Breaking News

ಯಲ್ಲಾಪುರದಲ್ಲಿ ಸುರಿದ ಬಾರಿ ಮಳೆ ಮುಂದೂಡಿದ ವೈಪಿಎಲ್ ಫೈನಲ್ ಪಂದ್ಯ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಬುಧವಾರ ರಾತ್ರಿ ಬಾರಿ ಮಳೆ ಸುರಿದಿದ್ದು ಕಳೆದ ಒಂದು ತಿಂಗಳಿನಿಂದ ವೈಭವದಿಂದ ನಡೆಯುತ್ತಿದ್ದ ವೈಪಿಎಲ್ ಚುಟುಕು ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಮ್ಯಾಚ್ ಜ,7ರ ರವಿವಾರಕ್ಕೆ ಮುಂದೂಡಲಾಗಿದೆ.
ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಆಯೋಜನೆ ವಿಶಾಲ್ ಶಾನಬಾಗ್ ಅವರ ಹನ್ಸ್ ನ್ಯಾಚುರಲ್‌ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಬಹಳ ಅದ್ದೂರಿಯಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಪಂದ್ಯಾವಳಿಗೆ ಕಡಿಮೆ ಇಲ್ಲದಂತೆ ನಡೆಸಿಕೊಂಡು ಬಂದ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಯಲ್ಲಾಪುರ ತಾಲೂಕಿನ ಕ್ರಿಕೆಟ್ ಆಟಕ್ಕೆ ಹೊಸ ಭಾಷ್ಯ ಬರೆದ ಆಯೋಜನೆಯಾಗಿತ್ತು.


ಎಂಟು ಫ್ರಾಂಚೈಸ್ ಗಳ ಎಂಟು ತಂಡಗಳ ನಡುವೆ ಕಳೆದೊಂದು ತಿಂಗಳಿಂದ ನಡೆದ ಪಂದ್ಯ ಉತ್ತಮ ಗುಣಮಟ್ಟದ ಲೈವ್ ಕವರೇಜ್ ನೊಂದಿಗೆ ಸಣ್ಣ ಯಲ್ಲಾಪುರ ತಾಲೂಕಿನ ಕ್ರಿಕೆಟ್ ಆಟದ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ್ದು ಅದ್ಬುತವಾಗಿತ್ತು. ನಿತ್ಯ ನಡೆಯುತ್ತಿದ್ದ ಲೀಗ್ ಪಂದ್ಯಗಳನ್ನು ವೀಕ್ಷಿಸಿದ ಮಂದಿ ಆಯೋಜಕರಿಗೆ ಶಹಬ್ಬಾಸ್ ಹೇಳಿದ್ದರು.


ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಶ್ರಮ ವಿಶಾಲ್ ಶಾನಬಾಗ್ ಉತ್ಸಾಹ ಯಲ್ಲಾಪುರ ಕ್ರಿಕೆಟ್ ಗೆ ಉತ್ತಮ ಹೆಸರು ತಂದುಕೊಟ್ಟಿತ್ತು ಮಳೆ ಸುರಿದು ಫೈನಲ್ ಪಂದ್ಯದ ಉತ್ಸಾಹಕ್ಕೆ ಮಳೆ ತಾತ್ಕಾಲಿಕ ತಡೆ ನೀಡಿದೆ ಹೊರತು ಪಂದ್ಯ ಯಥಾ ಪ್ರಕಾರ ರವಿವಾರ ನಡೆಯಲಿದೆ ಎಂದು ಪಂದ್ಯಾವಳಿ ಆಯೋಜಕರು ಮತ್ತು ಪ್ರಾಯೋಜಕರು ಕರಾವಳಿ ಮುಂಜಾವಿಗೆ ತಿಳಿಸಿದ್ದಾರೆ.
ಫೈನಲ್ ಪಂದ್ಯಾವಳಿ ವೀಕ್ಷಿಸಿ ಆಟಗಾರರಿಗೆ ಶುಭಕೋರಲು ಆಗಮಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್ ಮುಂದೂಡಲಾದ ಫೈನಲ್ ಪಂದ್ಯದಲ್ಲಿ ಮತ್ತೆ ಪಾಲ್ಗೊಳ್ಳಲಿರುವುದಾಗಿ ತಿಳಿದು ಬಂದಿದೆ.

ಮಧ್ಯಪ್ರದೇಶ ಸರ್ಕಾರದಿಂದ ಇತ್ತೀಚೆಗೆ ತಾನ್ ಸೇನ್ ಪ್ರಶಸ್ತಿ ಪುರಸ್ಕೃತರಾದ ಹಾಸಣಗಿಯ ಪ್ರಖ್ಯಾತ ಸಂಗೀತ ವಿದ್ವಾಂಸರಾದ ಪಂ, ಗಣಪತಿಭಟ್ ಹಾಸಣಗಿ ಅವರಿಗೆ ಸನ್ಮಾನಿಸಲಾಗುವುದು ಎಂದು ಪ್ರಾಯೋಜಕ ಸಂಸ್ಥೆ ಹನ್ಸ್ ನ್ಯಾಚುರಲ್ ಮಾಲಿಕ ವಿಶಾಲ್ ಶಾನಬಾಗ್ ತಿಳಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *