Breaking News

ಗಣಪತಿಗಲ್ಲಿ ಶಾಲೆಯ ದ್ವಾರ ಬಾಗಿಲು, ಕಲಿಕಾ ಪ್ರದರ್ಶನ,ಮೆಟ್ರಿಕ್ ಮೇಳ ಉದ್ಘಾಟನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ- ಪಟ್ಟಣದ ಗಣಪತಿಗಲ್ಲಿ ವಾಡ್೯ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಾರ ಬಾಗಿಲು ಉದ್ಘಾಟನೆ ಮತ್ತು ಕಲಿಕಾ ಪ್ರದರ್ಶನ ಮೆಟ್ರಿಕ್ ಮೇಳ ನಡೆಯಿತು.


ಶಾಲೆಯ ಶಿಕ್ಷಕಿ ನಾಗರತ್ನ ನಾಯಕ ಅವರ ಕೊಡುಗೆಯಲ್ಲಿ ದ್ವಾರ ಬಾಗಿಲು ನಿರ್ಮಿಸಲಾಗಿತ್ತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುನಿಲ್ ಯಲ್ಲಾಪುರಕರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ದ್ವಾರಬಾಗಿಲನ್ನು ಉದ್ಘಾಟಿಸಿದರು.


ಕಲಿಕಾ ಪ್ರದರ್ಶನ ಮತ್ತು ಮೆಟ್ರಿಕ್ ಮೇಳವನ್ನು ಶಿಕ್ಷಣ ಪ್ರೇಮಿ ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟ ಉದ್ಘಾಟಿಸಿದರು.


ಶಾಲೆಯ ಅಭ್ಯದಯಕ್ಕಾಗಿ ಶ್ರಮಿಸಿದ ಶಿಕ್ಷಕರ ಪ್ರಗತಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಕಾಣುತ್ತದೆ. ಅತ್ಯಂತ ಹಿಂದುಳಿದ ಗಣಪತಿ ಗಲ್ಲಿಯಂತಹ ಪರಿಸರದಲ್ಲಿ ಪೋಷಕರನ್ನು ವಿಶ್ವಾಸಕ್ಕೆ ಪಡೆದು ಮಕ್ಕಳನ್ನು ವಿದ್ಯಾಬ್ಯಾಸಕ್ಕೆ ತೊಡಗಿಸಿ ಅಭಿವೃದ್ಧಿ ಕಾರ್ಯಗಳನ್ನು ಶಾಲೆಗಾಗಿ ಮಾಡುವುದೆಂದರೆ ಶ್ರಮದ ಕೆಲಸ ಇದಕ್ಕೆ ಶಿಕ್ಷಣ ಪ್ರೇಮಿ ಆರ್.ಐ‌ ನಾಯ್ಕ್ ಅವರ ಮಾರ್ಗದರ್ಶನ ಕ್ರಿಯಾಶೀಲ ಎಸ್.ಡಿ.ಎಂ.ಸಿ ಅಧ್ಯಕ್ಷ ಸುನಿಲ್ ಯಲ್ಲಾಪುರಕರ ಅವರ ಪರಿಶ್ರಮವೆ ಕಾರಣ. ಶಾಲೆಯ ದ್ವಾರ ಬಾಗಿಲು ಬಿರ್ಮಾಣ ಮಾಡಿಸಿರುವ ಶಿಕ್ಷಕಿ ನಾಗರತ್ನ ನಾಯಕ ಅವರ ಕೊಡುಗೆ ಶ್ಲಾಘನೀಯ ಕಾರ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.


ಶಾಲೆಯ ಪ್ರಗತಿ ವಿದ್ಯಾರ್ಥಿಗಳ ಕಲಿಕೆಯ ಉತ್ಸಾಹ, ಶಾಲಾಭಿವೃದ್ದಿ ಸಮಿತಿಯ ಕಳಕಳಿಯ ಕುರಿತು ಶಿಕ್ಷಣ ಪ್ರೇಮಿ ಮತ್ತು ಮೆಟ್ರಿಕ್ ಮೇಳ ಉದ್ಘಾಟಿಸಿದ ವಿಶ್ರಾಂತ ಪ್ರಾಂಶುಪಾಲ ಬೀರಣ್ಷ ನಾಯಕ ಮೊಗಟಾ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಸಂಜೀವಿನಿ ಟ್ರಸ್ಟ್ ಸಂಸ್ಥಾಪಕ ಉಲ್ಲಾಸ ಶಾನಬಾಗ್, ಶಾಲಾ ಸ್ಥಾಪನೆಗೆ ಕಾರಣೀಕರ್ತರಾದ ನಾಗೇಶ್ ಯಲ್ಲಾಪುರಕರ ಅಭಿನಂದನಾ ನುಡಿಗಳನ್ನಾಡಿದರು.


‌ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ರವಿ ಮರಾಠಿ, ಬಿ ಆರ್ ಸಿ ಕಚೇರಿಯ ದಿಲೀಪ್ ದಿಡ್ಮನಿ, ಎಂ.ಎ.ಬಾಗೇವಾಡಿ, ಅಗ್ನಿಶಾಮಕ ದಳದ ಠಾಣಾಧಿಕಾರಿ ಶಂಕರ್ ಅಂಗಡಿ, ಸ್ಥಳೀಯ ಹಿರಿಯರಾದ ಶಾಂತಿ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಮುಖ ಅಧಿಕಾರಿ ವರ್ಗ ಶಾಲಾಭಿವೃದ್ದಿ ಸಮಿತಿ ಸದಸ್ಯರುಬ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಶಾಲೆಯ ಮುಖ್ಯ ದ್ವಾರದ ಕಮಾನು ನಿರ್ಮಿಸಿ ಕೊಡುಗೆಯಾಗಿ ನೀಡಿದ ಶಿಕ್ಷಕಿ ನಾಗರತ್ನ ಅವರನ್ನು ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.


ವಿದ್ಯಾರ್ಥಿಗಳು ಆಯೋಜಿಸಿದ್ದ ಮೆಟ್ರಿಕ್ ಮೇಳ ಮತ್ತು ಕಲಿಕಾಮೇಳ ಎಲ್ಲರ ಗಮನ ಸೆಳೆಯಿತು.

ಖುಷಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕ ಆರ್.ಐ.ನಾಯ್ಕ್ ಸ್ವಾಗತಿಸಿದರು, ಶಿಕ್ಷಕಿ ನಾಗರತ್ನ ನಾಯಕ ನಿರೂಪಿಸಿದರು, ಶಿಕ್ಷಕಿ ಗೀತಾ ವಂದಿಸಿದರು.

ನಾಗರತ್ನ ನಾಯಕ ಶಿಕ್ಷಕಿ ಅತ್ಯಂತ ಶಿಸ್ತುಬದ್ದವಾಗಿ ಮಕ್ಕಳಿಗೆ ವಿದ್ಯಾಬ್ಯಾಸ ಮಾಡಿಸುವುದಲ್ಲದೆ ಶಾಲೆಗೆ ಬರುವ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುವುದರೊಂದಿಗೆ ಪೋಷಕರ ನೆಚ್ಚಿನ ಶಿಕ್ಷಕಿಯಾಗಿ ಅಚ್ಚುಮೆಚ್ಚಿನವರಾಗಿದ್ದಾರೆ ಸದ್ಯ ತಾವು ವೃತ್ತಿ ನಿರ್ವಹಿಸುತ್ತಿರುವ ಶಾಲೆಗೆ ತಮ್ಮ ಸೇವಾ ದಿನಗಳ ನೆನಪುಳಿಯಲು ತಮ್ಮ ಸಂಬಳದ ಹಣದಿಂದ ಪ್ರವೇಶ ದ್ವಾರವನ್ನು ನಿರ್ಮಿಸಿ ಶಾಲೆಗೆ ಕೊಡುಗೆಯಾಗಿ ನೀಡಿ ಶಾಲಾಭಿವೃದ್ದಿ ಸಮಿತಿಯ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *