Breaking News

ದ್ವಿತೀಯ ಪಿಯುಸಿಯಲ್ಲಿ 100ಕ್ಕೆ 100 ಫಲಿತಾಂಶ : ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆ ಸಾಧನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : 2024-25ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಸಂಯುಕ್ತ ಪ ರಣದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತ ಒಟ್ಟು 148 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. 49 ಉನ್ನತ ಶ್ರೇಣಿ, 85 ಪ್ರಥಮ ಶ್ರೇಣಿ, 14 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ಆಗಿರುತ್ತಾರೆ. ಕನ್ನಡದಲ್ಲಿ 1, ಸಂಸ್ಕೃತದಲ್ಲಿ 5, ಲೆಕ್ಕಶಾಸ್ತçದಲ್ಲಿ 1, ವ್ಯವಹಾರ ಅಧ್ಯಯನದಲ್ಲಿ 3, ಗಣಿತದಲ್ಲಿ 2, ಗಣಕ ವಿಜ್ಞಾನದಲ್ಲಿ 2 ವಿದ್ಯಾರ್ಥಿಗಳು ಸೇರಿ ಒಟ್ಟು 14 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಕಾಲೇಜಿನಲ್ಲಿ 15 ವಿಷಯಗಳನ್ನು ಬೋಧಿಸುತ್ತಿದ್ದು ಎಲ್ಲಾ ವಿಷಯ ಗಳಲ್ಲಿ 100ಕ್ಕೆ 100 ಫಲಿತಾಂಶ ಬಂದಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿರುತ್ತಾರೆ.
ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಲಕ್ಷ್ಮಣ ಶಾನಭಾಗ , ಉಪಾಧ್ಯಕ್ಷ ಪ್ರಸನ್ನ ಗುಡಿಗಾರ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರೂ ಪ್ರಾಂಶುಪಾಲ ಆನಂದ ಹೆಗಡೆ ಮತ್ತು ಎಲ್ಲಾ ಉಪನ್ಯಾಸಕ, ಶಿಕ್ಷಕ ವರ್ಗದವರೂ ಹಾಗೂ ಶಿಕ್ಷಕೇತರ ಸಿಬ್ಬಂದಿಗಳೂ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನೂ ಅಭಿನಂದಿಸಿದ್ದಾರೆ.

ವಾಣಿಜ್ಯ ವಿಭಾಗ.                                                        ಶ್ರೀರಕ್ಷಾ ಮೆಣಸುಮನೆ                                              ವಿನುತಾ ಗಣಪತಿ ಭಟ್ಟ
ಲಕ್ಷ್ಮೀ ಗಿರೀಶ ಭಟ್ಟ
587/600, 97.830%
585/600, 97.5%
584/600, 97.3%
ಸಂಸ್ಕೃತ, ವ್ಯ.ಅಧ್ಯಯನ 100ಕ್ಕೆ 100
ಸಂಸ್ಕೃತ, ವ್ಯ.ಅಧ್ಯಯನ 100ಕ್ಕೆ 100
ಲೆಕ್ಕಶಾಸ್ತ್ರ 100ಕ್ಕೆ 100

ವಿಜ್ಞಾನ ವಿಭಾಗ

ದಿವಾಕರ ನರಸಿಂಹ ಗೇರಗದ್ದೆ
ಚಿನ್ಮಯ ರಾಮಚಂದ್ರ ದುಂಡಿ
ಭಾವನಾ ಭಾಸ್ಕರ ನಾಯ್ಕ
577/600, 96.16%
576/600, 96%
568/600, 94.66%
ಸಂಸ್ಕೃತ 100ಕ್ಕೆ 100
ಕನ್ನಡ 100ಕ್ಕೆ 100

ಕಲಾ ವಿಭಾಗ

ಲಕ್ಷ್ಮೀ ಯಲ್ಲಪ್ಪ ಉಪ್ಪಾರ
ಬೆಂಡು ಲಕ್ಕು ಪಾಂಡ್ರಮಿಶೆ
ಲಕ್ಷ್ಮಣ ಬಜ್ಜು ತಾಟೆ
516/600, 86%
514/600, 85.66%
509/600, 84.83%


ಅನುದಾನಿತ ಕಾಲೇಜುಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ರಾಜ್ಯದ ಮೂರು ಕಾಲೇಜುಗಳಲ್ಲಿ ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಪದವಿಪೂರ್ವ ಕಾಲೇಜು ಒಂದಾಗಿರುವುದು ಜಿಲ್ಲೆಗೆ ಹೆಮ್ಮೆ ತಂದ ವಿಷಯವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *