Breaking News

ಬುಡಕಟ್ಟು ಸಮುದಾಯದ ಹೊಸ ಪ್ರಯತ್ನ ” ಡಮಾಮಿ ಸಮುದಾಯ ಹೋಂ ಸ್ಟೇ “

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ರಾಜ್ಯದಲ್ಲೆ ಪ್ರಥಮ ಪ್ರಯೋಗದಲ್ಲಿ ಬುಡಕಟ್ಟು ಜನಾಂಗದ ಸಿದ್ದಿ ಸಮುದಾಯದ ಮಹಿಳೆಯರೆ ನಿರ್ವಹಿಸಿ ಆರ್ಥಿಕ ವಹಿವಾಟಿನಲ್ಲಿ ತೊಡಗಿಕೊಳ್ಳುವ ನಿಟ್ಟಿನಲ್ಲಿ ” ಡಮಾಮಿ ಸಮುದಾಯ ಹೋಂ ಸ್ಟೇ ” ಪ್ರಾರಂಬಿಸಲಾಗಿದೆ ಎಂದು ಎನ್ ಆರ್ ಎಲ್ ಎಂ ಅಧಿಕಾರಿ ನಾಗರಾಜ್ ಕಲ್ಮನೆ ಹೇಳಿದರು.


ಅವರು ಲಿಂಗದಬೈಲ್ ನಲ್ಲಿ ಸಿದ್ದವಾಗಿರುವ ಸಿದ್ದಿ ಮುದಾಯದ ಡಮಾಮಿ ಹೋಂ ಸ್ಟೇ ಕುರಿತು ಮಾದ್ಯಮಗಳಿಗೆ ಮಾಹಿತಿ ನೀಡುವ ಸಲುವಾಗಿ ಒಂದು ದಿನದ ಮಾಹಿತಿ ಕಾರ್ಯಾಗಾರ ಮಾಡಿ ನಿತ್ಯ ನಡೆಯುವ ಚಟುವಟಿಕೆಗಳನ್ನು ಪರಿಚಯಿಸಿದರು.


ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಾಸಿಸುತ್ತಿರುವ‌ ಸಿದ್ದಿ ಬುಡಕಟ್ಟು ಜನಾಂಗ ಯಲ್ಲಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಕಂಡು ಬರುತ್ತಾರೆ. ಈ ಜನಾಂಗದ ಕುಟುಂಬದ ಆರ್ಥಿಕ ಚೈತನ್ಯ ತುಂಬುವಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶವು ಈಡೇರುವ ದಿಸೆಯಲ್ಲಿ ಸಮುದಾಯ ಹೋಂ ಸ್ಟೇ ವರದಾನವಾಗಲಿದೆ ಎಂದು ಎನ್ ಆರ್ ಎಲ್ ಎಂ ಯಲ್ಲಾಪುರ ತಾಲೂಕಿನ ಅಧಿಕಾರಿ ಮಂಜಣ್ಣ ಹೇಳಿದರು.


ಪ್ರವಾಸಿಗರು ಆನ್ ಲೈನ್ ಮೂಲಕ ಕಾಯ್ದಿರಿಸಬಹುದಾಗಿದೆ. ಹೋಂ ಸ್ಟೇ ಪ್ರಥಮ ಹಂತದಲ್ಲಿ ನಾಲ್ಕು ಕಾಟೇಜ್ ಹೊಂದಿದ್ದು 24 ಗಂಟೆಗಳ ಅವಧಿಗೆ 4,500 ನಿಗದಿಪಡಿಸಲಾಗಿದೆ. ಬರುವ ಪ್ರವಾಸಿಗರಿಗೆ ಸಿದ್ದಿ ಸಮುದಾಯದ ಆತಿಥ್ಯ ಸಾಂಪ್ರದಾಯಿಕವಾಗಿ ದೊರೆಯಲಿದೆ ಎಂದು ಸೀತಾರಾಮ ಸಂಜೀವಿನಿ ಅಧ್ಯಕ್ಷೆ ಪ್ರೇಮಾ ಜೋಷಿ ಹೇಳಿದರು.

ಬುಡಕಟ್ಟು ಸಿದ್ದಿ ಸಮುದಾಯದ ಸಂಪ್ರದಾಯ ಪರಂಪರೆಯಂತೆ ಸ್ವಾಗತಿಸಿ ವೆಲ್ ಕಂ ಡ್ರಿಂಕ್ ನೀಡಲಾಗುವುದು. ನಂತರ ಉಪಹಾರದ ವ್ಯವಸ್ಥೆ, ಅಡವಿ ಚಾರಣ, ಔಷದ ಸಸ್ಯಗಳ ಮಾಹಿತಿ, ಸಂಪ್ರದಾಯಬದ್ದ ಆಹಾರ ವ್ಯವಸ್ಥೆ, ಹಿರಿಯರಿಂದ ಸಮುದಾಯದ ಬಗೆಗಿನ ಇತಿಹಾಸದ ಮಾಹಿತಿ, ಕಲೆ ಸಂಸ್ಕೃತಿ ಪರಿಚಯ, ಹಾಡು ನಾಟ್ಯ ಮತ್ತು ಪ್ರವಾಸೋದ್ಯಮದಲ್ಲಿ ಹೆಚ್ಚು ತೊಡಗಿಕೊಂಡಿರುವ ಸಂಸ್ಥೆಯ ಮಾರ್ಗದರ್ಶನ ಪಡೆದು ಹೋಂ ಸ್ಟೇ ಪ್ರವಾಸಿಗರಿಗೆ ಪರಿಸರ ಸ್ನೇಹಿ ಮತ್ತು ಅಧ್ಯಯನಶೀಲ ಪ್ರವಾಸೋದ್ಯಮ ದತ್ತ ಪ್ರಯತ್ನ ಸಾಗಿದೆ.


ಕಾಡಿನ ಅವಿನಾಭಾವ ಸಂಬಂಧ ಹೊಂದಿರುವ ಸಿದ್ದಿ ಬುಡಕಟ್ಟು ಸಮುದಾಯ ಅರಣ್ಯದಲ್ಲಿನ ಪ್ರಾಣಿಗಳ ಮಾಹಿತಿ ಪಕ್ಷಿಗಳ ಚಟುವಟಿಕೆ ವಿಶೇಷ ಮರಗಿಡಗಳ ಬಗ್ಗೆ ಹಾಗು ಜೇನು ಸಂಗ್ರಹಣೆ ಕುರಿತು ಪ್ರವಾಸಿಗರಿಗೆ ತಿಳಿಸಿ ಹೇಳುವ ರೀತಿಯನ್ನು ಮಾದ್ಯಮದವರಿಗೆ ಮಾಹಿತಿ ನೀಡಿದರು.

ಹೋಂ ಸ್ಟೇ ಗೆ ಬರುವ ಪ್ರವಾಸಿಗರಿಗೆ ಚಾರಣ ನಡೆಸುವ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿ ಸಣ್ಣ ಚಾರಣ ನಡೆಸಿ ಕಾಡಿನೊಂದಿಗಿನ ಅವರ ಒಡನಾಟವನ್ನು ಹಂಚಿಕೊಂಡರು ವಿಶೇಷವೆಂದರೆ ಕಾಡಿನಲ್ಲಿ ಗೂಡುಕಟ್ಟಿದ್ದ ಚಿಗಳಿ ಇರುವೆ ಗೂಡು ಸಹಿತ ಕೆಡವಿ ಚಟ್ನಿ ತಯಾರಿಸಿ ಖಾದ್ಯದ ಜೊತೆ ಬಡಿಸಿದರು.

ನಂತರದಲ್ಲಿ ತಮ್ಮ ಸಮುದಾಯದ ಸಾಂಪ್ರದಾಯಿಕ ನೃತ್ಯ ಹಾಡು ಗಾರಿಕೆಯೊಂದಿಗೆ ಪ್ರವಾಸಿಗರ ಗಮನ ಸೆಳೆಯುವ ಕಲೆಗಳನ್ನು ಪ್ರದರ್ಶಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದ ಯಲ್ಲಾಪುರ ಕಾಳಮ್ಮ ನಗರ ಕೆಲವು  ನಿವಾಸಿಗಳಿಗೆ ವಿದ್ಯುತ್ ನೀಡದ ಸಮಸ್ಯೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಮುರಾರ್ಜಿ ವಸತಿ ಶಾಲೆ …

Leave a Reply

Your email address will not be published. Required fields are marked *