Breaking News

ಕ್ಷೇತ್ರಾದ್ಯಂತ ಯುವ ನಾಯಕ ವಿವೇಕ್ ಹೆಬ್ಬಾರ್ ಮಿಂಚಿನ ಸಂಚಾರ ಅಪ್ಪನ ಪರ ಚುನಾವಣಾ ಪ್ರಚಾರ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಕಳೆದ 10 ವರ್ಷದ ಹಿಂದೆ ಏನಿತ್ತು, ಹೇಗಿತ್ತು ಅನ್ನುವುದನ್ನು ನೀವೆಲ್ಲ ನೋಡಿದ್ದೀರಿ. ಹೆಬ್ಬಾರವರು ಈ ಕ್ಷೇತ್ರದ ಶಾಸಕರಾದ ಮೇಲೆ ತೀರಾ ಅಗತ್ಯವಾದ ನೀರು, ರಸ್ತೆ , ಆಸ್ಪತ್ರೆ ಹಾಗೂ ಬಸ್ ನಿಲ್ದಾಣ ಸೇರಿದಂತೆ ಹತ್ತಾರು ಸರ್ಕಾರಿ ಕಾರ್ಯಾಲಯಗಳನ್ನು ಮಾಡಿ ಜನಪರವಾದ ಕೆಲಸಮಾಡಿದ ಹಿರಿಮೆ ಅವರದ್ದು ಎಂದು ಬಿಜೆಪಿ ಯುವ ನಾಯಕ ವಿವೇಕ ಹೆಬ್ಬಾರ ಹೇಳಿದರು.
ಅವರು ಪಟ್ಟಣದ ಶಾರದಾಗಲ್ಲಿ, ಕೋರ್ಟ್ ವಾರ್ಡ್, ಕಾಳಮ್ಮನಗರ ಮುಂತಾದೆಡೆಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡುತ್ತಿದ್ದರು.


ಪಟ್ಟಣದಲ್ಲಿ ಇನ್ನು ಹಲವಾರು ಕೆಲಸಗಳು ಇರಬಹುದು. ಅಲ್ಲದೇ ಕೆಲವರ ವೈಯಕ್ತಿಕ ಮನೆ ಸೇರಿದಂತೆ ಹಲವು ಬೇಡಿಕೆಗಳು ಇರಬಹುದು. ಅವುಗಳನ್ನೆಲ್ಲ ಮುಂದಿನ ಹಂತಗಳಲ್ಲಿ ಪೂರ್ತಿಗೊಳಿಸುತ್ತಾರೆ. ಈ ಬೂತಿನಲ್ಲಿ ಕಳೆದ ಸಲ 347 ಮತ ಲಭಿಸಿದೆ. ಈ ಚುನಾವಣೆಯಲ್ಲಿ 500 ದಾಟಬೇಕು. ಅದನ್ನು ಹೇಗೆ ತರಬೇಕು. ಯಾಕೇ ಹೆಬ್ಬಾರರಿಗೆ ಮತ ಹಾಕಬೇಕು ಎಂಬ ಕುರಿತು ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಕೇವಲ ಕರ ಪತ್ರ ಕೊಟ್ಟು ಹೋದರೆ ಆಗದು. ಪ್ರತಿ ಮತದಾರರನ್ನು ಭೇಟಿ ಮಾಡಿ ಚರ್ಚಿಸಿ, ಬೇಡಿಕೆಗೆ ಸ್ಪಂದಿಸಿ ಬಿಜೆಪಿ ಗೆ ಮತ ಬರುವಂತೆ ಕಾರ್ಯಕರ್ತರು ಹೆಚ್ಚು ಶ್ರಮವಹಿಸಬೇಕು ಎಂದರು.


ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ನಮ್ಮ ಸಚಿವ ಹೆಬ್ಬಾರವರು ಕ್ಷೇತ್ರದಲ್ಲಿ, ಪಟ್ಟಣದಲ್ಲಿಯೂ ಅಘಾದವಾದ ಕೆಲಸ ಮಾಡಿದ್ದಾರೆ. ಕಳೆದ 10 ವರ್ಷಗಳ ಹಿಂದೆ ನಮ್ಮ ತಾಲೂಕು ಹೇಗಿತ್ತು ಎಂಬುದನ್ನು ಯೋಚನೆ ಮಾಡಿ. ಆದರೂ ವಿಪಕ್ಷದವರು ಸಣ್ಣಪುಟ್ಟ ದೋಷಗಳನ್ನೇ ಹುಡುಕಿ ಮತದಾರರಿಗೆ ತಪ್ಪು ಮಾಹಿತಿ ನೀಡಬಹುದು. ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದರೂ ಎಲ್ಲೊ ಸಣ್ಣಪುಟ್ಟ ಆಗದ ಕೆಲಸ ಎತ್ತಿ ತೋರಬಹುದು. ಹಾಗಾಗಿ ಅಂತವರಿಗೆ ತಕ್ಕ ಉತ್ತರ ನೀಡಿ. ಇಂತಹ ಶಾಸಕರು ಸಿಗುವುದಕ್ಕು ಭಾಗ್ಯ ಬೇಕು ಎಂದರು.
ಪ.ಪA ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ, ನೀವೆಲ್ಲ ಅನೇಕ ಶಾಸಕರನ್ನು, ಮಂತ್ರಿಗಳನ್ನು ನೋಡಿರಬಹುದು ಆದರೆ ಹೆಬ್ಬಾರವರು ಪ್ರತಿನಿತ್ಯ ಎಂತಹ ಬಡವರು ಬಂದರು ಸ್ಪಂದಿಸಿ ಮಾತನಾಡಿಸುವ ಸರಳ, ಸೌಜನ್ಯದ ವ್ಯಕ್ತಿಯಾಗಿದ್ದಾರೆ. ಬಡವರ ಬಗ್ಗೆ ಅತಿಯಾದ ಪ್ರೀತಿಯಿದೆ. ನೀವು ದೂರದಿಂದಲೇ ಹೆಬ್ಬಾರರು ಮಾತನಾಡಿಸಲಿಕ್ಕಿಲ್ಲ ಎಂದು ತಿಳಿದು ದೂರವಿರಬೇಡಿ. ಹತ್ತಿರ ಬಂದು ಮಾತನಾಡಿ. ಹಿಂದೆ ಹೇಗಿತ್ತು. ಇಂದು ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ನೀವೆಲ್ಲ ನೋಡುತ್ತಿದ್ದಿರಿ ಆದ್ದರಿಂದ ಬಿಜೆಪಿ ಅಭ್ಯರ್ಥಿಯಾದ ಹೆಬ್ಬಾರರಿಗೆ ಹೆಚ್ಚಿನ ಮತ ಬೀಳುವಂತೆ ಮಾಡಬೇಕು ಎಂದು ವಿನಂತಿಸಿದರು.
ಸ್ಥಳಿಯರಾದ ಮಹಾದೇವ ಶೇಟ್ ಮಾತನಾಡಿ, ನಾವು ಸದಾ ಬಿಜೆಪಿಯವರೆ ಆದರು ಒಮ್ಮೆ ನಮ್ಮವರೆಂದು ಹೆಬ್ಬಾರರಿಗೆ ಮತ ಹಾಕಿದ್ದೆವೆ. ಈಗಂತೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವಂತಾಗಬೇಕು ಎಂದರು.
ಪ್ರಮುಖರಾದ ಶಿರೀಷ ಪ್ರಭು, ಪ.ಪಂ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಪ.ಪಂ ಸದಸ್ಯ ಅಮೀತ್ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *