

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ- ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಮತ್ತು ಶ್ರೀರಾಮಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮ ಜರುಗುತ್ತಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲೂಕಿನಾದ್ಯಂತ ಮತ್ತು ಪಟ್ಟಣದಲ್ಲಿ ಜ,5 ಶುಕ್ರವಾರದಿಂದ ಅಂದರೆ ಇಂದಿನಿಂದ ಹಿಂದುಗಳ ಪ್ರತಿ ಮನೆಗೆ ಆಯಾ ಭಾಗದ ಪ್ರಮುಖರು ಸ್ವಯಂ ಸೇವಕರು ತೆರಳಿ ಅಕ್ಷತೆ ಇತ್ತು ಆಹ್ವಾನ ಪತ್ರಿಕೆ ನೀಡಿ ಕೇಸರಿ ಧ್ವಜ ನೀಡಿ ಗೌರವದ ಕರೆ ನೀಡುವ ಪರಮ ಪವಿತ್ರ ಕಾರ್ಯವನ್ನು ಈ ನೆಲದ ಶಕ್ತಿ ಮಾತೆ ಗ್ರಾಮದೇವಿ ಸಾನಿದ್ಯದಲ್ಲಿ ಪೂಜೆಯೊಂದಿಗೆ ಶುಭಾರಂಭಿಸಲಾಗುತ್ತಿದೆ. ಯಾವ ಮನೆಯನ್ನು ಬಿಡದೆ ಅಕ್ಷತೆ ತಲುಪಿಸಿ ಆಹ್ವಾನಿಸುವ ಸಂಕಲ್ಪ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ ಪ್ರತಿಕ್ರಿಯಿಸಿದ್ದಾರೆ.

ಅವರು ಪಟ್ಟಣದ ತಿಲಕ್ ಚೌಕ್ ನಲ್ಲಿ ಗ್ರಾಮದೇವಿ ವಾಡ್೯ ವ್ಯಾಪ್ತಿಯ ಅಕ್ಷತಾ ಅಭಿಯಾನದ ಕುರಿತು ಮಾಹಿತಿ ನೀಡುವ ಸಭೆ ನಡೆಸಿ ಅಕ್ಷತೆ,ಆಹ್ವಾನ ಪತ್ರಿಕೆ ಪ್ರಮುಖರಿಗೆ ಹಸ್ತಾಂತರಿಸಿ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಲುವಾಗಿ ದೇಶಾದ್ಯಂತ ಹಣ ಸಂಗ್ರಹಿಸಿ ನೀಡಲಾಗಿದೆ. ಅದರಂತೆ ಈ ನೆಲದ ಪ್ರತಿ ಹಿಂದುಗಳ ಮನೆಗೆ ತೆರಳಿ ಅಕ್ಷತೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿ ಲೋಕಾರ್ಪಣೆ ದಿನವನ್ನು ಅವಿಸ್ಮರಣಿಯವಾಗಿಸಬೇಕಿದೆ ಎಂದು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ ಹೇಳಿದರು

ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಯಾವುದೆ ಒಂದು ದೇವಸ್ಥಾನ ಗಳು ಬಿಡದಂತೆ ವಿಶೇಷ ಪೂಜೆ ಭಜನೆ ಆಯೋಜಿಸಿ ರಾಮ ಮಂದಿರ ಲೋಕಾರ್ಪಣೆ ದಿನವನ್ನು ಸಾರ್ಥಕವಾಗಿಸಬೇಕಿದೆ ಎಂದು ಶಕ್ತಿ ಗಣಪತಿ ದೇವಸ್ಥಾನ ಪ್ರಮುಖ ಅನಂತ ಗಾಂವ್ಕರ್ ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಿರೀಷ್ ಪ್ರಭು, ಶ್ಯಾಮಿಲಿ ಪಾಟಣ್ಕರ್, ಆದಿತ್ಯ ಗುಡಿಗಾರ್, ನಮಿತಾ ಬಿಡೀಕರ್, ಪ್ರದೀಪ್ ಯಲ್ಲಾಪುರಕರ, ರಾಜೇಶ್, ಸಿದ್ದಾರ್ಥ ಶಂಕರ ಬದ್ದಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿ ಆ ದಿನವನ್ನು ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಧಾರ್ಮಿಕ ಆಚರಣೆಯೊಂದಿಗೆ ಸಂಭ್ರಮಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಮಾಡಲಾಯಿತು.



Prathidvani Yellapura