

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ತಾಲೂಕಿನ ರಾಮಾಪುರ ಮತ್ತು ಕಾಜಲವಾಡಾ ಗ್ರಾಮಕ್ಕೆ ಸಂಚರಿಸುವ ರಸ್ತೆ ಹೊಂಡಗುಂಡಿಗಳಿಂದ ತುಂಬಿಹೋಗಿತ್ತು ಇದನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ತಮ್ಮ ಗ್ರಾಮದ ರಸ್ತೆ ತಾವೆ ದುರಸ್ತಿ ಮಾಡಿಕೊಂಡಿದ್ದಾರೆ.

ಮಳೆಯಿಂದ ಹಾಳಾದ ರಸ್ತೆಯಲ್ಲಿ ಗ್ರಾಮದ ಶಾಲಾ ಮಕ್ಕಳು ವೃದ್ದರ ಒಡಾಟ್ಟಕ್ಕೆ ತೊಂದರೆ ಯಾಗುತ್ತಿದ್ದ ಕಾರಣ ಯುವಕರು ಗ್ರಸಮದ ಹಿರಿಯರು ಕೆಲಸ ಮಾಡಿದರು. ಸ್ಥಳಕ್ಕೆ ಅಗಮಿಸಿದ ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯೆ ಕಲ್ಪನಾ ಗಜಾನನ ನಾಯ್ಕ ಎರಡು ಚಿಲ ಸಿಮೆಂಟ್ ದೆಣಿಗೆ ನಿಡಿದರು.

ಪ್ರಕಾಶ ದೇವಕರ, ಸಂತೋಷ ಮರಾಠಿ , ಸುಬ್ರಹ್ಮಣ್ಯ ಪಂಢರಪುರ, ಅಪ್ಪಣ್ಣ ಮರಾಠಿ, ಬಾಲು, ಪಂಡರಪುರ ವಿಶ್ವಾ ದೆಸಾಯಿ ಚಂದ್ರಕಾಂತ, ಅಣ್ಣಪ್ಪಾ ಪಾಟಿಲ ನಾಗರಾಜ ಗುಣವಂತ ನಾಯ್ಕ ಮೊದಲಾದವರು ಶ್ರಮದಾನದಲ್ಲಿ ಪಾಲ್ಗೊಂಡು ಇತರರಿಗೆ ಮಾದರಿಯಾದರು.
Prathidvani Yellapura