Breaking News

ಸಂಸ್ಕಾರ ಮಾನವನ ಔನ್ನತ್ಯದ ಅಡಿಪಾಯ….

ಸಂಸ್ಕಾರದಲ್ಲಿ ಎರಡು ರೀತಿಯ ಸಂಸ್ಕಾರವನ್ನು ಕಾಣಬಹುದು . ಒಂದು ಹಿಂದೂ ಧರ್ಮದಲ್ಲಿ ಬರುವ ನಾಮಕರಣ , ಅನ್ನಪ್ರಾಶನ , ಉಪನಯನ , ಕನ್ಯಾ ಸಂಸ್ಕಾರ, ವಿವಾಹ , ಇತ್ಯಾದಿ. ಇನ್ನೊಂದು
ಸತ್ಯ , ಧರ್ಮ, ನೀತಿ , ಕರುಣೆ, ಶಾಂತಿ,ನಂಬಿಕೆ , ಸ್ನೇಹ, ತ್ಯಾಗ, ಆಚಾರ ಇವು ಜಾತಿ , ಧರ್ಮ, ಅಂತಸ್ತುಗಳ ಮೀರಿದ ಭಾರತೀಯ ಪರಂಪರೆಯ ಶ್ರೇಷ್ಠ ಸಂಸ್ಕೃತಿಯೆನ್ನಬಹುದು . ಸಂಸ್ಕಾರವೆನ್ನುವುದು ಮಗುವಿಗೆ ತಾಯಿಯ ಗರ್ಭದಲ್ಲಿಂದಲೇ ಪ್ರಾರಂಭವಾಗುವ ಕ್ರಿಯೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಚಕ್ರವ್ಯೂಹವನ್ನು ಬೇಧಿಸುವ ರೀತಿಯನ್ನು ಉತ್ತರೆಗೆ ಅರುಹುತ್ತಿರುವಾಗ
ಉತ್ತರೆಯ ಗರ್ಭದಲ್ಲಿರುವ ಅಭಿಮನ್ಯುವು ಅದನ್ನು ಆಲಿಸಿ ಅದಕ್ಕೆ ಸ್ಪಂದಿಸಿದ ರೀತಿಯೇ ಇದಕ್ಕೆ ನಿದರ್ಶನ.

ಇದು ಕೇವಲ ವಿದ್ಯೆಯಿಂದಲೋ , ಮಕ್ಕಳುಪಡೆದುಕೊಳ್ಳುವ ಅಂಕಗಳಿಂದಲೋ ಬರುವಂಥದ್ದಲ್ಲ.ವಿದ್ಯೆಯ ಜೊತೆಗೆ ಸಂಸ್ಕಾರ ಸೇರಿರಲು ಹಾಲು ಜೇನು ಬೆರೆತಂತೆ.
ಬುದ್ಧಿ ಬಲಿಯುತ್ತಿರುವ ಮಗುವಿಗೆ ಸಮಾಧಾನದಿಂದ ಸರಿತಪ್ಪುಗಳ ಕಲ್ಪನೆ ನೀಡಿ ಅದರ ಅರಿವು ಮೂಡಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಈ ಸಂದರ್ಭದಲ್ಲಿ ತನ್ನದೆಂಬ ವ್ಯಾಮೋಹವನ್ನು ತೊರೆದು ತಪ್ಪನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವುದರಿಂದ ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ.

ಸುಳ್ಳು ಮಾನವನ ಆತ್ಮಸ್ಥೈರ್ಯವನ್ನು ಕೊಲ್ಲುತ್ತದೆ. ಸತ್ಯವಂತರಿಗೆ ನಾಲ್ಕಾರು ಬಾರಿ ಕಷ್ಟಗಳು ಎದುರಾದರೂ ಕೊನೆಯಲ್ಲಿ ಜಯ ಸತ್ಯಕ್ಕೇ.ಸಂಸ್ಕಾರವಂತ ಮನುಷ್ಯ ಎಷ್ಟೇಸಿರಿವಂತನಾಗಿರಲಿ , ಉನ್ನತ
ಹುದ್ದೆಯಲ್ಲಿರಲಿ ಅಥವಾ ಕಡುಬಡವನೇ ಆಗಿರಲಿ ಅವನನ್ನು ಸಮಾಜ ನೋಡುವ ದೃಷ್ಟಿಕೋನ ,ಗೌರವಿಸುವ ರೀತಿಯೇ ಭಿನ್ನ. ಯಾರಿಗೆ ಉತ್ತಮ ಸಂಸ್ಕಾರವಿದೆಯೋ ಅವರು ಸಮಾಜಕ್ಕೆ ಸದಾಕಾಲ ಮಾದರಿಯಾಗಿರುತ್ತಾರೆ.

ನಾಮದ ಬಲವೊಂದಿದ್ದರೆ ಸಾಕೊ ಎಂಬಂತೆ ಸಂಸ್ಕಾರದ ಬಲ ಮನುಷ್ಯನನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುತ್ತದೆ . ಆಕಾರವಿಲ್ಲ , ಬಣ್ಣವಿಲ್ಲ , ವಾಸನೆಯಿಲ್ಲ , ರೂಪವಿಲ್ಲದ ಇದಕ್ಕೆ ಆಂತರಿಕ ಸೊಬಗೇ ಹೊರತು ಆಡಂಬರದ್ದಲ್ಲ.
ರಾಮಾಯಣದಲ್ಲಿ ರಾವಣ , ಮಹಾಭಾರತದಲ್ಲಿ ದುರ್ಯೋಧನ ಎಷ್ಟೇ ಪರಾಕ್ರಮಿಗಳೇ , ಅಧ್ಯಯನಶೀಲರೇ ಆಗಿರಲಿ ರಾಮಕೃಷ್ಣರಿಗೆ ಲಭಿಸಿದ ಮಾನ್ಯತೆ ಶ್ರೇಯಸ್ಸು ಅವರಿಗೆ ದೊರೆಲಿಲ್ಲ.

ಗುರು ಹಿರಿಯರಲ್ಲಿ
ವಿಧೇಯತೆಯಿಂದಿರುವುದು,ಅಶಕ್ತರಲ್ಲಿ ,ಅಂಗವಿಕಲರಲ್ಲಿ ಕರುಣೆ , ನಯವಿನಯದ ನಡೆನುಡಿ, ಕಷ್ಟದಲ್ಲಿರುವವರಿಗೆ ನಮ್ಮ ಕೈಲಾದ ಸಹಾಯ ಮಾಡುವುದುದು , ಸುಳ್ಳು ವಂಚನೆಮಾಡದೇ ಅತಿ ಆಸೆಯನ್ನು ತೊರೆದು ನಡೆಯುವುದು , ಅಧಿಕಾರ , ಹಣ , ಪ್ರತಿಷ್ಟೆಗೆ ಹಾತೊರೆಯದೇ ಇದ್ದುದರಲ್ಲೇ ಸಂತೃಪ್ತಿ ಯನ್ನು ಕಾಣುವುದು , ಪರರನ್ನು ನಿಂದಿಸದಿರುವುದು , ಅನ್ಯರ ಹಿತವನ್ನು ಕಂಡು ಅಸೂಯೆ ಪಡದಿರುವುದು, ಪ್ರತಿಫಲಾಪೇಕ್ಷೆ ಇಲ್ಲದ ಪರೋಪಕಾರ ಇವೆಲ್ಲ ಚಿಕ್ಕ ಚಿಕ್ಕ ವಿಷಯವಾಗಿ ಕಾಣಬಹುದು ಆದರೆ ಈ ಗುಣಗಳೇ ಮಾನವನನ್ನು ಅತೀ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಂಸ್ಕಾರ ಮಾಡುವ ಪಾತ್ರಗಳು

ಪ್ರತಿಧ್ವನಿ ಯಲ್ಲಾಪುರ ಓದುಗರಿಗೆ ವಂದನೆಗಳು ಪುಷ್ಪಾ ಮಾಳಕೊಪ್ಪ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪಟ್ಟಣ ಸಮೀಪದ ಅರಣ್ಯದಲ್ಲಿ ಶ್ರೀಗಂಧ ಚೋರರ ಕರಾಮತ್ತು ಗಂಧದ ಮರ ಕಡಿದ ಕಳ್ಳರು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಮೀಪದಲ್ಲಿರುವ ನಾರಾಯಣಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳರು ತಮ್ಮ ಕೈಚಳಕ ತೋರಿದ್ದು ಗುಣಮಟ್ಟದ ಮತ್ತು …

Leave a Reply

Your email address will not be published. Required fields are marked *