Breaking News

ಜೋಡುಕೆರೆ ಮಾರುತಿದೇವಸ್ಥಾನದ ಪರಿಸರ ಪ್ರವಾಸಿಗರಿಗೊಂದು ಸುಂದರ ವಿಶ್ರಾಂತ ತಾಣ.


ಕೇಬಲ್ ನಾಗೇಶ್,ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಜೋಡುಕೆರೆ ಎಂದರೆಬಹೆದ್ದಾರಿಯಲ್ಲಿ ಸಂಚರಿಸುವವರಿಗೆ ಸ್ವಾಗತ ಕೋರುವ ಮತ್ತು ಊರಿಂದ ಹೋರ ಹೋಗುವವರಿಗೆ ಶುಭ ವಂದನೆ ಹೇಳುವ ಸುಂದರ ಸ್ಥಳವಾಗಿದೆ. ಅದರಲ್ಲೂ ವಿಶೇಷವಾಗಿ ಜೋಡುಕೆರೆ ಮಾರುತಿ ದೇವಾಲಯದ ಪರಿಸರ ಯಾತ್ರಿಕರಿಗೆ, ಪ್ರವಾಸಿಗರಿಗೆ ಕೆಲಕಾಲ ವಿಶ್ರಾಂತಿ ಪಡೆಯಲು, ಊಟ ಉಪಹಾರ ಸೇವಿಸಲು ಅನುಕೂಲಕರವಾಗಿದ್ದು ಇತ್ತೀಚೆಗೆ ಹಲವು ತಂಡ ಇಲ್ಲಿನ ಪರಿಸರದಲ್ಲಿ ಬೀಡು ಬಿಟ್ಟು ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ ಉಪಹಾರ ಸೇವಿಸಿ ಮಾರುತಿಯ ದರ್ಶನ ಪಡೆದು ಮುಂದೆ ಸಾಗುವುದು ಸಾಮಾನ್ಯವಾಗಿದೆ.


ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತೇನೆ ಎನ್ನುತ್ತಿರುವ ಸರ್ಕಾರ ಇತ್ತ ಗಮನಹರಿಸಿ ಜೋಡುಕೆರೆ ಸುಂದರ ಪರಿಸರಕ್ಕೆ ಮತ್ತಷ್ಟು ಮೆರುಗು ತರಲು ಯೋಜನೆ ರೂಪಿಸಿ ಅನುಷ್ಟಾನಕ್ಕೆ ತರಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಜೋಡುಕೆರೆ ಮಾರುತಿ ಮಂದಿರದ ಪರಿಸರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನ ಇರುವುದರಿಂದ ಮಾಲೆ ಧರಿಸಿ ಗಿರಿಗೆ ತೆರಳುವ ಭಕ್ತರು ಇಲ್ಲಿಗೆ ಬಂದು ಸ್ನಾನಮಾಡಿ ದೇವರ ದರ್ಶನ ಪಡೆದು ಶರಣು ಕೂಗಿ ಪ್ರಸಾದ ಸೇವಿಸಿ ಮುಂದಕ್ಕೆ ತೆರಳುವುದು ವಾಡಿಕೆಯಾಗಿದೆ.


ಕೆರೆಯ ತಟದಲ್ಲಿ ಜನವರಿ ತಿಂಗಳಿಂದ ಮೇ ತಿಂಗಳ ವರೆಗು ಹಾನ್೯ಬಿಲ್ ಪಕ್ಷಿಗಳ ಕಲರವ ಎಂತಹವರನ್ನು ತನ್ನತ್ತ ಸೆಳೆಯುವ ಶಕ್ತಿಹೊಂದಿದೆ.


ಜೋಡುಕೆರೆ ಮಾರುತಿ ಮಂದಿರದ ದೇವಕೆರೆಯಲ್ಲಿ ಪ್ರತಿವರ್ಷ ಊರಿನಲ್ಲಿ ಪ್ರತಿಷ್ಟಾಪಿಸಿ ಪೂಜಿಸಲ್ಪಡುವ ನೂರಾರು ಗಣಪತಿಗಳ ವಿಸರ್ಜನ ಪ್ರಕ್ರಿಯೆ ಜರುಗುತ್ತದೆ.


ಧರ್ಮದ ಭೇದವಿಲ್ಲದೆ ಮುಸ್ಲಿಂ ಸಮುದಾಯದ ಮೊಹರಮ್ ಹಬ್ಬದಲ್ಲಿ ಕಟ್ಟಕಡೆಯದಾಗಿ ಮೆರವಣಿಗೆ ಪೂರ್ಣಗೊಂಡ ನಂತರ ಪಂಜಕ್ಕೆ ಸಂಬಂಧಿಸಿದ ಪರಿಕರಗಳನ್ನು ಇಲ್ಲಿಯೆ ಶುದ್ದಿಗೊಳಿಸಲಾಗುತ್ತದೆ.
ಐ.ಬಿ.ಉದ್ಯಾನವನಕ್ಕೆ ಹೊಂದಿಕೊಂಡ ಜೋಡುಕೆರೆಯ ಇನ್ನೊಂದು ಕೆರೆ ಸ್ವಾಗತ ಕೆರೆ ಸುತ್ತ ವಾಕಿಂಗ್ ಪಾಥ್ ನಿರ್ಮಾಣ ಮಾಡುತ್ತಿದ್ದು ಅರ್ಧದಷ್ಟು ಕೆರೆಗೆ ಫೆನ್ಸಿಂಗ್ ಹಾಕಿಸಲಾಗಿದೆ ಸ್ಥಳೀಯ ವಾಡ್೯ ಸದಸ್ಯ ಸತೀಶ್ ಶಿವಾನಂದ ನಾಯ್ಕ್ ಪ್ರಯತ್ನದ ಫಲವಾಗಿ ಕೆರೆಗೆ ಹಾಗು ಐ.ಬಿ.ಉದ್ಯಾನವನಕ್ಕೆ ಸಂಬಂಧಿಸಿದಂತೆ ಒಂದಷ್ಟು ಅಭಿವೃದ್ಧಿ ಕಾರ್ಯವಾಗಿದ್ದು ಮತ್ತಷ್ಟು ಯೋಜನೆ ರೂಪಿಸಿದರೆ ಎರಡು ಕೆರೆಗಳ ಸುಂದರ ಪರಿಸರ ಪ್ರವಾಸಿಗರಿಗೆ ಕೈ ಬೀಸಿ ಕರೆಯುವುದರಲ್ಲಿ ಅನುಮಾನವಿಲ್ಲ ಹಾಗು ಊರಿನ ಸೌಂದರ್ಯಕ್ಕೆ ಮೆರಗುತರಲಿದೆ ಎಂಬುದು ಸ್ಥಳೀಯ ಹಿರಿಯರ ಯುವಕರ ಅಭಿಪ್ರಾಯವಾಗಿದೆ.

ಜೋಡುಕೆರೆಗಳ ವ್ಯಾಪ್ತಿ ನಾನು ಪ್ರತಿನಿಧಿಸುತ್ತಿದ್ದ ಮಂಜುನಾಥ ನಗರ ವಾಡ್೯ ವ್ಯಾಪ್ತಿಗೆ ಬರುವುದರಿಂದ ವಿಶೇಷವಾಗಿ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದೆ. ನನ್ನ ಇತಿ ಮಿತಿಯಲ್ಲಿ ಮತ್ತು ಸ್ಥಳೀಯ ಶಾಸಕರ ಪ್ರೋತ್ಸಹದಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತಾ ಬಂದಿದ್ದೇನೆ. ಇನ್ನೂ ಹೆಚ್ಚಿನ ಯೋಜನೆಗಳನ್ನು ಅಳವಡಿಸುವ ಯೋಚನೆ ಇದ್ದು ಆ ಕುರಿತು ನನ್ನ ನಿರಂತರ ಪ್ರಯತ್ನ ಸಾಗಿದೆ. ಪ್ರವಾಸೋದ್ಯಮ ಇಲಾಖೆಯು ಸಹ ಇಂತಹ ಪರಿಸರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದರೆ ಉತ್ತಮ ಫಲಿತಾಂಶ ಬರಲಿದೆ. ಸತೀಶ್ ಶಿವಾನಂದ ನಾಯ್ಕ್,ಪಟ್ಟಣ ಪಂಚಾಯತ ಮಾಜಿ ಸದಸ್ಯ,ಮಂಜುನಾಥ ನಗರ.

ಪ್ರವಾಸೋದ್ಯಮ ಇಲಾಖೆ ಈ ಪರಿಸರವನ್ನು ಮತ್ತಷ್ಟು ಪ್ರೇಕ್ಷಣೀಯ ಮಾಡಬಹುದಾಗಿದೆ. ಇದೇ ಮಾರ್ಗವಾಗಿ ಸಂಚರಿಸುವ ಯಾತ್ರಿಗಳಿಗೆ ಪ್ರವಾಸಿಗರಿಗೆ ಕೆಲ ಕಾಲ ವಿಶ್ರಾಂತಿ ಪಡೆದು ಮುಂದೆ ಸಾಗಲು ಪ್ರಶಸ್ಥವಾಗಿದ್ದು ಪ್ರತಿ ಬಾರಿ ನಮ್ಮ ಕುಟುಂಬ ಗೋಕರ್ಣ,ಧರ್ಮಸ್ಥಳ, ಮುರುಡೇಶ್ವರ ಇನ್ನಿತರ ಸ್ಥಳಗಳ ಭೇಟಿಗೆ ಹೊರಟಾಗ ಇದೇ ಸ್ಥಳದಲ್ಲಿ ಬೆಳಗಿನ ಉಪಹಾರ ಸೇವೆಸಿ ಮುಂದೆ ಸಾಗುತ್ತೇವೆ. ಈ ಪರಿಸರ ತುಂಬಾ ಅಹ್ಲಾಧಕರವಾಗಿದೆ.
ಸುರೇಶ ಚಂದಪ್ಪ ಬನಹಟ್ಟಿ, ಪ್ರವಾಸಿಗ ಬಾಗಲಕೋಟ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರ ಖಾತೆಗೆ ಎರಡನೇ ಕಂತಿನ ಬೆಳೆ ವಿಮೆ ಜಮೆ ಆರಂಭ.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಹವಾಮಾನ ಆಧಾರಿತ ಬೆಳೆ …

Leave a Reply

Your email address will not be published. Required fields are marked *