

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆ ಯಲ್ಲಿ ಬಣ್ಣದ ಹೂಗಿಡಗಳ ರಾಶಿ ಅಲಂಕಾರಿಕ ಸಸ್ಯಗಳ ಮಾರಾಟ ಬಲುಜೋರಾಗಿ ಸಾಗಿದೆ.
ಪ್ರತಿ ವರ್ಷ ಹೂಗಿಡ ತಂದು ಒಂದು ಅಥವ ಎರಡು ತಿಂಗಳ ಕಾಲ ವ್ಯಾಪರ ಮಾಡಿ ಮುಂದೆ ಸಾಗುವ ಅದೇ ವ್ಯಾಪಾರಸ್ಥರು ಪಟ್ಟಣಕ್ಕೆ ಬಂದಿದ್ದು ಅಂಚೆ ಇಲಾಖೆಯ ಮುಂಬಾಗದಲ್ಲಿ ಹೂ ಗಿಡಗಳು ಮತ್ತು ಅಲಂಕಾರಿಕ ಸಸ್ಯಗಳ ರಾಶಿ ಹಾಕಿ ಮಾರಟ ಮಾಡಲಾಗುತ್ತಿದೆ.

ವಿವಿಧ ಬಣ್ಣದ ಹಾಗು ಜಾತಿಯ ಗುಲಾಬಿ ನೋಡುಗರ ಕಣ್ಮನ ತಣಿಸಿದರೆ ಸೇವಂತಿ ಚೆಂಡು ಹೂ ರಾಶಿ ಹೂಗಿಡಗಳ ಮದ್ಯ ರಾರಾಜಿಸುತ್ತಿದೆ ಇನ್ನು ಅಲಂಕಾರಿಕ ಗಿಡಗಳು ಒಂದಕ್ಕಿಂತ ಒಂದು ಜನರನ್ನು ಆಕರ್ಶಿಸುತ್ತಿವೆ.

ಕ್ರಿಸ್ ಮಸ್ ಟ್ರೀ, ಬೊನ್ಸಾಯ ವಿಶೇಷವಾಗಿವೆ 50 ರಿಂದ ಪ್ರಾರಂಭವಾಗಿ 1 ಸಾವಿರ ಬೆಲೆಯ ಗಿಡಗಳು ಲಭ್ಯವಿದೆ. ಮಳೆ ಬೀಳುವ ಪ್ರಮಾಣ ಕಡಿಮೆ ಇರುವುದರಿಂದ ಜನರ ಓಡಾಟವಿದ್ದು ವ್ಯಾಪಾರ ಬಲುಜೋರಾಗಿ ಸಾಗಿದೆ.

ಮಹಾರಾಷ್ಟ್ರದ ಪುಣೆಯಿಂದ ಬಂದಿರುವ ತಂಡ ಯಲ್ಲಾಪುರ ಮಾತ್ರವಲ್ಲದೆ ಶಿರಸಿ, ಸಿದ್ದಾಪುರ, ಬನವಾಸಿ, ಅಂಕೋಲಾ, ಕುಟುಟಗಳಲ್ಲು ಇವರ ತಂಡ ವ್ಯಾಪಾರಕ್ಕಿಳಿಯುತ್ತಾರೆ.

ಪ್ರತಿವರ್ಷ ಎರಡು ತಿಂಗಳ ಕಾಲ ಯಲ್ಲಾಪುರದಲ್ಲಿ ಮತ್ತು ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಹೂ ಗಿಡಗಳ ವ್ಯಾಪಾರ ಮಾಡುತ್ತೇವೆ. ಒಂದೊಂದು ಕಡೆ ಇಬ್ಬರು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತೇವೆ. ಒಂದುವೇಳೆ ಹೆಚ್ಚು ಗಿಡಗಳು ಖಾಲಿಯಾದರೆ ಮತ್ತೆ ಪುನಾದಿಂದ ತರಿಸಲಾಗುತ್ಯದೆ. ಸದ್ಯ ವ್ಯಾಪಾರ ಪ್ರಾರಂಬಿಸಿದ್ದು ಹೆಚ್ಚಿನ ಗ್ರಾಹಕರ ನಿರೀಕ್ಷೆಯಲ್ಲದ್ದೇವೆ. ರವಿವಾರ ಸಂತೆಯ ದಿನವಾಗಿದ್ದು ಹೆಚ್ಚಿನ ಜನರು ಆಗಮಿಸಿ ಗಿಡ ಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ.
ಮನೋಜ್
ಹೂಗಿಡಗಳ ವ್ಯಾಪಾರಿ ಪೂನಾ.
Prathidvani Yellapura