

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಸ್ವಚ್ಚತೆ ಎಂಬುದು ನಮ್ಮ ಸಂಸ್ಕೃತಿಯ ಪ್ರಮುಖ ಲಕ್ಷಣವಾಗಿದ್ದು, ಸರ್ಕಾರ ಈ ದಿಸೇಯಲ್ಲಿ ಅನುಷ್ಟಾನಗೊಳಿಸುವ ಯೋಜನೆ ಮತ್ತು ಯೋಚನೆಗಳ ಸದ್ಬಳಕೆ ಅತ್ಯಗತ್ಯ ಎಂದ ಅವರು, ಇಂದಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯರ ಧಾವಂತದ ಚಟುವಟಿಕೆಗಳು ನಮ್ಮ ಉತ್ತಮ ನಾಗರೀಕತೆಗೆ ಧಕ್ಕೆ ತರುವಂತಿರಬಾರದು ಎಂದು ತಹಶೀಲ್ದಾರ ಗುರುರಾಜ ಎಂ. ಹೇಳಿದರು.
ಅವರು ತಾಲೂಕಿನ ಕುಂದರಗಿ ಗ್ರಾ.ಪಂ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾ.ಪಂ ವ್ಯಾಪ್ತಿಯ ಸ್ವಸಹಾಯ ಸಂಘ ಮತ್ತು ಅಂಗಡಿಗಳಿಗೆ ಕಸ ತುಂಬುವ ಪ್ಲಾಸ್ಟಿಕ್ ತೊಟ್ಟಿಯನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡುತ್ತಿದ್ದರು.
ಗ್ರಾ.ಪಂ ಸದಸ್ಯ ಗಣೇಶ ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಕಳೆದ ವರ್ಷ ನೆರೆ ಪರಿಹಾರ ನಿಧಿ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೊಳ್ಳಲಾದ ಅನೇಕ ಕಾಮಗಾರಿಗಳು ಕಳಪೆಯಿಂದ ಕೂಡಿದ್ದಲ್ಲದೇ, ಕೆಲವು ಕಾಮಗಾರಿಗಳು ಅಪೂರ್ಣವಾಗಿ ನಿಂತಿವೆ. ಇಂತಹ ಸಾರ್ವಜನಿಕರ ಅಗತ್ಯಗಳಿಗೆ ಅನಿವಾರ್ಯವಾದ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸುವ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರರಲ್ಲಿ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ದೀಪಾ ಸಿದ್ದಿ, ಉಪಾಧ್ಯಕ್ಷ ಧಾಕ್ಲು ಪಾಟೀಲ್, ಸದಸ್ಯರಾದ ರಾಮಕೃಷ್ಣ ಹೆಗಡೆ, ಮಾಸ್ತö್ಯಪ್ಪ ಮಡಿವಾಳ, ಗಣಪತಿ ಪಾಟೀಲ, ಪ್ರಕಾಶ ನಾಯ್ಕ, ನಿರ್ಮಲಾ ನಾಯ್ಕ, ಜ್ಯೋತಿ ಹುದಾರ, ಸೌಮ್ಯಾ ನಾಯ್ಕ, ತಾ.ಪಂ ಸಹಾಯಕ ನಿರ್ದೇಶಕ ಮಂಜುನಾಥ ಅಗೇರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಸೇರಿದಂತೆ ವಿವಿಧ ಪ್ರಮುಖರು, ಸಾರ್ವಜನಿಕರು, ಉಪಸ್ಥಿತರಿದ್ದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಪಟಗಾರ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ೪೦ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಸದ ತೊಟ್ಟಿಯನ್ನು ವಿತರಿಸಲಾಯಿತು.
Prathidvani Yellapura