Breaking News

ಹೊಸ ಪ್ರಭೇದಗಳನ್ನು ಗುರುತಿಸಿ ಅಧ್ಯಯನ ಮಾಡುವ ಕೆಲಸವಾಗಲಿ-ಎಸಿಎಫ್ ಹಿಮವತಿ ಭಟ್ಟ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪರಿಸರದ ಕಾಳಜಿ ಬಿಂಬಿಸುವ ಸಂಶೋಧನೆಗಳ ಕಾರ್ಯ ಸ್ಥಳೀಯರಿಂದಲೇ ಆರಂಭವಾಗಬೇಕು. ಪಶ್ಚಿಮ ಘಟ್ಟಗಳು ಅಧ್ಯಯನಕ್ಕೆ ಅಗತ್ಯವಾದ ವಸ್ತು ವಿಷಯಗಳನ್ನು ಒಳಗೊಂಡಿದೆ. ಕಾಡಿನ ಕೌತುಕದ ಹಿಂದೆ ನಾವರಿಯದ ಅನೇಕ ಸೂಕ್ಷ್ಮತೆಗಳಿವೆ. ಅರಣ್ಯದ ವನ್ಯಜೀವಿಗಳು ಕ್ಷೇಮವಾಗಿದ್ದರೆ ನಮ್ಮ ಬದುಕೂ ಕ್ಷೇಮವಾಗಿರಬಲ್ಲದು. ಈ ಭಾಗದ ಅರಣ್ಯದ ಜೀವವೈವಿಧ್ಯತೆಗಳ ಪ್ರಭೇದಗಳನ್ನು ಇತ್ತೀಚೆಗೆ ಸ್ಥಳೀಯರ ನೆರವಿನೊಂದಿಗೆ ಗುರುತಿಸುವ ಕಾರ್ಯ ನಡೆದಿದ್ದು ಜಗತ್ತಿಗೆ ಅಪರೂಪದ ಪ್ರಬೇಧಗಳ ಪರಿಚಯವಾಗುತ್ತಿದೆ. ಹಸಿರು ದಟ್ಟವಾಗಿರುವ ಈ ಭಾಗದಲ್ಲಿ ಅರಣ್ಯದ ಬಗೆಗಿನ ಸ್ಥಳೀಯರ ಕಾಳಜಿ ಅಪರೂಪವಾದದ್ದು. ನಾವು ಅರಣ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸೋಣ ಎಂದು ಮಂಚೀಕೇರಿ ಅರಣ್ಯ ಉಪ ವಿಭಾಗ ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅಭಿಪ್ರಾಯಪಟ್ಟರು.


ಅವರು ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ರಂದು ಇಡಗುಂದಿ ವಲಯದ ವಜ್ರಳ್ಳಿ ಮತ್ತು ಬಾರೆ ಶಾಖೆಯು 69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ವನ್ಯಜೀವಿ ಜಾಗೃತಿಯ ಕುರಿತ ಕಾಲ್ನಡಿಗೆ ಜಾಥಾ ಹಾಗೂ ಛದ್ಮವೇಷ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಮಾವಿನಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಂಟೆಗಳಿ, ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಇಡಗುಂದಿ ವಲಯ ಅರಣ್ಯಾಧಿಕಾರಿ ಶಿಲ್ಪಾ ಎಸ್ ನಾಯ್ಕ ಮಾತನಾಡಿದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವನ್ಯಜೀವಿ ಛಾಯಾಗ್ರಾಹಕ ಗೋಪಾಲಕೃಷ್ಣ ಹೆಗಡೆ ಬಾರೆ., ಸರ್ವೋದಯ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ, ಸ.ಹಿಪ್ರಾಶಾಲೆಯ ಮುಖ್ಯಾಧ್ಯಾಪಕಿ ರಾಧಾ ಭಟ್ಟ , ವಜ್ರಳ್ಳಿಯ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಗಂಗಾ ಕೋಮಾರ ಬರಹಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ. ಕಾನೂರು ವಾಗಳ್ಳಿಯು ಗ್ರಾಮ ಅರಣ್ಯ ಸಮಿತಿಯ ಜಿ ಆರ್ ಗಾಂವ್ಕರ ಹಾಗೂ ಅರಣ್ಯ ಇಲಾಖೆಯ ಇಡಗುಂದಿ ಉಪವಲಯ ಅರಣ್ಯಾಧಿಕಾರಿ ಶರಣಬಸವ ದೇವರು, ಉಪಸ್ಥಿತರಿದ್ದರು.

ನಾಗಶ್ರೀ ಹೆಬ್ಬಾರ ಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಜ್ರಳ್ಳಿ ಉಪವಲಯ ಅರಣ್ಯಾಧಿಕಾರಿ ಎಚ್ ಸಿ ಪ್ರಶಾಂತ ಸ್ವಾಗತಿಸಿದರು. ಗಸ್ತು ವನಪಾಲಕ ಗೌಡಪ್ಪ ಸುಳ್ಳದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಣ್ಯ ರಕ್ಷಕ ಕೆಂಚಪ್ಪ ಕಾರ್ಯಕ್ರಮ ನಿರೂಪಿಸಿದರು. ದತ್ತಾತ್ರೇಯ ತಳವಾರ ವಂದಿಸಿದರು.


ನಂತರ ಶಾಲಾ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ ನಡೆಸಿ ಅರಣ್ಯ ಇಲಾಖೆಯಿಂದ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ವನ್ಯಜೀವಿ ಸಪ್ತಾಹ ನಿಮಿತ್ತ ನಡೆದ ಕಾಲ್ನಡಿಗೆ ಜಾಥಾ ದಲ್ಲಿ ಶಾಲಾ ಮಕ್ಕಳು ಕಾಡಿನ ವನ್ಯಪ್ರಾಣಿಗಳ ವಿವಿಧ ವೇಷದೊಂದಿಗೆ ಭಾಗವಹಿಸಿದ್ದರು. ಸಾರ್ವಜನಿಕರು,ಸಂಘ ಸಂಸ್ಥೆಗಳ ಪ್ರಮುಖರು, ಅರಣ್ಯ ಇಲಾಖೆಯ ವಜ್ರಳ್ಳಿ ಹಾಗೂ ಬಾರೆ ಶಾಖೆಯ ಕಾಶಿನಾಥ್ ,ಮನು.ಕೆ. ಶಿವಣ್ಣ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *