


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಕಂಚನಳ್ಳಿಯ ತೆಂಗಿನಗೇರಿ ಗ್ರಾಮದಲ್ಲಿ ಸರಿ ಸುಮಾರು 100 ಮನೆಗಳಿಗೆ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲು ಜಲಜೀವನ ಮಿಷನ್ ಅಡಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದ್ದು ಕಾಮಗಾರಿ ಅತ್ಯಂತ ಕಳಪೆಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಸುದ್ದಿ ವೈರಲ್ ಆಗಿದೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ನಡೆದ ಕೆಲವಷ್ಟು ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಹಲವು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ.
ಇಂತಹ ಕಾಮಗಾರಿಯಿಂದ ಉಳಿದೆಡೆ ಉತ್ತಮ ಗುಣಮಟ್ಟದ ಕಾಮಗಾರಿಯಾಗಿದ್ದರೂ ಜನರು ಅನುಮಾನದಿಂದ ನೋಡುವ ಸಂದರ್ಭಗಳು ಎದುರಾಗಲಿದೆ. ಈ ಕುರಿತು ಸಂಬಂಧಿಸಿದ ಇಲಾಖೆ ಗಮನ ಹರಿಸಿ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಬೇಕಿದೆ. ಇಲ್ಲವಾದಲ್ಲಿ ಸಾರ್ವಜನಿಕ ತೆರಿಗೆ ಹಣದ ಅಪಹಾಸ್ಯವಾಗಲಿದೆ ಎಂಬುದು ಹಲವು ಪ್ರಾಜ್ಞರ ಅಭಿಪ್ರಾಯವಾಗಿದೆ.
ಈ ವಿಷಯ ಇದುವರೆಗೂ ನನ್ನ ಗಮನಕ್ಕೆ ಬಂದಿರಲಿಲ್ಲ. ಶೀಘ್ರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಅರಿತು ಸಂಬಂಧಿಸಿದ ಗುತ್ತಿಗೆದಾರರಿಗೆ ಮತ್ತು ಇಲಾಖೆಗೆ ಮಾಹಿತಿ ನೀಡಲಿದ್ದೇನೆ. ಅಣ್ಣಪ್ಪ ವಡ್ಡರ್ , ಕಿರವತ್ತಿ ಗ್ರಾ.ಪಂ ಪಿಡಿಒ
ನಮ್ಮ ಇಲಾಖೆ ಅಡಿಯಲ್ಲಿ ನಡೆಯುವ ಕಾಮಗಾರಿಗಳ ಸ್ಥಳಗಳಿಗೆ ಮೇಲಿಂದ ಮೇಲೆ ಭೇಟಿ ಕೊಟ್ಟು ಪರಿಶೀಲಿಸುತ್ತಿರುತ್ತೇವೆ. ಆ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಕಂಚನಳ್ಳಿ ತೆಂಗಿನಗೇರಿ ಓವರ್‌ಹೆಡ್ ಟ್ಯಾಂಕಿನ ಕಾಮಗಾರಿಯನ್ನೂ ಪರಿಶೀಲಿಸಿದ್ದು ಸ್ಟçಕ್ಚರ್ ಸಮರ್ಪಕವಾಗಿದ್ದು ಕೆಳಗೆ ಹಾಕಿರುವ ಸಿಮೆಂಟ್ ಬೆಡ್ ಕ್ಯೂರಿಂಗ್ ಇಲ್ಲದೇ ಕುಸಿದಿರುವ ಸಾಧ್ಯತೆಗಳಿವೆ. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರರಿಗೆ ಸೂಚಿಸಲಾಗುವುದು. – ರಾಜೇಶ್ವರಿ ಕದಂ, ಎಇಇ , ಜೆ.ಜೆ.ಎಂ



Prathidvani Yellapura