

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಜನರ ತೆರಿಗೆ ಹಣವೆಂದರೆ ಸರ್ಕಾರಕ್ಕೆ ಅದೇಕೊ ತಾತ್ಸಾರ ಎನಿಸುತ್ತಿದೆ ಅದಕ್ಕೆ ಜ್ವಲಂತ ನಿದರ್ಶನ ಎಂಬಂತೆ ಪಟ್ಟಣದ ತರಕಾರಿ ಮಾರುಕಟ್ಟೆಗೆ ಹೊಂದಿಕೊಂಡ ಪಟ್ಟಣ ಪಂಚಾಯತ ವಾಣಿಜ್ಯ ಮಳಿಗೆ ಸೋರುತ್ತಿದೆ ಮನವಿ ನೀಡಿದರು ಪ್ರಯೋಜನವಾಗಿಲ್ಲ.


ಪಟ್ಟಣದ ಹೊಸ ತರಕಾರಿ ಮಾರಕಟ್ಟೆ ಸಮೀಪ ಇರುವ ಪಟ್ಟಣ ಪಂಚಾಯತ ವಾಣಿಜ್ಯ ಮಳಿಗೆಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ಅಲ್ತಾಫ್ ಎ ಶೇಖ್ ಎಂಬುವರು ಕಳೆದ ಎರಡು ವರ್ಷಗಳಿಂದ ಮಳಿಗೆ ಸೋರುತ್ತಿರುವ ಕುರಿತು ಪಟ್ಟಣ ಪಂಚಾಯತಕ್ಕೆ ಅರ್ಜಿ ಸಲ್ಲಿಸುತ್ತಾ ಬಂದರು ಯಾವುದೆ ಅಧಿಕಾರಿಗಳಾಗಲಿ,ಪಂಚಾಯತ ಸದಸ್ಯರಾಗಲಿ ಅಥವ ಸಿಬ್ಬಂದಿಗಳಾಗಲಿ ಬಂದು ಪರಿಶೀಲಿಸಿ ಕ್ರಮ ಕೈಗೊಳ್ಳದೆ ನಮಗು ಇದಕ್ಕು ಸಂಬಂಧವೇ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತಿರುವುದು ಅಕ್ಷಮ್ಯವಾಗಿದ್ದು ಸರ್ಕಾರಿ ಸ್ವತ್ತು ಅಂದರೆ ಪ್ರಜೆಗಳ ಸ್ವತ್ತನ್ನು ಹಾಳುಗೆಡವುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರತಿಯೊಬ್ಬ ತೆರಿಗೆ ಪಾವತಿದಾರನ ಪ್ರಶ್ನೆಯಾಗಿದೆ.

ಇಂತಹದ್ದೆ ಸಮಸ್ಯೆ ಅಧಿಕಾರಿಗಳ ಅಥವ ಜನ ಪ್ರತಿನಿಧಿಗಳ ಸ್ವಂತ ಮನೆ ಅಥವ ವಾಣಿಜ್ಯ ಕಟ್ಟಡದಲ್ಲಿ ಆಗಿದ್ದರೆ ಸುಮ್ಮನಿರುತ್ತಿದ್ದಿರ ತಕ್ಷಣ ಸರಿಪಡಿಸುತ್ತಿದ್ದಿರಿ ಅಂದರೆ ಜನರ ತೆರಿಗೆ ಹಣವೆಂದರೆ ಅಷ್ಟು ತಾತ್ಸಾರವೆಂದಾಯಿತು. ಅದೇ ತೆರಿಗೆಯಲ್ಲಿಯೆ ನಿಮಗೆ ಸಂಬಳ ನೀಡುತ್ತಿರುವುದು ಅದೇ ಹಣದಲ್ಲಿಯೆ ಇಂತಹ ವರಮಾನ ಬರುಂತಹ ಕಟ್ಟಡ ಕಟ್ಟಿಸಿರುವುದು ಕನಿಷ್ಟ ಆ ಋಣಕ್ಕಾದರು ಕಟ್ಟಡ ನಮ್ಮದು ಎಂಬ ಭಾವದಲ್ಲಿ ಸರಿಪಡಿಸಬೇಕಿದೆ ಉಳಿಸಿಕೊಳ್ಳಬೇಕಿದೆ. ಇಂತಹ ಅನೇಕ ಸರ್ಕಾರಿ ಸ್ವತ್ತು ಅಂದರೆ ಜನರ ಸ್ವತ್ತು ಹಾಳಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡು ಜನರ ಆಸ್ತಿ ಉಳಿಸಬೇಕಿದೆ ಎಂಬುದು ಜನರ ಕೂಗಾಗಿದೆ.

ಮಳಿಗೆ ಸೋರುತ್ತಿರುವ ಅಥವ ದುರಸ್ತಿ ಇರುವ ಕುರಿತು ನನ್ನ ಗಮನಕ್ಕೆ ವಿಷಯ ಬಂದಿರಲಿಲ್ಲ ಹಾಗೇನಾದರು ಮೊದಲೆ ತಿಳಿದಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಸದ್ಯ ವಿಷಯ ಇದೀಗ ತಿಳಿದಿದ್ದು ಪಟ್ಟಣ ಪಂಚಾಯತ ಇಂಜಿನಿಯರ್ ಮತ್ತು ಸಿಬ್ಬಂದಿಗಳ ಗಮನಕ್ಕೆ ತಂದಿದ್ದೇನೆ ತುರ್ತು ಕ್ರಮದ ಭರವಸೆ ನೀಡಿದ್ದಾರೆ. ನಂತರ ಶಾಶ್ವತ ಸಮಸ್ಯೆ ಪರಿಹಾರದ ಕುರಿತು ಕ್ರಮ ಜರುಗಿಸಲಾಗುವುದು
ರಾಧಕೃಷ್ಣ ನಾಯ್ಕ್
ಪಟ್ಟಣ ಪಂಚಾಯತ ಸದಸ್ಯ
Prathidvani Yellapura