಿದೆ ಎಂದರು.


ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಅಧಿಕಾರಿ ಮಂಜುನಾಥ ಅಗೇರ ಮಾತನಾಡಿ ಪಟ್ಟಣ ವ್ಯಾಪ್ತಿಯಲ್ಲಿ ಯಾವ ನಿಯಮಗಳಿವೆಯೊ ಅದೇ ಇಲ್ಲಿಗು ಲಾಗು ಆಗಲಿದೆ ಮತ್ತು ಹಬ್ಬದ ದಿನದಂದು ಅನುಮತಿ ಪತ್ರಕ್ಕಾಗಿ ಕಚೇರಿಗೆ ಬರುವ ಬದಲು ಈಗಲೇ ಬೇಕಾದ ಪತ್ರಗಳನ್ನು ಮಾಡಿಸಿಕೊಳ್ಳಿ ಎಂದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ್ ಗಾವಡೆ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಷ್ಟಾಪಿಸುವ ಗಣಪತಿಗಳ ಸಮಿತಿಗಳಿಗೆ ನಮ್ಮ ಕಚೇರಿ ಒಂಷರಲ್ಲೆ ಎಲ್ಲಾ ಇಲಾಖೆಗಳ ಅನುಮತಿ ಪತ್ರ ದೊರೆಯುವಂತಹ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದು ಆಚರಣೆಯನ್ನು ಶ್ರದ್ದಾ ಭಕ್ತಿಗಳಿಂದ ಮತ್ತು ಪರಿಸರ ಪೂರಕವಾಗಿ ಆಚರಿಸೋಣ ಎಂದರು.

ಹೆಸ್ಕಾಂ ಅಧಿಕಾರಿ ರಮಾಕಾಂತ್ ನಾಯ್ಕ್ ಮಾತನಾಡಿ ಗಣಪತಿ ಪೆಂಡಾಲ್ ಅಥವ ಶಾಶ್ವತ ಕಟ್ಟಡಗಳಲ್ಲಿ ವಿದ್ಯುತ್ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದತಕ್ಷಣ ತಾಂತ್ರಿಕ ದೋಷಗಳನ್ನು ಪರಿಹರಿಸಲಾಗುವುದು ಎಂದರು.

ಉಪ ವಲಯ ಅರಣ್ಯಾಧಿಕಾರಿ ಸಂಜಯ್ ಕುಮಾರ್ ಬರ್ಗೋಲಿ ಮಾತನಾಡಿ ಗಣಪತಿ ಪ್ರತಿಷ್ಟಾಪನೆ ನಿಮಿತ್ತ ನಮ್ಮ ಇಲಾಖೆಯ ಪಾತ್ರ ದೊಡ್ಡದಿರುವುದಿಲ್ಲ ಆದರೆ ಪರಿಸರಕ್ಕೆ ಮಾರಕವಾಗಬಲ್ಲ ರಾಸಾಯನಿಕ ಬಣ್ಣಗಳು, ಪ್ಲಾಸ್ಟಿಕ್ ಸಾಮಾಗ್ರಿ, ಪಟಾಕಿಗಳ ಬಳಕೆ ತಗ್ಗಿಸಬೇಕಿದೆ ಎಂದರು.

ಅಗ್ನಿಶಾಮಕ ದಳ ಠಾಣಾಧಿಕಾರಿ ಶಂಕರ ಅಂಗಡಿ ಮಾತನಾಡಿ ಪ್ರತಿ ಗಣಪತಿ ಪ್ರತಿಷ್ಠಾನ ಸ್ಥಳಗಳಲ್ಲಿ ಅಗ್ನಿ ಸಂಬಂಧ ಏನೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೊ ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ನಿರ್ಲಕ್ಷ್ಯ ತೋರದೆ ಅಗ್ನಿ ಅವಘಡ ಸಂಭವಿಸದಂತೆ ಜಾಗೃತಿ ನಿಯಮಗಳನ್ನು ಪಾಲಿಸಬೇಕು ಹಾಗು ಆಕಸ್ಮಿಕವಾಗಿ ಸಂಭವಿಸಿದರೆ ತಡಮಾಡದೆ ದೂರವಾಣಿ ಕರೆಮಾಡಬೇಕು ಎಂದರು.

ಲೋಕೋಪಯೋಗಿ ಇಲಾಖೆ ಅಧಿಕಾರಿ ರವಿ, ಪಿಎಸ್ಐ ನಿರಂಜನ್ ಹೆಗಡೆ ಇತರ ಪ್ರಮುಖರು ಉಪಸ್ಥಿತರಿದ್ದು ತಮ್ಮ ಇಲಾಖೆಯ ಅಡಿಯಲ್ಲಿ ಗಣೇಶೋತ್ಸವ ಆಚರಣೆಗೆ ಬೇಕಿರುವ ಸಮ್ಮತಿ ಮತ್ತು ಜಾಗೃತಿ ಕುರಿತು ಮಾತನಾಡಿದರು.


ಸಭೆಯಲ್ಲಿ ನೆರೆದಿದ್ದ ನೂರಾರು ಮಂದಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸದಸ್ಯರು ಪ್ರಮುಖರು ಹಾಗು ಪತ್ರಕರ್ತರು ವಿವಿಧ ವಿಚಾರ ಗೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.


ಪಿ.ಎಸ್.ಐ ರವಿಗುಡ್ಡಿ ಸ್ವಾಗತಿಸಿದರು. ಮಹಿಳಾ ಪೊಲೀಸ್ ರೇಖಾ ನಿರೂಪಿಸಿದರು. ಪಿ.ಐ ರಂಗನಾಥ ನೀಲಮ್ಮನವರ್ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *