
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕಾಮಗಾರಿ ಟೆಂಡರ್ ನಲ್ಲಿ ಎಸ್.ಸಿ/ಎಸ್.ಟಿ ವರ್ಗಕ್ಕೆ ಕಾಮಗಾರಿಯಲ್ಲಿ ಮೀಸಲಿಡದ ಕುರಿತು ಆಕ್ಷೇಪಿಸಿ ಬುಧವಾರ ಯಲ್ಲಾಪುರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಡಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಲ್ಲಾಪುರ ಉಪ ವಿಭಾಗದ ಹರ್ಷಾಬಾನು ಐ.ಎಫ್.ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಸತ್ಯನ್.ಬಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗು ಸದಸ್ಯರನ್ನೊಡಗೂಡಿ ಟೆಂಡರ್ ಪ್ರಕ್ರಿಯೆಯಲ್ಲಿನ ಸಮಸ್ಯೆಗಳ ಕುರಿತು ಅರಣ್ಯ ಇಲಾಖೆಯ ಗಮನ ಸೆಳೆದರು.

ಕರ್ನಾಟಕ ಘನ ಸರ್ಕಾರದ ಆದೇಶದಂತೆ ಸರ್ಕಾರದ ಕಾಮಗಾರಿಗಳಲ್ಲಿ 24.10% ಮೊತ್ತದ ಕಾಮಗಾರಿಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಿರಿಸಬೇಕಿದ್ದು ಅರಣ್ಯ ಇಲಾಖೆ ಕರೆದಿರುವ ಟೆಂಡರ್ ನಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿ ಸ್ವೀಕರಿಸಿದ ಡಿ.ಎಫ್.ಒ ಹರ್ಷಾಬಾನು ಸಕಾರಾತ್ಮಕವಾಗಿ ಸ್ಪಂದಿಸಿ ನಿಮ್ಮ ಮನವಿಯ ಕುರಿತು ಪರಿಶೀಲಿಸುವುದಾಗಿಯು ಮತ್ತು ಟೆಂಡರ್ ಕಮಿಟಿಯ ಗಮನಕ್ಕೆ ತರುವುದಾಗಿಯು ತಿಳಿಸಿದರು. ಸಾಮಾಜಿಕ ನ್ಯಾಯ ಕಾಪಾಡುವ ನಿಟ್ಟಿನಲ್ಲಿ ಏನೆಲ್ಲ ಪ್ರಯತ್ನ ಸಾಗಬೇಜೊ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಿವಿಲ್ ಗುತ್ತಗೆದಾರರ ಸಂಘದವರಿಗೆ ತಿಳಿಸಿದರು.

ನಂತರ ಟೆಂಡರ್ ಕಮಿಟಿಯ ಮುಖ್ಯಸ್ಥರಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಮಾರುತಿ ಬೋವಿವಡ್ಡರ್, ಗುತ್ತಿಗೆದಾರ ಸಂಘದ ತಾಲೂಕು ಅಧ್ಯಕ್ಷ ಸತ್ಯನ್. ಬಿ, ಪ್ರಮುಖರಾದ ಸಂತೋಷ್ ನಾಯ್ಕ್ ಕೋಳಿಕೇರಿ, ದ್ಯಾಮಣ್ಣ ಬೋವಿವಡ್ಡರ್, ಕುಪ್ಪಯ್ಯ ಪೂಜಾರಿ, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
Prathidvani Yellapura