Breaking News

ಎಚ್ಚರ…ಎಚ್ಚರ..ಪ್ರಯಾಣಿಕರ ಬಲಿಗಾಗಿ ಕಾದು ನಿಂತಿದೆ ಯಲ್ಲಾಪುರ ತಾಲೂಕಿನ ಹೆದ್ದಾರಿ ಪಕ್ಕದ ಕೆಲವು ಬಸ್ ನಿಲ್ದಾಣಗಳು ಎಚ್ಚರ..ಎಚ್ಚರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಾದು ಹೋಗಿರುವ ಬಳ್ಳಾರಿ ಕಾರವಾರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಕೆಲವು ಬಸ್ ನಿಲ್ದಾಣಗಳು ಶಿಥಿಲವಾಗಿದ್ದು ಯಾವುದೆ ಕ್ಷಣದಲ್ಲಿ ಬಸ್ ಕಾಯುತ್ತ ನೆರಳಿಗಾಗಿ ಆಸರೆ ಪಡೆದ ಪ್ರಯಾಣಿಕರ ಬಲಿಪಡೆಯುವ ಸಾದ್ಯತೆ ಇದ್ದು ಸಂಬಂಧಿಸಿದ ಇಲಾಖೆಗಳು ತಕ್ಷಣ ಗಮನಹರಿಸಿ ಗಂಭೀರ ಸಮಸ್ಯೆಯನ್ನು ಪರಿಹರಿಸಬೇಕಿದೆ.


      ತಾಲೂಕಿನ ಕಿರವತ್ತಿ ಯಿಂದ ಯಲ್ಲಾಪುರದ ವರೆಗೆ ಹೆದ್ದಾರಿ ಬದಿ ಕೆಲವು ಬಸ್ ನಿಲ್ದಾಣಗಳಿದ್ದು ಪ್ರಯಾಣಿಕರಿಗೆ ಅಪಾಯಕಾರಿಯಾಗಿ ನೆರಳು ನೀಡುತ್ತಿದೆ. ಡೊಮಗೇರಿ ಎಂಬಲ್ಲಿ ಬಸ್ ನಿಲ್ದಾಣವಿದ್ದು ದೂರದಿಂದ ಗಟ್ಟಿಮುಟ್ಟಾದ  ಕಟ್ಟಡವೆನಿಸಿ ಸಮೀಪ ಹೋಗಿ ನೋಡಿದರೆ ಕಟ್ಟಡವೆಲ್ಲಾ ಬಿರುಕು ಬಿದ್ದಿದ್ದು ಸ್ಲಾಬ್ ಕಬ್ಬಿಣವೆಲ್ಲ ತುಕ್ಕು ಹಿಡಿದು ಇಣುಕಿ ನೋಡುತ್ತಿವೆ.

ಎದುರಿನಲ್ಲಿ ಹಾದುಹೋದ ಹೆದ್ದಾರಿ ಮೇಲೆ ಸಂಚರಿಸುವ ಬೃಹತ್ ಗಾತ್ರದ ವಾಹನಗಳು ಚಲಿಸುವ ವೇಳೆ ಕಟ್ಟಡ ಅಲುಗಿದ ಅನುಭವವಾಗುತ್ತದೆ.

ಬಸ್ ನಿಲ್ದಾಣದ ಒಳಗೆ ಮತ್ತು ಸುತ್ತಮುತ್ತ ಮದ್ಯದ ಬಾಟಲ್ ಸ್ಯಾಚಟ್ ಗಳ ದರ್ಬಾರ್ ಜೋರಾಗಿದೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ  ಹರಡಿ ಬಿದ್ದಿದ್ದು ಪ್ರಯಾಣಿಕರು ಹತ್ತಿರ ಸುಳಿಯದಂತೆ ತಡೆ ಹಿಡಿದಿದೆ.


ವಿಶೇಷ ಎಂದರೆ ಭಗ್ನ ಪ್ರೇಮಿಗಳ ವೇದನೆಗೆ ಹಾಗು ಉದಯೋನ್ಮುಖ ಪ್ರಮೇಮಿಗಳ ನಿವೇದನೆಗೆ ಶಿಥಿಲವಾದ ಬಸ್ ನಿಲ್ದಾಣಗಳ ಮೇಲ್ಚಾವಣಿ ಮತ್ತು ಗೋಡೆಗಳು ಕವಿತೆ ಶ್ಲೋಗನ್ ಗಳಿಗೆ ಸಾಕ್ಷಿಯಾಗಿವೆ. ಇತ್ತೀಚೆಗೆ ಎಲ್ಲೆಲ್ಲಿಂದಲೋ ಬರುವ ಮಾನಸಿಕ ಅಸ್ವಸ್ಥರಿಗೆ, ಕುಡಿದು ಟೈಟಾಗಿ ತೂರಾಡಿ ಬೀಳುವ ಕುಡುಕ ಮಹಾಶಯರಿಗೆ  ಇನ್ನು ವಿಚಿತ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ನಿಲ್ದಾಣಗಳನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಸ್ಥಳೀಯ ಆಡಳಿತದ ಮೇಲಿದೆ.

ಪ್ರತಿಧ್ವನಿ ಯೂಟ್ಯೂಬ್ ಚಾನಲ್ ನಲ್ಲಿ ವಿಡಿಯೋ ದೃಶ್ಯಾವಳಿ ವೀಕ್ಷಿಸಿ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹಿಸಿ


   ಬಸ್ ನಿಲ್ದಾಣದ ಬೇಡಿಕೆ ಇಟ್ಟು ಪಟ್ಟು ಬಿಡದೆ ನಿರ್ಮಿಸಿ ಸೈ ಎನಿಸಿಕೊಳ್ಳುವ ಸಾರ್ವಜನಿಕರು ನಂತರದಲ್ಲಿ ನಿಲ್ದಾಣದ ಪರಿಸ್ಥಿತಿ ಬಗ್ಗೆ ಗಮನಿಸದಿರುವುದು. ಕಟ್ಟಡಗಳನ್ನು ಕಟ್ಟಿ ಜನೋಪಯೋಗಕ್ಕೆ ನೀಡಿ ಅಭಿವೃದ್ಧಿ ಮಾಡಿದ್ದೇವೆಂದು ಬೀಗುವ ಸರ್ಕಾರ  ಅದರ ನಿರ್ವಹಣೆ ಸಮರ್ಪಕವಾಗಿ ಆಗುತ್ತಿದೆಯೆ ಇಲ್ಲವೇ ಎಂದು ಪರಿಶೀಲಿಸದೆ ಹಾಳಾದ ನಂತರ ಮತ್ತೆ ಜನರ ತೆರಿಗೆ ಹಣ ಬಳಸಿ ಪುನರ್ ನಿರ್ಮಿಸುವುದು ಅಕ್ಷಮ್ಯವಾಗಿದೆ. ಇನ್ನಾದರು ಎಚ್ ಎತ್ತು ಸಾರ್ವಜನಿಕ ತೆರಿಗೆ ಹಣಕ್ಕೆ ಗೌರವ ನೀಡಿ ಬಸ್ ನಿಲ್ದಾಣಗಳ ಕಾಯಕಲ್ಪವಾಗಬೇಕಿದೆ ಮತ್ತು ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.


    
ಕೆಲವೆಡೆ ಜನ ಸಂಚಾರವೇ ಇಲ್ಲದ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಬಸ್ ನಿಲ್ದಾಣವೆ ಆಸರೆಯಾಗಿ ಭರವಸೆ ನೀಡುತ್ತದೆ. ಮಳೆಗಾಲದಲ್ಲಿ ಬಸ್ ಪ್ರಯಾಣಿಕರಿಗೆ ಮಾತ್ರವಲ್ಲದೆ ದ್ವಿಚಕ್ರ ವಾಹನ ಸವಾರರಿಗು,ಪಾದಚಾರಿಗಳಿಗು ನೀರಲ್ಲಿ ತೋಯದಂತೆ ಆಶ್ರಯ ನೀಡುತ್ತದೆ. ಇಂತಹ ಕಟ್ಟಡಗಳನ್ನು ನಿರ್ಲಕ್ಷಿಸಿ ಅನೈತಿಕ ಚಟುವಟಿಕೆಗಳ ತಾಣವಾಗುವುದನ್ನು ತಡೆಯಬೇಕಿದ್ದು  ಪ್ರತಿ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ಅಂಗಡಿ ಮತ್ತು ಮನೆ ನಿರ್ಮಿಸಿದರೆ ಯಾರಿಗಾದರು ಉದ್ಯೋಗವಾದಂತಾಗಲಿದೆ ಮತ್ತು ಜನರು ವಾಸವಿರುವುದರಿಂದ ಅನೈತಿಕ ಚಟುವಟಿಕೆಗೆ ಕಡಿವಾಣ ಬೀಳಲಿದೆ ಹಾಗು ಒಂಟಿಯಾಗಿ ಬರುವ ಮಹಿಳಾ ಪ್ರಯಾಣಿಕರಿಗೆ ಭರವಸೆಯ ಸ್ಥಳವಾಗಲಿದೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *