

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ
ಆತ್ಮೀಯ ಯಲ್ಲಾಪುರ ತಾಲೂಕಿನ ನೆಲದ ನಿವಾಸಿ ನಲ್ಮೆಯ ನಾಗರಿಕರೆ
ದೇಶಕ್ಕೆ ಅನ್ನ ನೀಡುವ ರೈತರಿಗೆ ಈ ವರ್ಷದ ಮುಂಗಾರು ಆತಂಕ ತಂದೊಡ್ಡುತ್ತಿದೆ. ಹವಾಮಾನ ಇಲಾಖೆಯು ಸಹ ಮುಂಗಾರು ತಡವಾಗಿ ಪ್ರಾರಂಭವಾಗಲಿದೆ ಎಂದು ಧೈರ್ಯ ತುಂಬುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗುತ್ತಿದ್ದಾರೆ ಇನ್ನೂ ಕೆಲವರು ಕತ್ತೆ,ಕಪ್ಪೆ,ಮದುವೆ ಮಾಡಿಸಿ ವರುಣದೇವನನ್ನು ಒಲಿಸಿಕೊಂಡು ಭುವಿಗೆ ಮಳೆಯಾಗಿ ಸುರಿವಂತೆ ಪ್ರಾರ್ಥಿಸುತ್ತಿದ್ದಾರೆ. ಇವರೆಲ್ಲರ ಸತ್ಪ್ರಯತ್ನಗಳು ರೈತನ ಭೂಮಿ ಹಸಿರಾಗಿ ದೇಶಕ್ಕೆ,ರಾಜ್ಯಕ್ಕೆ, ಜಿಲ್ಲೆಗೆ, ತಾಲೂಕಿಗೆ, ಗ್ರಾಮಕ್ಕೆ ಆಹಾರದ ಕೊರತೆಯಾಗದಿರಲಿ, ಜೀವಜಲ ತುಂಬಿ ಹರಿಯಲಿ ಗಂಗೆ ಪ್ರಸನ್ನಳಾಗಿ ಬರದ ಛಾಯೆ ಬಾರದಿರಲಿ ಎಂದು.
ಇಂತಹ ಸದುದ್ದೇಶದ ಪ್ರಯತ್ನ ನಮ್ಮಲ್ಲು ಆಗಬೇಕಿದೆ ಬಂಧುಗಳೆ ಪಕ್ಷ,ಪಂಗಡ, ಜಾತಿ,ಅಂತಸ್ಥು, ಧರ್ಮ ಉಳಿದೆಲ್ಲಾ ಮಾನವ ಸೃಷ್ಟಿಸಿಕೊಂಡಿರುವ ಬೇಧ ಭಾವ ಮರೆತು ಈ ಸೀಮೆಯ ತಾಲೂಕಿನ ಜನರ,ಜಾನುವಾರುಗಳ,ಪರಿಸರ, ಸಕಲ ಪ್ರಾಣಿಗಳ ಜೀವಜಲ, ಅನ್ನ ಆಹಾರಗಳ ಜನರ ಯೋಗಕ್ಷೇಮ ಕಾಯುತ್ತಾ ಬಂದಿರುವ ನಮ್ಮೆಲ್ಲರ ಶಕ್ತಿ ಈ ನೆಲದ ಭಕ್ತಿ ತಾಯಿ “ಗ್ರಾಮದೇವಿ” ಯರಿಗೆ ಈ ನೆಲದ ಪ್ರತಿಯೊಂದು ಸಮುದಾಯಗಳ ಸಮಸ್ತ ಭಕ್ತಬಂಧುಗಳು ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರೆ ವರುಣ ದೇವನೊಲಿದು ಭುವಿಗೆ ಮಳೆ ಸುರಿವನು ಇಳೆಯು ಹಸಿರಾಗಿ ರೈತರ ಬಾಳು ಹಸನಾಗಿ ತಾಲೂಕಿನ ಆರ್ಥಿಕ ಮತ್ತು ಆಹಾರದ ವಹಿವಾಟು ಸುಲಲಿತವಾಗಿ ಸಾಗಲಿದೆ.
ಇದು ಗ್ರಾಮದೇವಿ ತಾಯಿ ನೆಲೆಸಿರುವ ಸುಕ್ಷೇತ್ರ ಯಲ್ಲಾಪುರ ಸದಾ ಋಣಿಯಾಗಿರುವ ” ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಮತ್ತು ಪ್ರತಿಧ್ವನಿ ಯಲ್ಲಾಪುರ ಯೂ-ಟ್ಯೂಬ್ ಚಾನಲ್ “ ವತಿಯಿಂದ ಯಲ್ಲಾಪುರದ ಹಿರಿಯರು ಪ್ರಮುಖರು ವಿಶೇಷವಾಗಿ ಗ್ರಾಮದೇವಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರಲ್ಲಿ ವಿನಯಪೂರ್ವಕ ಪ್ರಾರ್ಥನೆ.
ಕೋರಿಕೆಯಲ್ಲಿ ಲೋಪವಿದ್ದರೆ ಕ್ಷಮಿಸಿ
ಶ್ರೀಮತಿ ಶ್ಯಾಮಲಾ ನಾಗೇಶ್
ಪ್ರಧಾನ ಸಂಪಾದಕಿ
ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್
ಗ್ರಾಮದೇವಿ ಸುಕ್ಷೇತ್ರ ಯಲ್ಲಾಪುರ(ತಾ)
ಉತ್ತರ ಕನ್ನಡ (ಜಿ )
ವಿ..ಸೂ..- ಯಲ್ಲಾಪುರ ತಾಲೂಕಿನ ಪ್ರತಿ ಸಮುದಾಯಗಳು ಪೂಜಾ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತಾಗಬೇಕು
🛕ಧನ್ಯವಾದಗಳು🛕

Prathidvani Yellapura