

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರ ಎಂದು ಬಾವಿಸದೆ ಪ್ರತಿ ನಾಗರಿಕನ ಜವಾಬ್ದಾರಿ ಮತ್ತು ಕರ್ತವ್ಯ ಎಂಬ ಪ್ರಜ್ಞೆ ಮೂಡಬೇಕಿದೆ. ನಮ್ಮ ಕೈಲಾದ ಮಟ್ಟಿಗೆ ಭೂಮಿಯ ಋಣವನ್ನು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಮೂಲಕ ತೀರಿಸಬೇಕಿದೆ ಎಂದು ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಸರೇಶ್ ಬೋರ್ಕರ್ ಹೇಳಿದರು.

ಅವರು ಪಟ್ಟಣದ ಕಾಳಮ್ಮ ನಗರದ ಸರ್ಕಾರಿ ಶಾಲೆಯ ಆವಾರದಲ್ಲಿ ವನಮಹೋತ್ಸವ ಆಚರಿಸಿ ಗಿಡಗಳನ್ನು ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಶಿಕ್ಷಣ ಇಲಾಖೆ ಅಧಿಕಾರಿ ಷಣ್ಮುಖ ಹೆಗಡೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುರೇಶ್ ಮಡಿವಾಳ, ಮುಖ್ಯ ಅಧ್ಯಾಪಕಿ ಸುನಂದ ಪಾಟಣ್ಕರ್ ಇತರೆ ಶಿಕ್ಷಕ ವೃಂದ ಹಾಗು ಲಯನ್ಸ್ ಕ್ಲಬ್ ಪ್ರಮುಖರಾದ ನಂದನ್ ಬಾಳಗಿ, ಶಾಂತಾರಾಮ ಹೆಗಡೆ, ಮಹೇಶ್ ಗೌಳಿ, ಎಸ್.ಎನ್.ನಾಯಕ, ಎನ್‌ಎ.ಭಟ್ , ಶೇಷಗಿರಿ ಪ್ರಭು, ಕಿರಣ್ ಶೆಟ್ಟಿ, ಮೋಹನ ನಾಯಕ್, ಇನ್ನಿತರ ಪ್ರಮುಖರು ಭಾಗಿಯಾಗಿದ್ದರು.
Prathidvani Yellapura