
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಅಯೋಧ್ಯೆಯಲ್ಲಿನ ರಾಮ ಮಂದಿರ ಲೋಕಾರ್ಪಣೆ ನಿಮಿತ್ತ ಹಿಂದುಗಳ ಮನೆಮನೆಗೆ ಅಕ್ಷತೆ ನೀಡಿ ಆಹ್ವಾನಿಸುವ ಸಂಕಲ್ಪ ಮಾಡಿದ್ದು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಶುಭಾರಂಭ ಮಾಡಲಾಯಿತು.

ಜ,22 ರಂದು ದೇಶಾದ್ಯಂತ ರಾಮನಾಮ ಜಪ ಮೊಳಗಲಿದ್ದು ಅಯೋಧ್ಯೆಯಲ್ಲಿ ಮಂದಿರ ಲೋಕಾರ್ಪಣೆ ಮಂದಿರದೊಳಗೆ ಪ್ರಭು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಯಂತಹ ಪವಿತ್ರ ಕಾರ್ಯ ಜರುಗುತ್ತಿದ್ದು ಈ ಹಿನ್ನೆಲೆಯಲ್ಲಿ ಹಿಂದುಗಳ ಪ್ರತಿ ಮನೆಗೆ ತೆರಳಿ ಮಾಹಿತಿ ನೀಡಿ ಅಂದು ಪ್ರತಿ ಮನೆಗಳ ಮುಂದೆ ಹಣತೆ ಬೆಳಗುತ್ತಿರಲಿ, ಆಯಾ ಮನೆಗಳ ವ್ಯಾಪ್ತಿಯ ದೇವಸ್ಥಾನಗಳಿಗೆ ಹಿಂದುಗಳು ಕುಟುಂಬ ಸಹಿತ ತೆರಳಿ ಪೂಜೆ ಸಲ್ಲಿಸಲಿ. ಭಜನೆ,ಕೀರ್ತನೆ,ಪಾರಾಯಣ ಮುಂತಾದ ಧಾರ್ಮಿಕ ಆಚರಣೆಯೊಂದಿಗೆ ಆ ದಿನವನ್ನು ಮಂಗಳ ಮಯವಾಗಿಸೋಣ ಎಂಬ ಸಂದೇಶ ಸಾರುವ ಕಾರ್ಯ ಪ್ರಾರಂಭಿಸಲಾಯಿತು.

ಗ್ರಾಮದೇವಿ ಮಡಿಲಲ್ಲಿ ಅಕ್ಷತೆ,ಆಹ್ವಾನ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿ ಅಭಿಯಾನ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ, ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ನಾಗರಿಕ ವೇದಿಕೆ ಅಧ್ಯಕ್ಷ ರಾಮುನಾಯ್ಕ್, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ್ ಹೆಗಡೆ, ತಾಲೂಕು ಪಂಚಾಯತ ಮಾಜಿ ಅಧ್ಯಕ್ಷೆ ಭವ್ಯಾ ಶೆಟ್ಟಿ, ಪ.ಪಂ ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಪಟ್ಟಣ ಪಂಚಾಯತ ಸದಸ್ಯರಾದ ಶ್ಯಾಮಿಲಿ ಪಾಟಣ್ಕರ್, ಸೋಮೇಶ್ವರ ನಾಯ್ಕ್, ಪುಷ್ಪಾ ನಾಯ್ಕ್, ಪ್ರಮುಖರಾದ ನಮಿತ ಬೀಡಿಕರ್, ರಜನಿ ಚಂದ್ರಶೇಖರ್, ಅನಂತ ಗಾಂವ್ಕರ್, ಗಜಾನನ ನಾಯ್ಕ್, ಗಜು ನಾಯ್ಕ್ ತಳ್ಳಿಗೆರೆ, ನಾಗರಾಜ್ ಮದ್ಗುಣಿ, ಜಗನ್ನಾಥ ರೇವಣ್ಕರ್, ಪ್ರತಾಪ್ ರವೀಂದ್ರನಗರ, ಸುಜು ಮರಾಠಿ, ಲೋಕೇಶ್ ಬಿಡೀಕರ್, ಇನ್ನಿತರ ಹಿಂದೂ ಭಾಂದವರು ಪಾಲ್ಗೊಂಡಿದ್ದರು.



ಪಟ್ಟಣದ ವಿವಿಧ ದೇವಾಲಯಗಳಲ್ಲಿಯು ಸಹ ಅಕ್ಷತಾ ಅಭಿಯಾನದ ಪ್ರಾರಂಭ ಪೂಜೆ ನೆರವೇರಿತು.
ಪೂಜೆಯ ನಂತರ ಕೆಲವು ಮನೆಗಳಿಗೆ ಸಾಂಕೇತಿಕವಾಗಿ ಅಕ್ಷತೆ ಆಹ್ವಾನ ಪತ್ರಿಕೆ ನೀಡಿ 22 ರಂದು ನಡೆಸಬೇಕಾದ ಕಾರ್ಯಗಳ ಕುರಿತು ಜಾಗೃತಿ ಮಾಡಲಾಯಿತು.




ಆತ್ಮೀಯ ಓದುಗ ಸ್ನೇಹಿತರೆ. ನಿಮ್ಮ ಸಹಕಾರ ಸದಾ ಹೀಗೆ ಇರಲಿ ಯಲ್ಲಾಪುರ ನೆಲದ ಹಿರಿಮೆ ಗರಿಮೆಗಳ ಸೌಂದರ್ಯ ಆದರ್ಶಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ಆರೋಗ್ಯ, ಪರಿಸರ ಇನ್ನಿತರ ವಿಷಯಗಳ ಬಗ್ಗೆ ತಮಗೆ ಸುದ್ದಿ ರೂಪದಲ್ಲಿ ತಲುಪಿಸುವ ಕಾರ್ಯ ಮಾಡುತ್ತಿದೆ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್. ಇದೀಗ ಹೊಸತನದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಧ್ಯಾತ್ಮ ಕಾರ್ಯಕ್ಕೆ ಒತ್ತು ಕೊಡುತ್ತಿದೆ ನಿಮ್ಮೆಲ್ಲರ ಸಹಕಾರವಿರಲಿ. ಶ್ಯಾಮಲಾ ನಾಗೇಶ್, ಪ್ರದಾನ ಸಂಪಾದಕಿ, ” ಪ್ರತಿಧ್ವನಿ “
Prathidvani Yellapura