Breaking News

ಪಟ್ಟಣದಲ್ಲಿ ಮಳೆಗಾಲದ ಮೊದಲ ಅವಘಡ ಧರೆಗುರುಳಿದ ಬಾರಿಗಾತ್ರದ ಮರ..!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಮುಂಬಾಗ ಮುಂಡಗೋಡು ರಸ್ತೆಯಲ್ಲಿ 150 ಕ್ಕು ಅಧಿಕ ವರ್ಷದ ಬೃಹತ್ ಗಾತ್ರದ ಬಸರಿ ಮರ ರೋಡಿಗೆ ಅಡ್ಡಲಾಗಿ ಬಿದ್ದಿದ್ದು ಯಾವುದೇ ಪ್ರಾಣಪಾಯ ಸಂಭವಿಸದಿರುವುದು ಅದೃಷ್ಟ ಎನ್ನಬಹುದಾಗಿದೆ.


ಮಂಗಳವಾರ ರಾತ್ರಿ ಮರ ಬಿದ್ದಿದ್ದು ಆ ಸಂದರ್ಭದಲ್ಲಿ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲವಾಗಿದ್ದು ದೇವರ ಅನುಗ್ರಹ ಎನ್ನಬಹುದು.

ಆದರೆ ಅದರ ಬುಡದಲ್ಲಿ ಇದ್ದ ಜಿ.ಎಸ್.ಭಟ್ ಎಂಬುವರ ಗೂಡಂಗಡಿ ಮೇಲೆ ಮರ ಬಿದ್ದಿದ್ದು ಸಣ್ಣ ಪುಟ್ಟ ಸಮಸ್ಯೆ ಆಗಿದೆ. ಮರ ಬೀಳುವ ಸಂದರ್ಭದಲ್ಲಿ ಅವರು ಅಂಗಡಿಯಲ್ಲಿಯಲ್ಲಿದ್ದರು.

ಅದೇ ರಸ್ತೆಯಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದ ಪಟ್ಟಣದ ಕರೀಂ ಎಂಬ ಯುವಕ ಮರ ಬೀಳುವುದನ್ನು ನೋಡುತ್ತಲೆ ಬೈಕ್ ಬಿಟ್ಡು ಓಡಿದ್ದಾನೆ ಆತನು ಅಪಾಯದಿಂದ ಪಾರಾಗಿದ್ದು ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ.


ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕ್ಷಿಪ್ರಗತಿಯಲ್ಲಿ ಮರದ ತೆರವು ಕಾರ್ಯ ಕೈಗೊಂಡರು ಆದರು ಸಂಪೂರ್ಣ ಮರ ರಸ್ತೆಯಿಂದ ತರವು‌ಸಾದ್ಯ ವಾಗಿಲ್ಲ ಕಾರಣ ಮರ ಗಜಗಾತ್ರದಲ್ಲಿದ್ದು ಕ್ರೇನ್ ಬಳಸಿ ತೆರವು ಕಾರ್ಯ ಜರುಗಿಸಬೇಕಿದೆ ಆದ ಕಾರಣ ಬುಧವಾರ ಹಗಲಿನಲ್ಲಿ ಕಾರ್ಯಾಚರಣೆ ಮುಂದುವರೆಸಲು ನಿರ್ಧರಿಸಲಾಯಿತು.

ಆದರು ಬಿದ್ದಿರುವ ಮರದ ಅಡಿಯಲ್ಲಿ ಜನಸಂಚಾರ, ದ್ವಿಚಕ್ರ ವಾಹನ ಸಂಚಾರಕ್ಲೆ ಸ್ಥಳಾವಕಾಶ ಮಾಡಲಾಯಿತು.

ಮರ ತೆರವಾಗುವವರೆಗು ಬಾರಿ ಗಾತ್ರದ ವಾಹನಗಳ ಸಂಚಾರಕ್ಕೆ ರಸ್ತೆ ಬಂದ್ ಮಾಡಲಾಗಿದ್ದು ಬೃಹತ್ಬಗಾತ್ರದ ಮರ ತೆರವಾಗಬೇಕಿದೆ.

ಜಾತ್ರಾ ಸಂದರ್ಭದಲ್ಲಿ ಊರಿನ ಸೌಂದರ್ಯಕ್ಕೆ ಮತ್ತು ಪ್ರಕಾಶಮಾನವಾದ ಬೆಳಕಿಗೆ ಕೋಟ್ಯಾಂತರ ಹಣದಲ್ಲಿ ಆಗಿನ ಸಚಿವರು ಹಾಲಿ ಶಾಸಕ ಹೆಬ್ಬಾರ್ ಅವರ ಪ್ರಯತ್ನದ ಫಲವಾಗಿ ಅತ್ಯಾಧುನಿಕ ತಂತ್ರಜ್ಞಾನದ ಬೃಹತ್ ವಿದ್ಯುತ್ ಕಂಬ ಪಟ್ಟಣದಾದ್ಯಂತ ಅಳವಡಿಸಿದ್ದು ಮರದ ಬುಡದಲ್ಲಿದ್ದ ಕಂಬ ಧರಾಶಾಯಿಯಾಗಿದೆ. ಯಲ್ಲಾಪುರದ ಹೆಸ್ಕಾಂ ಸಿಬ್ಬಂದಿಗಳು ರಾತ್ರಿಯಿಂದಲು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದ ಯಲ್ಲಾಪುರ ಕಾಳಮ್ಮ ನಗರ ಕೆಲವು  ನಿವಾಸಿಗಳಿಗೆ ವಿದ್ಯುತ್ ನೀಡದ ಸಮಸ್ಯೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಮುರಾರ್ಜಿ ವಸತಿ ಶಾಲೆ …

Leave a Reply

Your email address will not be published. Required fields are marked *