

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ದಾರಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಯನ್ನು ಅಪರಿಚಿತನೋರ್ವ ಅಡ್ಡಗಟ್ಟಿ ತಾನು ಪೊಲೀಸ್ ಎಂದು ಹೇಳಿ ವಿದ್ಯಾರ್ಥಿಯ ಕೈಲ್ಲಿದ್ದ 16.500/ರೂ ಮೊಬೈಲ್ ಅನ್ನು ತೆಗೆದುಕೊಂಡು ಹೋದ ಘಟನೆ ಪಟ್ಟಣದ ತಿಲಕ್ಚೌಕ್ನಲ್ಲಿ ನಡೆದಿದ್ದು ಯಲ್ಲಾಪುರ ಠಾಣೆಯಲ್ಲಿ ದೂರು ಆ.5 ರಂದು ದಾಖಲಾಗಿತ್ತು.
ಈ ಸಂಬಧ ತನಿಖೆಗಿಳಿಗಿದ ಪೊಲೀಸರು ಖಚಿತ ಮಾಹಿತಿಯನ್ನಾಧರಿಸಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರೆಹಮಾನ್ ಸಾಬ್ ಮಡ್ಲೇರಿ ನಿವಾಸಿ ಅರಫಾತ್ ಅಬ್ದುಲ್ ಅಜೀಂ ಸಾಬ್(29) ಎಂಬಾತನನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಈತನು ಹಾಸನ ಜಿಲ್ಲೆಯ ಜಾವಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಮಾಹಾ ಕಂಪನಿಯ ಎಂ.ಟಿ ಮಾದರಿಯ ಮೋಟಾರ್ಸೈಕಲ್ ಅನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದ್ದು ಈತ ಅಂತರ ರಾಜ್ಯ ಕಳ್ಳನಾಗಿರುತ್ತಾನೆ.
ಅಂಕೋಲಾ, ಹುಬ್ಬಳ್ಳಿ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ಠಾಣಾ ವ್ಯಾಪ್ತಿಯಲ್ಲಿ ಈತನ ಮೇಲೆ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿರುತ್ತದೆ.
ಆರೋಪಿತನಿಂದ ರೆಡ್ಮಿ ಕಂಪನಿಯ ನೋಟ್ 11 ಎಸ್ ಮಾದರಿಯ 16,500 ರೂ ಮೌಲ್ಯದ ಮೊಬೈಲ್, ಜಾವಗಲ್ನಲ್ಲಿ ಕಳ್ಳತನ ಮಾಡಿ ಕೃತ್ಯಕ್ಕೆ ಬಳಸಿದ 2,2೦,೦೦೦ ಮೌಲ್ಯದ ಮೋಟಾರ್ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
Prathidvani Yellapura