
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಹಂಸನಗದ್ದೆ ಪ್ರೌಢಶಾಲೆಯ ಅವಳಿ-ಜವಳಿ ಅಕ್ಕ-ತಂಗಿಯರಾದ ಸ್ಪೂರ್ತಿ ರಾಜೇಶ ಗಾಮದ ಹಾಗೂ ಸ್ಪಂದನಾ ರಾಜೇಶ ಗಾಮದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ಸಮಾನ ಅಂಕ ಪಡೆದಿದ್ದು 625ಕ್ಕೆ ತಲಾ 612 ಅಂಕ ಗಳಿಸಿರುವುದು ವಿಶೇಷವಾಗಿದೆ.
ತಾಲೂಕಿನಲ್ಲಿ 600 ಕ್ಕೂ ಅಧಿಕ ಅಂಕ ಪಡೆದ 20 ವಿದ್ಯಾರ್ಥಿಗಳಲ್ಲಿ 8 ಮತ್ತು 9 ನೇ ಸ್ಥಾನದಲ್ಲಿರುವ ಸ್ಪೂರ್ತಿ ಮತ್ತು ಸ್ಪಂದನಾ ತಾಲೂಕಿಗೆ ಹಾಗೂ ಕಲಿತ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿರುತ್ತಾರೆ.




