



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸರ್ಕಾರದ ವ್ಯವಸ್ಥೆಯಲ್ಲಿ ಅಧಿಕಾರಿಗಳ ಪದೋನ್ನತಿ, ವರ್ಗಾವಣೆ , ನಿವೃತ್ತಿ ಸಹಜ ಪ್ರಕಿಯೆ. ಆದರೆ ಕೆಲವೊಮ್ಮೆ ಇಂತಹ ಪ್ರಕ್ರಿಯೆಗಳಿಂದ ವ್ಯವಸ್ಥೆಯಲ್ಲಾಗುವ ಚುರುಕುತನಕ್ಕೆ ಅಡ್ಡಿಯಾಗುತ್ತದಲ್ಲದೇ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುವವರನ್ನು ಕಳೆದುಕೊಳ್ಳುವ ಪ್ರಕ್ರಿಯೆ ಸಾರ್ವಜನಿಕ ವಲಯಕ್ಕಾಗುತ್ತದೆ.

ಕೇವಲ 9೦ ದಿನಗಳ ಕಾಲ ಯಲ್ಲಾಪುರ ಪ್ರಭಾರಿ ತಹಸೀಲ್ದಾರರಾಗಿ ಕಾರ್ಯನಿರ್ವಹಿಸಿದ ಅಶೋಕ ಭಟ್ಟ ವರ್ಗಾವಣೆ ವ್ಯವಸ್ಥೆಯಲ್ಲಿ ತರುತ್ತಿದ್ದ ಹೊಸತನಕ್ಕೆ ತಡೆಯೊಡ್ಡಿದಂತಾಗಿದೆ..

ಅಶೋಕ ಭಟ್ಟ ಜನಸ್ನೇಹಿ ಅಧಿಕಾರಿಯಾಗಿದ್ದಲ್ಲದೇ ಜನಪ್ರತಿನಿಧಿಗಳ , ಇತರೆ ಇಲಾಖೆಗಳ ಅಧಿಕಾರಿಗಳ ವಿಶೇಷವಾಗಿ ಕಂದಾಯ ಇಲಾಖಾ ಅಧಿಕಾರಿಗಳ ಅತ್ಯಾಪ್ತ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಜಡ್ಡು ಹಿಡಿದ ವ್ಯವಸ್ಥೆಯಲ್ಲೇ ಹೊಸ ಚಿಗರು ಮೂಡಿಸಿ ನಾಮಕಾವಸ್ತೆ ಸರ್ಕಾರಿ ಕಾರ್ಯಕ್ರಮಗಳಾಗಿದ್ದ ರಾಷ್ಟ್ರೀಯ ಹಬ್ಬಗಳು, ಮಹನೀಯರ ಜಯಂತಿಗಳನ್ನು ವಿಶಿಷ್ಟ-ವಿಭಿನ್ನವಾಗಿ ಆಚರಿಸುವುದರ ಮೂಲಕ ಸಾರ್ವಜನಿಕ ಕಾರ್ಯಕ್ರಮವಾಗಿಸಿದವರು. ನೂತನ ಆಡಳಿತ ಸೌಧದ ಚಿತ್ರಣವನ್ನೇ ಬದಲಿಸಿ ತನ್ನ ಇಲಾಖೆಯ ಎಲ್ಲ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಿರುವ ಹಾಗೂ ಗುರುತಿನ ಚೀಟಿ ಧರಿಸಲೇಬೇಕೆಂಬ ವ್ಯವಸ್ಥೆ ಜಾರಿಗೆ ತಂದವರು.

ಕರ್ತವ್ಯ ನಿರ್ವಹಿಸಿದ 9೦ ದಿನಗಳಲ್ಲಿ ಭಾರೀ ಮಳೆಗಾಲವನ್ನು ಎದುರಿಸಿದ್ದಲ್ಲೇ ಆ ಸಂದರ್ಭದಲ್ಲಾದ ಅವಘಡಗಳಿಗೆ ತಕ್ಷಣಕ್ಕೆ ಪರಿಹಾರ ಕೊಡಿಸುವ ಕಾಯಕದಲ್ಲಿ ಶಾಸಕರ ಅಣತಿಯಂತೆ ಕಾರ್ಯನಿರ್ವಹಿಸಿದ್ದಲ್ಲೇ ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ತಾಲೂಕನ್ನು ಸುತ್ತಿದ್ದಾರೆ. ಭೂಮಿ ತಂತ್ರಾಂಶ ಕಾರ್ಯದಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ಆಧಾರ ಸೀಡಿಂಗ್ನಲ್ಲಿ ಉತ್ತಮ ಸ್ಥಾನಗಳಿಸುವಂತೆ ಕಾರ್ಯ ನಿರ್ವಹಿಸಿ ಎಲ್ಲರಿಗೂ ಅತ್ಯಾಪ್ತರಾಗಿ ಸ್ವಸ್ಥಾನ ಕುಮಟಾಗೆ ಮರಳುತ್ತಿದ್ದಾರೆ.

ತೆರವಾದ ಸ್ಥಾನಕ್ಕೆ ಕಲಘಟಗಿ ತಹಶಿಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದ ಯಲ್ಲಪ್ಪ ಗೋಣೆಣ್ಣನವರ ನಿಯುಕ್ತಿಗೊಂಡಿದ್ದು ಸೆ.6ರಂದು ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
Prathidvani Yellapura