ಪ್ರತಿಧ್ವನಿ,ಯಲ್ಲಪುರ – ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ಅಲ್ಲಿನ ಜಯಕರ್ನಾಟಕ ಸಂಘಟನೆ ಅಂಬೇಡ್ಕರ್ ಜಯಂತಿ ಆಚರಣೆಯನ್ನು ವಿನೂತನ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.


ಬೆಳಗ್ಗೆ ತಮ್ಮ ಸಂಘಟನೆಯ ಕಾರ್ಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಿ ಭಕ್ತಿ ಭಾವದಿಂದ ಆಚರಿಸಿದ್ದ ಸಂಘಟನೆ ಪ್ರಮುಖರು ಮತ್ತು ಸದಸ್ಯರು ಸಂಜೆ ವೇಳೆಗೆ ಅಲ್ಪ ಸಂಖ್ಯಾತ ಮುಸ್ಲಿಂ ಸಮೂದಾಯದವರು ಆಚರಿಸುತ್ತಿರುವ ರಂಜಾನ್ ಆಚರಣೆಯ ಉಪವಾಸ (ರೋಜಾ) ಬಿಡುವ ವೇಳೆಗೆ ವಿಶೇಷ ಉಪಹಾರದ ವ್ಯವಸ್ಥೆ ಇಫ್ತಿಯಾರ್ ಕೂಟ ಮಾಡಿರುವುದು ವಿಶೇಷವಾಗಿದೆ.

ಅಂಬೇಡ್ಕರ್ ಜಯಂತಿ ಆಚರಣೆಯ ದಿನದಂದೆ ಅವರ ಕನಸಿನಂತೆ ಭಾರತವು ಧರ್ಮ ಜಾತಿ ಭೇದ ಮರೆತು ದೇಶವು ಸಮಾನತೆ ಎಡೆಗೆ ಸಾಗಬೇಕಿದೆ ಎಂಬ ಸಂದೇಶ ಸಾಕಾರ ಗೊಳಿಸಿದಂತಿದೆ.

ಇಂತಹ ಆತ್ಮೀಯತೆಯ ನಡವಳಿಗಳಿಂದ ಮನುಷ್ಯರ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತದೆ ಅದೇ ವಿಶ್ವ ಮಾನವ ತತ್ವದೆಡೆಗೆ ಸಾಗುವ ಮಾರ್ಗವು ಆಗಿದೆ.
ಇಂತಹ ವಿನೂತನ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಜಯ ಕರ್ನಾಟಕ ಸಂಘಟನೆ ಪ್ರಶಂಸೆಗೆ ಪಾತ್ರವಾಗಿದೆ.




Prathidvani Yellapura