Breaking News

ಪ್ರತಿಷ್ಠಿತ ತಿಲಕ್ ಚೌಕ್ ಗಜಾನನೋತ್ಸವ ಸಮಿತಿ ಯಲ್ಲಾಪುರದ ಅತ್ಯಂತ ಹಳೆಯ ಸಮಿತಿ ಗಣೇಶೋತ್ಸವ ಸಿದ್ದತೆ ಬಲು ಜೋರು..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅತ್ಯಂತ ಪುರಾತನ ಗಜಾನನೋತ್ಸವ ಸಮಿತಿಯಾದ ತಿಲಕ ಚೌಕದ ಶ್ರೀ ಗಜಾನನೋತ್ಸವ ಸಮಿತಿಯಲ್ಲಿ 58ನೇ ವರ್ಷದ ಚೌತಿಯ ಗಣೇಶನ ಪ್ರತಿಷ್ಠಾಪನೆಗೆ ಭರದಿಂದ ಸಿದ್ಧತೆಗಳು ಸಾಗಿವೆ.


1965 ರಲ್ಲಿ ಬಿ.ಆರ್. ಕವಳಿಯವರ ಜಾಗದಲ್ಲಿ ಚಂದ್ರು ಗುಡಿಗಾರ್ ಮತ್ತು ವಿ.ಪಿ ಭಟ್ಟ ಕಣ್ಣಿಮನೆ ನೇತೃತ್ವದಲ್ಲಿ ಸಮಿತಿ ಸ್ಥಾಪನೆಗೊಂಡು 1990 ರಲ್ಲಿ ಶಿವಾನಂದ ಹರಿ ಕುದುಳೆ ನೇತೃತ್ವದಲ್ಲಿ 25ನೇ ವರ್ಷ ರಜತ ಮಹೋತ್ಸವ, 2015ರಲ್ಲಿ ಗಣಪತಿ ಪ್ರಸನ್ನ ನರಹರಿ ಗುಡಿಗಾರ ಅಧ್ಯಕ್ಷತೆಯಲ್ಲಿ ಸ್ವರ್ಣ ಮಹೋತ್ಸವ ಹಾಗು ಸುಮಾರು 45ಲಕ್ಷ ರೂಪಾಯಿಯಲ್ಲಿ ಕಟ್ಟಡ ನಿರ್ಮಾಣಗೊಂಡಿತು. 1990ರಲ್ಲಿ ಯಲ್ಲಾಪುರ ಗೆಳೆಯರ ಬಳಗದವರಿಂದಾ ಬೆಳ್ಳಿ ಕಿರೀಟ ಸಮರ್ಪಣೆಯಾಯಿತು.

2022 ರಿಂದಾ ಇಂದಿನವರೆಗೆ ಬಾಲಕೃಷ್ಣ ನಾಯಕ ಅಧ್ಯಕ್ಷತೆಯಲ್ಲಿ ಉತ್ಸವ ಗಣಪತಿ (ದೊಡ್ಡ) ಮತ್ತು ಪೂಜಾ ಗಣಪತಿಗೆ ಅಂದಾಜು 20 ಲಕ್ಷ ರೂಪಾಯಿಗಳಲ್ಲಿ ಬೆಳ್ಳಿ ಕಿರೀಟ ಮತ್ತು ಬೆಳ್ಳಿ ಪ್ರಭಾವಳಿ ಮಾಡಿಸಲಾಯಿತು. 2012 ರಿಂದ ಪ್ರತಿ ವರ್ಷ 5000 ರಿಂದ 6000 ಜನರಿಗೆ ಮಹಾ ಅನ್ನಸಂತರ್ಪಣೆ ನಡೆಯುತ್ತಿದೆ.

2022-23ರಲ್ಲಿ ಸಮಿತಿಗೆ ಸದಾ ಮಾರ್ಗದರ್ಶಕರಾದ ಶಿವರಾಮ ಹೆಬ್ಬಾರ್ ಮತ್ತು ವಿವೇಕ ಹೆಬ್ಬಾರರವರ್ ವಿಂಪ್ ಕಂಪನಿ ವತಿಯಿಂದ 4 ಲಕ್ಷ ರೂಪಾಯಿಗಳಲ್ಲಿ ಕಟ್ಟಡಕ್ಕೆ ಮೇಲ್ಚಾವಣಿ ನಿರ್ಮಾಣ ಮಾಡಿಕೊಡಲಾಗಿದೆ. 2023 ರಲ್ಲಿ 12 ಲಕ್ಷ ರೂ ವೆಚ್ಚದಲ್ಲ್ಲಿಕಟ್ಟಡದ ಪಕ್ಕದ ಜಾಗದಲ್ಲಿ ಮೂರು ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದೆ.

ಈ ವರ್ಷ 09.09.2024 ಪ್ರತಿಷ್ಟಾಪನೆ, 13.09.2024 ಶುಕ್ರವಾರ ಮಹಾ ಅನ್ನಸಂತರ್ಪಣೆ, ನಡೆಯಲಿದೆ 17.09.2024 ವಿಸರ್ಜನಾ ಮಹಾಪೂಜೆ ಹಾಗು 18.09.2024 ಬುಧವಾರ ವಿಸರ್ಜನಾ ಮೆರವಣಿಗೆ ಇರುತ್ತದೆ. 9ದಿನಾ ಮನೋರಂಜನಾ,ಕ್ರೀಡಾ, ಮತ್ತು ಸಾಂಸ್ಕೃತಿಕ ಮತ್ತು ಗಣಹವನ ಹಾಗು ಸಹಸ್ರ ದುರ್ವರ್ಚನೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯಿಂದ ತಿಳಿಸಿದ್ದಾರೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *