

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ಅದಿವೇಶನದಲ್ಲಿ ಬುಧವಾರ ಪ್ರಶ್ನೋತ್ತರ ಕಲಾಪದ ವೇಳೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಪಕ್ಷಾತೀತವಾಗಿ ಕ್ಷೇತ್ರದ ಬೇಧವಿಲ್ಲದೆ ಘಟ್ಟದ ಮೇಲಿನ ತಾಲೂಕುಗಳ ಸರ್ವಜನತೆಯ ಪರವಾಗಿ ಮಳೆ ಕೊರತೆಯ ಕಾರಣ ಬರಪೀಡಿತ ತಾಲೂಕು ಘೋಷಣೆಗೆ ಮನವಿ ಮಾಡಿದರು.
ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಮಳೆಗೆ ಯಾವಕೊರತೆ ಇಲ್ಲದೆ ಸುರಿಯುತ್ತಿದೆ ಆದರೆ ಘಟ್ಟದ ಮೇಲಿ ನ ತಾಲೂಕುಗಳಲ್ಲಿ ವಾಡಿಕೆಗಿಂತ 70% ಪ್ರತಿಶತ ಮಳೆಯ ಪ್ರಮಾಣ ಕಡಿಮೆಯಾಗಿದ್ದು ರೈತರು ಕಂಗಾಲಾಗಿದ್ದಾರೆ .

ಇದು ನನ್ನ ಒಂದೇ ಕ್ಷೇತ್ರದ ಸಮಸ್ಯೆಯಲ್ಲ ಪಕ್ಕದಲ್ಲಿರುವ ದೇಶಪಾಂಡೆ ಅವರ ಹಳಿಯಾಳ ಬೀಮಣ್ಣ ನಾಯ್ಕ್ ಅವರ ಶಿರಸಿ ಕ್ಷೇತ್ರಗಳ ಕಥೆಯು ಇದೇ ಆಗಿದೆ. ಆದ್ದರಿಂದ ಸರ್ಕಾರ ಬರ ಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಕಂದಾಯ ಸಚಿವ ಕೃಷ್ಣಭೈರೆಗೌಡ ಅವರಲ್ಲಿ ಮನವಿ ಮಾಡಿದರು.
ಇಂಧನ ಇಲಾಖೆ ಹೊಸ ನಿಯಮಾವಳಿ ಜಾರಿಗೊಳಿಸಿರುವುದರಿಂದ ಪಂಚಾಯತ ವತಿಯಿಂದ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿಯಾಗುತ್ತಿದ್ದು ಇಲಾಖೆಯ ಕಠಿಣ ನಿಯಮಗಳನ್ನು ಸರಳೀಕರಿಸಬೇಕೆಂದು ಇಂಧನ ಖಾತೆ ಸಚಿವ ಕೆಜೆ.ಜಾಜ್೯ ಅವರಲ್ಲಿ ಮನವಿ ಮಾಡಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಕೀಯ ವಿರೋದವಿದ್ದರು ಜನರ ಮೂಲಭೂತ ಸೌಕರ್ಯ ಮತ್ತು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಯಾವುದೆ ಬೇಧ ತೋರದೆ ಘಟ್ಟದ ಮೇಲಿನ ಎಲ್ಲಾ ತಾಲೂಕಿನ ರೈತರ ದ್ವನಿಯಾಗಿ ಮನವಿ ಮಾಡಿರುವುದು ಶಾಸಕ ಹೆಬ್ಬಾರ್ ಅವರ ಪ್ರಬ್ಬುದ್ದ ರಾಜಕಾರಣಕ್ಕೆ ಸಲಾಂ ಎನ್ನುತ್ತಿದ್ದಾರೆ.
Prathidvani Yellapura