Breaking News

ಯಲ್ಲಾಪುರದಲ್ಲಿ ನಾಳೆ “ಶೌರ್ಯ ಜಾಗರಣ ರಥಯಾತ್ರೆ ಪರ್ಯಟನೆ”

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ರಾಷ್ಟ್ರಕಂಡ ಬಹು ಧೀರ್ಘ ಕಾಲದ ಕನಸು. ಪ್ರಭು ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಅವನಿಗೊಂದು ಆಲಯ ನಿರ್ಮಾಣ ಸಾಕಾರಗೊಂಡಿದೆ. ಜನವರಿ ತಿಂಗಳಿನಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ದೇವಾಲಯ ನಿರ್ಮಾಣ ಕಾರ್ಯದ ಹಿಂದೆ ದಶಕಗಳ ತ್ಯಾಗ, ಬಲಿದಾನ, ಶೌರ್ಯ, ಸಾಹಸಗಳ ಕಥಾನಕವೂ ಅಡಗಿದೆ.

ಇಂತಹ ಸಾರ್ಥಕ ಕ್ಷಣದಲ್ಲಿ ಭವಿಷ್ಯದ ಪೀಳಿಗೆಯ ಅರಿವಿಗೆ ಬರುವಂತೆ ಜಾಗೃತಿ ಮೂಡಿಸಲು “ಶೌರ್ಯ ಜಾಗರಣಾ ರಥ ಯಾತ್ರೆ”ಯನ್ನು ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಮ್ಮಿಕೊಂಡಿದೆ. ಈ ರಥವು ಜಿಲ್ಲೆಯಾದ್ಯಂತ ಸಂಚರಿಸಿ ಅ.8ರ ಸಂಜೆ ಯಲ್ಲಾಪುರಕ್ಕೆ ಆಗಮಿಸಿ ಆನಗೋಡಿನಲ್ಲಿ ತಂಗಿ ಅ.9ರಂದು ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಸಂಜೆ ನಾಯ್ಕನಕೆರೆಯ ದೇವಸ್ಥಾನದ ಆವಾರದಲ್ಲಿ ಸಮಾರೋಪಗೊಂಡು ಮುಂದೆ ಸಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ ಹೇಳಿದರು.


ಅವರು ಪಟ್ಟಣದ ಶಾರದಾಂಬಾ ದೇವಸ್ಥಾನದ ಸಭಾಭವನದಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳದ ಆಯೋಜನೆಯಲ್ಲಿ ಆಗಮಿಸಲಿರುವ ಶೌರ್ಯ ಜಾಗರಣಾ ರಥಯಾತ್ರೆಯ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.


ರಥಯಾತ್ರೆಯ ಜೊತೆಯಲ್ಲಿ ಭಜನೆ, ಸಾಂಪ್ರದಾಯಿಕ ನೃತ್ಯ, ವಿವಿಧ ಸಾಂಸ್ಕೃತಿಕ ಪ್ರಾಕಾರಗಳನ್ನು ಒಳಗೊಂಡಿದ್ದು ಹಿಂದೂ ಕುಲ ಕೋಟಿ ಬಂಧುಗಳು ಯಾತ್ರೆಯ ಯಶಸ್ಸಿಗೆ ಆಗಮಿಸಬೇಕಿದೆ ಎಂದು ಸಂಘಟನೆಯ ಗೌರವ ಅಧ್ಯಕ್ಷ ರಾಮು ನಾಯ್ಕ ಹೇಳಿದರು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕಾ ಅಧ್ಯಕ್ಷ ನಾರಾಯಣ ನಾಯಕ(ನನ್ನಿ) , ಸ್ವಾಗತ ಸಮಿತಿ ಅಧ್ಯಕ್ಷ ಗಜಾನನ ಟಿ ನಾಯ್ಕ, ತಾಲೂಕಾ ಕಾರ್ಯದರ್ಶಿ ಅನಂತ ಗಾಂವ್ಕರ ಕಂಚೀಪಾಲ ಹಾಗೂ ಸಂಘಟನೆಯ ಪ್ರಮುಖರಾದ ಪ್ರಸಾದ ಹೆಗಡೆ, ಗಿರೀಶ್ ಭಾಗ್ವತ್ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *