
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಗುಳ್ಳಪುರದಲ್ಲಿ ಗ್ರಾಮ ಪಂಚಾಯತ್ ಇದ್ದು ಇಲ್ಲದಂತಾಗಿದೆ.
ರಾಮನಗರ ದೇವಿಕಟ್ಟೆ ರೋಡಿನ ಅಂಚಿನಲ್ಲಿರುವ ಗಟಾರ ಕಸ ಕಡ್ಡಿ ತ್ಯಾಜ್ಯಗಳಿಂದ ತುಂಬಿ ಗಬ್ಬು ನಾರುತ್ತಿದ್ದು ಸುತ್ತಮುತ್ತಲಿನ ಜನ ಮೂಗು ಮುಚ್ಚಿ ತಿರುಗುವ ಪರಿಸ್ಥಿತಿ ಎದುರಾಗಿದೆ.

ಸಮಸ್ಯೆ ಪಂಚಾಯ್ತಿ ಅಧಿಕಾರಿಗಳ ಗಮನಕ್ಜೆ ತಂದರು ಸಹ ಸರಿಯಾದ ಗಮನ ಹರಿಸುತ್ತಿಲ್ಲ.
ಬೇಸರದ ಸಂಗತಿ ಏನೆಂದರೆ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಹ ಇದೆ ಗ್ರಾಮದವರಗಿದ್ದು ಅಧಿಕಾರಿಗಳು ಅವರ ಮಾತನ್ನು ಕೇಳುತಿಲ್ಲವೇನೊ ಅಥವಾ ಅವರ ಕಣ್ಣಿಗೆ ಈ ಸಮಸ್ಯೆ ಕಾಣಿಸುತ್ತಿಲ್ಲವೇನೊ ಎಂಬ ಅನುಮಾನ ಕಾಡುತ್ತಿದೆ.
ಈಗಾಗಲೇ ಎಲ್ಲೆಡೆ ಕರೋನ ಡೆಂಗ್ಯೂ ಮುಂತಾದ ಭಯಾನಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂಬ ಮಾಹಿತಿ ಇದ್ದು ಪುಟ್ಟ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ವಯೋ ವೃದ್ದರು ಪ್ರತಿನಿತ್ಯ ಕೊಳಚೆಯಿಂದ ನರಕ ಅನುಭವಿಸುತ್ತಿದ್ದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸುತ್ತೇನೆ.
ಮಹೇಶ್ ಕೃಷ್ಣನಾಯ್ಕ್ ಉಪಾಧ್ಯಕ್ಷ
ತಾಲೂಕು ಯೂಥ್ ಕಾಂಗ್ರೆಸ್
ಯಲ್ಲಾಪುರ

Prathidvani Yellapura