Breaking News

ಎಲ್.ಎಸ್.ಎಂ.ಪಿ ಸೊಸೈಟಿ ಚುನಾವಣೆ ಮತ ಎಣಿಕೆ ನಾಗರಾಜ್ ಕವಡಿಕೆರಿತಂಡ ಜಯಭೇರಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ತಾಲೂಕಿನ ಎಲ್.ಎಸ್.ಎಂ.ಪಿ, ಆನಗೋಡು ಮತ್ತು ಇಡಗುಂದಿ ಸೊಸೈಟಿಗಳ ಚುನಾವಣೆ ನಡೆದು ಫಲಿತಾಂಶಕ್ಕಾಗಿ ದಿನಗಟ್ಟಲೇ ಕಾದು ಕುಳಿತಿದ್ದ ಅಭ್ಯರ್ಥಿಗಳಿಗೆ ನಿರಾಳವಾದಂತಾಗಿದ್ದು ನ್ಯಾಯಾಲಯದ ನಿರ್ದೇಶನದಂತೆ ಶನಿವಾರ ಮತ ಎಣಿಕೆ ನಡೆದಿದ್ದು ಎಲ್.ಎಸ್.ಎಂ.ಪಿ ಸೊಸೈಟಿಯ ಫಲಿತಾಂಶ ಹೊರಬಿದ್ದಿದ್ದು ನಾಗರಾಜ್ ಕವಡಿಕೆರೆ ತಂಡ ಜಯಭೇರಿ ಬಾರಿಸಿದೆ.

ತೀವ್ರ ಚರ್ಚೆಗೆ ಗ್ರಾಸವಾಗಿದ್ದ ತಾಲೂಕಿನ ಮೂರು ಸೊಸೈಟಿಗಳ ಚುನಾವಣೆ ನ್ಯಾಯಾಲಯದ ನಿರ್ದೇಶನದಂತೆ ನಡೆದಿತ್ತು. ಕೆಲವು ಸದಸ್ಯರು ತಮಗೂ ಮತದಾನದ ಅವಕಾಶ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಅದರಂತೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಚುನಾವಣೆ ನಡೆದ ನಂತರ ಫಲಿತಾಂಶ ಪ್ರಕಟಕ್ಕೆ ನ್ಯಾಯಾಲಯದ ನಿರ್ದೇಶನಕ್ಕೆ ಕಾಯಬೇಕಾಗಿ ಬಂದಿತು. ಈ ಹಿನ್ನಲೆಯಲ್ಲಿ ಮತಪೆಟ್ಟಿಗೆಗಳನ್ನು ತಾಲೂಕಿನ ಉಪಖಜಾನೆ ಸುಪರ್ದಿಯಲ್ಲಿ ಭದ್ರವಾಗಿರಿಸಲಾಗಿತ್ತು. ಆದರೆ ಮತಪೆಟ್ಟಿಗೆಯಲ್ಲಿ ವ್ಯತ್ಯಯವಾಗುವ ಸಂಶಯ ಕೆಲವು ಅಭ್ಯರ್ಥಿಗಳನ್ನು ಕಾಡಿದ ಹಿನ್ನಲೆಯಲ್ಲಿ ದಿನನಿತ್ಯ ಎರಡು ಪಾಳಿಯಲ್ಲಿ ಹಗಲು-ರಾತ್ರಿ ಉಪಖಜಾನೆ ಸುತ್ತಮುತ್ತ ಕಾವಲು ಕಾಯುತ್ತಾ ಪತ್ರಿಕೆಗಳಲೆಲ್ಲಾ ಸುದ್ದಿಯಾಗಿದ್ದರು. ಒಂದು ಹಂತದಲ್ಲಿ ಅಸೆಂಬ್ಲಿ ಚುನಾವಣೆಗಿಂತ ಜಿದ್ದಾಜಿದ್ದಿ ಏರ್ಪಟ್ಟಿದ್ದ ಚುನಾವಣೆ ಇದಾಗಿತ್ತು.


ಸದ್ಯ ಶನಿವಾರ ಎಲ್.ಎಸ್.ಎಂ.ಪಿ ಸೊಸೈಟಿಯ ಮತ ಎಣಿಕೆ ನಡೆದಿದ್ದು ಸಾಮಾನ್ಯ ವರ್ಗದಲ್ಲಿ ನಾಗರಾಜ ನಾರಾಯಣ ಕವಡೀಕೆರೆ, ನರಸಿಂಹ ಕೋಣೆಮನೆ, ಟಿ.ಆರ್ ಹೆಗಡೆ, ಆರ್.ಎಸ್ ಭಟ್ಟ, ತಿಮ್ಮಣ್ಣ ಘಟ್ಟಿ ಜಯಗಳಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಪ್ರಭಾ ಪ್ರಕಾಶ ಭಾಗ್ವತ, ಶಾಮಲಾ ಗಣಪತಿ ಹೆಗಡೆ ವಿಜಯಶಾಲಿಗಳಾಗಿದ್ದಾರೆ. ಅ-ವರ್ಗದಲ್ಲಿ ಅಪ್ಪು ಆಚಾರಿ, ಬ-ವರ್ಗದಲ್ಲಿ ಗ್ಯಾಬ್ರಿಯಲ್ ಫ್ರಾನ್ಸಿಸ್ ಫರ್ನಾಂಡಿಸ್, ಪ.ಜಾತಿ ವಿಭಾಗದಿಂದ ಹನುಮಂತ ಶಿವಪ್ಪ ಕೊರವರ ಹಾಗೂ ಸಾಲಗಾರ ಅಲ್ಲದ ಕ್ಷೇತ್ರದಿಂದ ಸುಬ್ರಾಯ ಎನ್ ಭಟ್ಟ ಜಯಭೇರಿ ಬಾರಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಒಂದು ಸೊಸೈಟಿಯ ಫಲಿತಾಂಶ ಹೊರಬಿದ್ದಂತಾಗಿದೆ. ಇನ್ನೂ ಎರಡು ಸೊಸೈಟಿಗಳ ಫಲಿತಾಂಶ ಬಾಕಿ ಇದ್ದು ರವಿವಾರ ಆನಗೋಡು, ಸೋಮವಾರ ಇಡಗುಂದಿ ಸೊಸೈಟಿ ಫಲಿತಾಂಶ ಪ್ರಕಟವಾಗಲಿದೆ.


ಶನಿವಾರ ಬೆಳಿಗ್ಗೆ ಮತ ಎಣಿಕೆಗಾಗಿ ಪೆಟ್ಟಿಗೆಗಳನ್ನು ಉಪಖಜಾನೆಯಿಂದ ಅಧಿಕಾರಿಗಳು ವಾಹನವೊಂದರಲ್ಲಿ ಸಾಗಿಸುವಾಗ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ವಾಹನಕ್ಕೆ ಬೆಂಗಾವಲು ಪಡೆಯಂತೆ ಹಿಂಬಾಲಿಸಿ ಸಂಕಲ್ಪ ಎದುರಿನ ಉರ್ದು ಶಾಲೆಯಲ್ಲಿ ಏರ್ಪಡಿಸಿದ್ದ ಮತ ಎಣಿಕೆ ಕೇಂದ್ರಕ್ಕೆ ಕೊಂಡೊಯ್ದ ಪರಿ ಸಿನಿಮೀಯ ರೀತಿಯಲ್ಲಿತ್ತು. ಎಣಿಕೆ ಕಾರ್ಯ ಸಂಜೆಯವರೆಗೂ ನಡೆದದ್ದು ವಿಶೇಷವೆನಿಸಿತ್ತು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *