

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ : ಕಾಡು ಪ್ರಾಣಿಗಳಿಂದ ರೈತರ ಬೆಳೆಗೆ ಹಾನಿಯಾಗುತಿರುವ ಕುರಿತು, ಜಯ ಕರ್ನಾಟಕ ತಾಲೂಕಾ ಸಂಘಟನೆ, ರೈತರಿಂದ, ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಕಿರವತ್ತಿಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಿರವತ್ತಿ ವಲಯ ಪ್ರದೇಶವು ದಟ್ಟರಣ್ಯದಿಂದ ಕೂಡಿರುತ್ತದೆ. ಕಾರಣ ಈ ಭಾಗದ ನಿವಾಸಿಗಳೆಲ್ಲರೂ ಬಹುತೇಕವಾಗಿ ಕೃಷಿಕರೇ ಆಗಿದ್ದು ಕೃಷಿ ಚಟುವಟಿಕೆಯಿಂದ ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ,

ಕಿರವತ್ತಿ ವಲಯ ವ್ಯಾಪ್ತಿಯಲ್ಲಿ ಬರುವ ಕಿರವತ್ತಿ, ಮದನೂರ, ಹುಣಶೆಟ್ಟಿಕೊಪ್ಪ, ಖಂಡ್ರಾನಕೊಪ್ಪ,ಮಾದೇವಕೊಪ್ಪ, ಹುಲಗೋಡ ಹಾಗೂ ಇತರೇ ಪ್ರದೇಶದಲ್ಲಿ ಇರುವ ಕೃಷಿ ಭೂಮಿಗಳಿಗೆ ಕಾಡು ಪ್ರಾಣಿಗಳು ನುಗ್ಗಿ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಸಿದ ಫಸಲನ್ನು ತಿಂದುಹಾಕುವುದರ ಜೊತೆಯಲ್ಲಿ ಅವುಗಳನ್ನು ತುಳಿದು ಹಾಕಿ ನಾಶಪಡಿಸುತ್ತಿರುವ ಸಂಗತಿ ನಮ್ಮ ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಕಾರಣ ಈ ದಿಶೆಯಲ್ಲಿ ರೈತರು ಸಂಕಷ್ಟಕ್ಕೋಳಗಾಗುತ್ತಿರುವ ಜೊತೆಯಲ್ಲಿ ಹಾನಿಯನ್ನು ಅನುಭವಿಸುವಂತೆ ಆಗಿರುತ್ತದೆ.
ಈ ನಿಟ್ಟಿನಲ್ಲಿ ರೈತರು ಎದುರಿಸುತ್ತಿರುವ ಸಮಸ್ಯಗೆ ಶಾಶ್ವತ ಪರಿಹಾರ ಒದಗಿಸಲು ಸರ್ವೆ ಕಾರ್ಯ ನಡೆಸಿ ರೈತರ ಕೃಷಿ ಭೂಮಿಗಳಿಗೆ ಕಾಡು ಪ್ರಾಣಿಗಳು ನುಗ್ಗದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಕೃಷಿಕರಿಗೆ ಇಲಾಖೆಯಿಂದ ಉಚಿತವಾಗಿ ಸೂಕ್ತ ಪರಿಕರಗಳನ್ನು ಹಾಗೂ ಸಾಮಗ್ರಿಗಳನ್ನು ವಿತರಿಸುವಂತೆ ಹಾಗೂ ಕೃಷಿಕರ ಬೆಳೆ ಹಾನಿಗೆ ತಮ್ಮ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಸಂಘಟನೆಯ ಅಧ್ಯಕ್ಷ ವಿಲ್ಸನ್ ಆರ್.ಫರ್ನಾಂಡಿಸ್,
ತಾಲೂಕು ಎಸ್.ಸಿ/.ಎಸ್.ಟಿ ಅಧ್ಯಕ್ಷ ಚನ್ನಪ್ಪ ಡಿ ಹರಿಜನ, ಸಂಚಾಲಕ ಸುಭಾಸ ಡಿ. ಹರಿಜನ, ಡಿ.ಎಸ್.ಎಸ್.ತಾಲೂಕಾ ಉಪಾಧ್ಯಕ್ಷ ಅಶೋಕ ಬಿ.ಹೆಚ್. ರೈತ ಮುಖಂಡರಾದ ಹರುನ್ ಶೇಖ್, ಶೌಕತ ಪಟೇಲ, ಮಹ್ಮದ ಅಲಿ ಪಟೇಲ, ಆಲೆಕ್ಸ್ ಸಿದ್ದಿ, ಜಾಫರ ಒಂಟಿ, ಇಮಾಮ ಹುಸೇನ ಕಣವಿ, ಗಣಪತಿ ಶಿರನಾಳಕರ, ಕೃಷ್ಣಾ ಲಮಾಣಿ, ಮತ್ತು ಎಲ್ಲಾ ಘಟಕ ಅಧ್ಯಕ್ಷರು ಹಾಗೂ ಸದ್ಯಸರು ಉಪಸ್ಥತಿರಿದ್ದ್ದರು.
.
Prathidvani Yellapura