Breaking News

ಶಕ್ತಿ ಪೀಠ  ಗ್ರಾಮದೇವಿ ಸಾನಿದ್ಯದಲ್ಲಿ ತಪ್ಪಿದ ಅಗ್ನಿ ಅವಘಡ – ಇದಲ್ಲವೆ ಯಲ್ಲಾಪುರ ಗ್ರಾಮದೇವಿ ಪವಾಡ..!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ – ಪಟ್ಟಣದ ಶಕ್ತಿ ಮಾತೆ ಗ್ರಾಮದೇವಿ ಸಾನಿಧ್ಯದಲ್ಲಿ ಅನ್ನ ಪ್ರಸಾದ ಸೇವೆಗಾಗಿ ಅಡುಗೆ ತಯಾರಿ ನಡೆಯುತ್ತಿದ್ದು ಅದೇ ಸ್ಥಳದಲ್ಲಿ ಅಗ್ನಿ ದುರಂತ ಸಂಭವಿಸಿದೆ. ವಿಶೇಷ ಎಂದರೆ ಒಂದು ಇರುವೆಗೆ ಕೂಡ ಸಮಸ್ಯೆಯಾಗದಂತೆ ಗ್ರಾಮದೇವಿ ತಾಯಿ ಕಾಪಾಡಿದ್ದಾಳೆ. ಇದಲ್ಲವೆ ಯಲ್ಲಾಪುರ ಗ್ರಾಮದೇವಿ ಪವಾಡ ಎನ್ನುತ್ತಿದ್ದಾರೆ ಭಕ್ತಗಣ.


ಪ್ರತಿ ವರ್ಷದಂತೆ ಈ ವರ್ಷವು ಸಾಮಾಜಿಕ ಕಾರ್ಯಕರ್ತ ಆಟೋ ಯೂನಿಯನ್ ಅಧ್ಯಕ್ಷ ಸಂತೋಷ್ ನಾಯ್ಕ್ ನೇತೃತ್ವದಲ್ಲಿ ಅವರ ಸ್ನೇಹಿತ ಬಳಗದವರ ಶ್ರಮದಲ್ಲಿ ಯಶಸ್ವಿಯಾಗಿ ಅನ್ನ ಪ್ರಸಾದ ಸೇವೆ ಜರುಗುತ್ತಾ ಬಂದಿದ್ದು ಮಂಗಳವಾರ ವಿಷ್ಣು ಸಮಾಜ (ಉತ್ತರ ಭಾರತದ ವರು) ವಹಿಸಿಕೊಂಡ ಸೇವೆಯಂತೆ ಅನ್ನ ಪ್ರಸಾದ ಸಿದ್ದತೆ ಸೋಮವಾರ ರಾತ್ರಿಯಿಂದ ಎಡಬಿಡದೆ ನಡೆಯುತ್ತಿದ್ದು ಮಂಗಳವಾರ ಬೆಳಗ್ಗೆ ಅಡುಗೆ ತಯಾರಿ ನಡೆವ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆಮಾಡಿ ಕರೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮದೇವಿ ಮಡಿಲಲ್ಲಿ ನಡೆದ ಬೆಂಕಿ ಅವಘಡದಿಂದ ಸಣ್ಣ ಇರುವೆಗು ಕೂಡ ಸಮಸ್ಯೆಯಾಗದಂತೆ ಕಾಪಾಡಿ ಅನುಗ್ರಹಿಸಿದ್ದು ಗ್ರಾಮದೇವಿ ಪವಾಡವೆ ನಡೆದಂತಾಗಿದೆ.


ವಿಶೇಷವಾಗಿ ಶ್ರದ್ದಾ ಭಕ್ತಿಯಿಂದ ಕೆಲವು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಭಕ್ತ ಜನತೆಗೆ ಅನ್ನ ಪ್ರಸಾದ ಸೇವೆ ಸಲ್ಲಿಸುತ್ತಾ ಬಂದಿರುವ ಸಂತೋಷ್ ನಾಯ್ಕ್ ತಂಡದ ನಿಸ್ವಾರ್ಥ ಸೇವೆಗೆ ಅನುಗ್ರಹಿಸಿದ ಗ್ರಾಮದೇವಿ ಯಾವುದೆ ಅವಘಡವಾಗದಂತೆ ಕಾಪಾಡಿದ್ದಾಳೆ ಅಲ್ಲದೆ ಬ್ಲಾಸ್ಟ ಪ್ರೂಫ್ ಸಿಲಿಂಡರ್ ಆದ ಕಾರಣ ಯಾರಿಗು ಸಮಸ್ಯೆಯಾಗದಂತೆ ಸಿಲಿಂಡರ್ ಮಾತ್ರ ಬೆಂಕಿ ಹೊತ್ತಿ ಉರಿದು ತಣ್ಣಗಾಗಿದೆ.


ಸ್ಥಳಕ್ಕೆ ಯಲ್ಲಾಪುರ ಪೊಲೀಸರು, ಗ್ಯಾಸ್ ಏಜೆನ್ಸಿ ಮಾಲಕರು, ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.ಯಾವ ಅವಘಡವಾಗದೆ ಕಾಪಾಡಿದ ಗ್ರಾಮದೇವಿಗೆ ವಂದಿಸಿದರು.


ಹೊತ್ತಿ ಉರಿದ ಬೆಂಕಿ ತಣ್ಣಗಾಗುತ್ತಲೆ ಗ್ರಾಮದೇವಿ ದೇವಸ್ಥಾನದಲ್ಲಿ ಘಂಟನಾದದೊಂದಿಗೆ ತಾಯಿಯರಿಗೆ ಮಂಗಳಾರತಿ ಸದ್ದು ಮೂಡುತ್ತಲೆ ಆತಂಕದ ಕಾರ್ಮೋಡ ಸರಿದು ನಿರಾತಂಕ ಬೆಳ್ಳಿ ಮೋಡ ಮೂಡಿತು. ಇದಲ್ಲವೆ ಯಲ್ಲಾಪುರ ಗ್ರಾಮದೇವಿಯರ ಮಹಾ ಪವಾಡ ಎನ್ನುತ್ತಲೆ ಮಹಾ ಅನ್ನ ಪ್ರಸಾದ ಸ್ವೀಕರಿಸಿದರು 8 ಸಹಸ್ರಕ್ಕು ಅಧಿಕ ಭಕ್ತರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *