Breaking News

ಕಾಡು ಪ್ರಾಣಿಗಳಿಂದಾದ ಹಾನಿಗೆ ಪರಿಹಾರ ನೀಡಿ.ರಕ್ಷಣೆಗೆ ಸಲಕರಣೆ ನೀಡಿ-ಜಯ ಕರ್ನಾಟಕ ಸಂಘಟನೆ ಮನವಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ, ಯಲ್ಲಾಪುರ : ಕಾಡು ಪ್ರಾಣಿಗಳಿಂದ ರೈತರ ಬೆಳೆಗೆ ಹಾನಿಯಾಗುತಿರುವ ಕುರಿತು, ಜಯ ಕರ್ನಾಟಕ ತಾಲೂಕಾ ಸಂಘಟನೆ, ರೈತರಿಂದ, ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಕಿರವತ್ತಿಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಕಿರವತ್ತಿ ವಲಯ ಪ್ರದೇಶವು ದಟ್ಟರಣ್ಯದಿಂದ ಕೂಡಿರುತ್ತದೆ. ಕಾರಣ ಈ ಭಾಗದ ನಿವಾಸಿಗಳೆಲ್ಲರೂ ಬಹುತೇಕವಾಗಿ ಕೃಷಿಕರೇ ಆಗಿದ್ದು ಕೃಷಿ ಚಟುವಟಿಕೆಯಿಂದ ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ,

ಕಿರವತ್ತಿ ವಲಯ ವ್ಯಾಪ್ತಿಯಲ್ಲಿ ಬರುವ ಕಿರವತ್ತಿ, ಮದನೂರ, ಹುಣಶೆಟ್ಟಿಕೊಪ್ಪ, ಖಂಡ್ರಾನಕೊಪ್ಪ,ಮಾದೇವಕೊಪ್ಪ, ಹುಲಗೋಡ ಹಾಗೂ ಇತರೇ ಪ್ರದೇಶದಲ್ಲಿ ಇರುವ ಕೃಷಿ ಭೂಮಿಗಳಿಗೆ ಕಾಡು ಪ್ರಾಣಿಗಳು ನುಗ್ಗಿ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಸಿದ ಫಸಲನ್ನು ತಿಂದುಹಾಕುವುದರ ಜೊತೆಯಲ್ಲಿ ಅವುಗಳನ್ನು ತುಳಿದು ಹಾಕಿ ನಾಶಪಡಿಸುತ್ತಿರುವ ಸಂಗತಿ ನಮ್ಮ ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಕಾರಣ ಈ ದಿಶೆಯಲ್ಲಿ ರೈತರು ಸಂಕಷ್ಟಕ್ಕೋಳಗಾಗುತ್ತಿರುವ ಜೊತೆಯಲ್ಲಿ ಹಾನಿಯನ್ನು ಅನುಭವಿಸುವಂತೆ ಆಗಿರುತ್ತದೆ. ‌

ಈ ನಿಟ್ಟಿನಲ್ಲಿ ರೈತರು ಎದುರಿಸುತ್ತಿರುವ ಸಮಸ್ಯಗೆ ಶಾಶ್ವತ ಪರಿಹಾರ ಒದಗಿಸಲು ಸರ್ವೆ ಕಾರ್ಯ ನಡೆಸಿ ರೈತರ ಕೃಷಿ ಭೂಮಿಗಳಿಗೆ ಕಾಡು ಪ್ರಾಣಿಗಳು ನುಗ್ಗದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಕೃಷಿಕರಿಗೆ ಇಲಾಖೆಯಿಂದ ಉಚಿತವಾಗಿ ಸೂಕ್ತ ಪರಿಕರಗಳನ್ನು ಹಾಗೂ ಸಾಮಗ್ರಿಗಳನ್ನು ವಿತರಿಸುವಂತೆ ಹಾಗೂ ಕೃಷಿಕರ ಬೆಳೆ ಹಾನಿಗೆ ತಮ್ಮ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಸಂಘಟನೆಯ ಅಧ್ಯಕ್ಷ ವಿಲ್ಸನ್ ಆರ್.ಫರ್ನಾಂಡಿಸ್,
ತಾಲೂಕು ಎಸ್.ಸಿ/.ಎಸ್.ಟಿ ಅಧ್ಯಕ್ಷ ಚನ್ನಪ್ಪ ಡಿ ಹರಿಜನ, ಸಂಚಾಲಕ ಸುಭಾಸ ಡಿ. ಹರಿಜನ, ಡಿ.ಎಸ್.ಎಸ್.ತಾಲೂಕಾ ಉಪಾಧ್ಯಕ್ಷ ಅಶೋಕ ಬಿ.ಹೆಚ್. ರೈತ ಮುಖಂಡರಾದ ಹರುನ್ ಶೇಖ್, ಶೌಕತ ಪಟೇಲ, ಮಹ್ಮದ ಅಲಿ ಪಟೇಲ, ಆಲೆಕ್ಸ್ ಸಿದ್ದಿ, ಜಾಫರ ಒಂಟಿ, ಇಮಾಮ ಹುಸೇನ ಕಣವಿ, ಗಣಪತಿ ಶಿರನಾಳಕರ, ಕೃಷ್ಣಾ ಲಮಾಣಿ, ಮತ್ತು ಎಲ್ಲಾ ಘಟಕ ಅಧ್ಯಕ್ಷರು ಹಾಗೂ ಸದ್ಯಸರು ಉಪಸ್ಥತಿರಿದ್ದ್ದರು.

.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *