


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ತಾಲೂಕಿನ ತಟಗಾರ ಹಂಗಾರಿಮನೆ ರಸ್ತೆ ರಾಡಿಯಾಗಿ ಜನ ಸಂಚಾರಕ್ಕೆ ತೊಡಕಾಗಿದೆ. ಚುನಾವಣೆ ಸಂದರ್ಭದಲ್ಲಿ ಮಣ್ಣು ಹಾಕಿ ನಿರ್ಮಾಣ ಮಾಡಿದ ರಸ್ತೆ ಕೆಸರು ಗದ್ದೆಯಾಗಿದೆ ಓಡಾಟಕ್ಕೆ ಸಮಸ್ಯೆಯಾಗಿದೆ ಎಂಬುದು ಕೆಲವರ ಮಾತಾಗಿದೆ.
ನಿಜಕ್ಕು ಅಲ್ಲಿ ರಸ್ತೆ ಪರಿಸ್ಥಿತಿ ಗಂಭೀರವಾಗಿರುವುದಂತೂ ಸತ್ಯ ಅದು ಬೇಕೆಂದೇನು ಆದದ್ದಲ್ಲ ಬದಲಾಗಿ ಚುನಾವಣೆ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಬಳಿ ಅಳಲು ತೋಡಿಕೊಂಡ ಕೆಲವು ಗ್ರಾಮಸ್ಥರು ರಸ್ತೆ ಸರಿಪಡಿಸಿಕೊಡಲು ಕೇಳಿದ್ದರು ಅದರಿಂದ ಜನರ ಓಡಾಟಕ್ಕೆ ಸದ್ಯಕ್ಕೆ ಅನುಕೂಲವಾಗಲೆಂದು ಹೆಬ್ಬಾರ್ ತಾತ್ಕಾಲಿಕವಾಗಿ ಆ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಮಣ್ಣು ಹಾಕಿಸಿ ಲೆವೆಲ್ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಆಗ ರಸ್ತೆಯ ಫೋಟೋ ಹಾಕಿ ಚಂದವಾದ ರಸ್ತೆ ಎಂದೆಲ್ಲಾ ಬರೆದುಕೊಂಡು ಸಂಭ್ರಮಿಸಲಾಗಿತ್ತು.
ಸಹಜವಾಗಿ ಇದೀಗ ಮಳೆ ಪ್ರಾರಂಭವಾಗಿದೆ ಹಾಕಿದ್ದ ಮಣ್ಣು ಕೆಸರಾಗಿ ರಸ್ತೆ ತುಂಬ ರಾಡಿಯಾಗಿದೆ ಅದನ್ನ ಸರಿಪಡಿಸಬೇಕಿದೆ .

ಇದೇ ಸ್ಥಳದಿಂದ ಮುಂದೆ ಮತ್ತೆ ರಸ್ತೆ ಕಾಮಗಾರಿ ನಡೆಸಲಾಗಿದ್ದು. ಇದು ಆನಗೋಡು ಪಂಚಾಯ್ತದ 15 ನೆ ಹಣಕಾಸು ಯೋಜನೆ ಅಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಕೆಲವು ಗ್ರಾಮಸ್ಥರು ನೇರವಾಗಿ ಪತ್ರಿಕೆಯೊಂದಿಗೆ ಮಾತನಾಡಿ ಈ ರಸ್ತೆ ಕಾಮಗಾರಿ ನಾವು ಹೇಳಿದಂತೆ ಪಂಚಾಯತದಿಂದ ಮಾಡಿಕೊಟ್ಟಿದ್ದಾರೆ ಮೊದಲು ಕಿರಿದಾದ ರಸ್ತೆ ಇತ್ತು ಇದೀಗ ಎರಡುಬದಿಯಲ್ಲಿ ಸಾಧ್ಯವಾದಷ್ಟು ರಸ್ತೆ ಅಗಲ ಮಾಡಲಾಗಿದೆ. ಸದ್ಯ ಮಳೆ ಸಣ್ಣ ಪ್ರಮಾಣದಲ್ಲಿ ಬೀಳುತ್ತಿದ್ದು ಕೆಸರಾಗಿದೆ ದೊಡ್ಡದಾದ ಮಳೆ ಬಿದ್ದರೆ ಎಲ್ಲವು ಸರಿ ಹೋಗಲಿದೆ. ನಮಗೆ ಬೇಕಾದ ಹಾಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ದ ಪಡಿಸಿದ್ದು ಸದ್ಯದ ಸಮಸ್ಯೆಯನ್ನು ನಾವೆಲ್ಲರೂ ಗ್ರಾಮಸ್ಥರು ಕೂಡಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ನಾಗೇಶ್ ಗಣಪತಿ ಭಟ್, ಮಂಜುನಾಥ ಅನಂತ ಭಟ್ಟ ಅನಂತ ಮಹಾಬಲೇಶ್ವರ ಭಟ್ಟ, ನಾರಾಯಣ ಹೇಳಿದರು.

ಪಂಚಾಯತದ ಠರಾವಿನ ಮೂಲಕ 15 ನೆ ಹಣಕಾಸಿನ ಅಡಿಯಲ್ಲಿ ರಸ್ತೆ ಕಾಮಗಾರಿ ಮಾಡಿದ್ದು ಇದಕ್ಕೆ ಹೊಂದಿಕೊಂಡಿರುವ ನೂರು ಮೀಟರ್ ರಸ್ತೆ ಗ್ರಾಮಸ್ಥರು ಶಾಸಕರಬಳಿ ಚುನಾವಣೆಯ ಸಂದರ್ಭದಲ್ಲಿ ಕೇಳಿಕೊಂಡದ್ದರಿಂದ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆಗೆ ಬಿದ್ದ ಗುಂಡಿಗಳನ್ನು ಮಣ್ಣಿಂದ ಮುಚ್ಚಿ ಸರಿ ಮಾಡಿಸಿದ್ದರು ಇದೀಗ ಮಳೆಯಾಗಿದ್ದು ಸಹಜವಾಗಿ ಕೆಸರಾಗಿದೆ ಇದನ್ನು ಸಹ ಪಂಚಾಯತ ವತಿಯಿಂದ ಸರಿಪಡಿಸಿಕೊಡಲಾಗುವುದು.
ಪರಮೇಶ್ವರ ಗಾಂವ್ಕರ್
ಆನಗೋಡು ಪಂಚಾಯತ ಅಧ್ಯಕ್ಷ
Prathidvani Yellapura