


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸಂವಿಧಾನ ಜಾಗೃತಿ ಜಾಥಾವು ಫೆ.5 ರಂದು ತಾಲೂಕಿಗೆ ಆಗಮಿಸಿದ್ದು ಫೆ.6 ರಂದು ಬಿಸಗೋಡು ಕ್ರಾಸ್‌ನಿಂದ ಭವ್ಯ ಸ್ವಾಗತದೊಂದಿಗೆ ಬೈಕ್ ರ‍್ಯಾಲಿ ಮೂಲಕ ಪಟ್ಟಣದ ಬಸ್‌ನಿಲ್ದಾಣದವರೆಗೆ ಕರೆತರಲಾಯಿತು.

ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜನಾರ್ಧನ ಪಾಟಣಕರ, ಕಾರ್ಯದರ್ಶಿ ಸಂತೋಷ ಪಾಟಣಕರ, ಸದಸ್ಯರಾದ ಲೋಕೇಶ ಪಾಟಣಕರ, ನಿರಂಜನ ಪಾಟಣಕರ, ಅನಿಲ್ ಮರಾಠೆ, ರವೀಂದ್ರ ಪಾಟಣಕರ, ಇತರೆ ಸಂಘಟನೆಗಳ ಪದಾಧಿಕಾರಿಗಳಾದ ಮಾರುತಿ ಭೋವಿವಡ್ಡರ, ಅಶೋಕ ಕೊರವರ, ಸಂತೋಷ ಭೋವಿವಡ್ಡರ ಹಾಗೂ ಇನ್ನಿತರ ಪ್ರಮುಖರು, ಪಟ್ಟಣ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಎಲ್‌ಇಡಿ ಪರದೆಯ ಮೂಲಕ ಸಂವಿಧಾನ ಜಾಗೃತಿ ಮಾಹಿತಿಯನ್ನು ಜನತೆಗೆ ಪ್ರದರ್ಶಿಸಲಾಯಿತು.



Prathidvani Yellapura