



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಯಲ್ಲಾಪುರ : ಭೂಮಿಯಮೇಲಿನ ಉತ್ತಮ ಪರಿಸರಕ್ಕೆ ಯಲ್ಲಾಪುರ ವ್ಯಾಪ್ತಿ ಉತ್ತಮ ಉದಾಹರಣೆಯಾಗಿದೆ. ಇಂತಹ ಆರೋಗ್ಯಕರ ಪರಿಸರವನ್ನು ನಮ್ಮ ಪೀಳಿಗೆಗೆ ಕಾಯ್ದಿಟ್ಟು ಕೊಟ್ಟು ಹೀದ ನಮ್ನ ಪೂರ್ವಜರ ಕಾರ್ಯವನ್ನು ನಾವೆಲ್ಲರೂ ಶ್ಲಾಘಿಸಬೇಕಿದೆ ಎಂದು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಬಾನು ಹೇಳಿದರು.


ಅವರು ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಟ್ರೀ ಪಾಕ್೯ ನಲ್ಲಿ ಆಯೋಜಿಸಲಾದ ಪರಿಸರ ದಿನಾಚರಣೆಯ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಿಡ ನೆಟ್ಟು ನೀರುಣಿಸಿ ಮಾತನಾಡಿದರು.

“ಬೆಳಗಾನೆ ನಾನೆದ್ದು ಯಾರ್ಯಾರ ನೆನೆಯಲಿ” ಎಂಬ ಜಾನಪದ ಗೀತೆ ” ಒಲೆ ಹೊತ್ತಿ ಉರಿದರೆ ನಿಲಬಹುದು ಧರೆ ಹೊತ್ತಿ ಉರಿದ ನಿಲಲಾಗದು” ಎಂಬ ಬಸವಣ್ಣನ ವಚನದ ಸಾಲುಗಳು ಪ್ರಸ್ತುತ ಪರಿಸರಕ್ಕೆ ಜಾಗೃತಿ ಸಂದೇಶಗಳಾಗಿವೆ. ವಿಶೇಷವಾಗಿ ಈ ವರ್ಷ ಭೂಮಿಯ ಸವಕಳಿಯ ಕುರಿತು ಜಾಗೃತಿ ತರಭೇತಿ ಕಾರ್ಯಗಾರಗಳು ಜರುಗಲಿವೆ. ಪರಿಸರದ ಬಗ್ಗೆ ಹೆಚ್ಚು ಕಾಳಜಿ ತೋರಬೇಕಿದೆ ಇಲ್ಲವಾದಲ್ಲಿ ಭವಿಷ್ಯ ಭಯಂಕರವಾಗಿರಲಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ , ವಲಯ ಅರಣ್ಯಾಧಿಕಾರಿ ಎಲ್.ಮಠ ಇನ್ನಿತರ ಅಧಿಕಾರಿಗಳು , ಸಿಬ್ಬಂದಿಗಳು ಉಪಸ್ಥಿತರಿದ್ದರು.
Prathidvani Yellapura