

ಪ್ರತಿಧ್ವನಿ,ಯಲ್ಲಾಪುರ : ಜೆ ಎಮ್ ಎಫ್ ಸಿ ನ್ಯಾಯಾಲಯ ಯಲ್ಲಾಪುರ ಹಾಗೂ ಯಲ್ಲಾಪುರ ಅರಣ್ಯ ವಿಭಾಗ ಹಾಗೂ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಜೆ ಎಮ್ ಎಫ್ ಸಿ ನ್ಯಾಯಾಲಯ ಯಲ್ಲಾಪುರದ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ರವರು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.



ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಆರ್.ಕೆ ಭಟ್, ವಕೀಲರ ಸಂಘದ ಪದಾಧಿಕಾರಿ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಎಚ್ ದೇಸಾಯಿ, ಜೀನತ್ ಶೇಕ್, ಅಪರ ಸರ್ಕಾರಿ ವಕೀಲೆ ಎನ್ ಟಿ ಗಾಂವ್ಕರ್, ಹಿರಿಯ ವಕೀಲ ಕೆ.ಎನ್ ಹೆಗಡೆ, ಸರಸ್ವತಿ ಭಟ್, ಎಲ್ಲಾ ಪ್ಯಾನಲ್ ವಕೀಲರು, ಯಲ್ಲಾಪುರ ವಲಯದ ವಲಯ ಅರಣ್ಯಾಧಿಕಾರಿ ಎಲ್.ಎ ಮಠ, ನ್ಯಾಯಾಲಯದ ಸಿಬ್ಬಂದಿಗಳು, ಹಾಗೂ ಪತ್ರಿಕಾ ಮಾಧ್ಯಮದವರು ಉಪಸ್ಥಿತರಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ನ ಸುಧಾಕರ್ ನಾಯ್ಕ್ ಸ್ವಾಗತಿಸಿ ವಂದಿಸಿದರು.





Prathidvani Yellapura